ಕರಾವಳಿ

ಸಿ.ಐ.ಎಸ್.ಎಫ್, ಎನ್.ಎಂ.ಪಿ.ಟಿ ವತಿಯಿಂದ 1500 ಗಿಡಗಳನ್ನು ನಡೆವ ಮೂಲಕ ವನಮಹೋತ್ಸವಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು ಜುಲೈ 11 : ವನಮಹೋತ್ಸವ ಪ್ರಯುಕ್ತ ಎನ್‍ಎಂಪಿಟಿಯ ಮೀನಕಲಿಯ ಸರ್ಕಾರಿ ಪ್ರೌಢಶಾಲೆ ಮತ್ತು ಪಣಂಬೂರು ಕೇಂದ್ರೀಯ ವಿದ್ಯಾಲಯ ಎನ್ ಎಂಪಿಟಿಯಲ್ಲಿ ಸಿಐಎಸ್‍ಎಫ್ ಡೆಪ್ಯುಟಿ ಕಮಾಂಡೆಂಟ್ ಶ್ರೇಯಾಂಶ್ ವರ್ಮಾ ಅವರ ನೇತೃತ್ವದಲ್ಲಿ 1,500 ಸಸಿಗಳನ್ನು ನೆಡಲಾಯಿತು.

ದಕ್ಷಿಣ ವಲಯದಲ್ಲಿ ಒಂದು ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಉದ್ದೇಶವಿದ್ದು, ಪರಿಸರ ಸಂರಕ್ಷಣೆಗೆ ಸಿಐಎಸ್‍ಎಫ್‍ನ ಕೈಜೋಡಿಸುವ ನಿಟ್ಟಿನಲ್ಲಿ ವನಮಹೋತ್ಸವ ಆಚರಿಸಲಾಯಿತು.

ಸಿ.ಐ.ಎಸ್.ಎಫ್, ಎನ್.ಎಂ.ಪಿ.ಟಿ, ಘಟಕದ ವತಿಯಿಂದ ಸರ್ಕಾರಿ ಶಾಲೆ ಮಿನಕಲಿಯ, ಪಣಂಬೂರು ಕೇಂದ್ರೀಯ ಶಾಲೆ, ಎನ್.ಎಂ.ಪಿ.ಟಿ. ಸ್ಟೇಡಿಯಂ, ಪಣಂಬೂರು ಆರ್.ಸಿ.ಹೆಚ್.ಡಬ್ಲ್ಯೂ ಕಾಲೋನಿ, ಇನ್ನೂ ಇತರೆ ಕಡೆಗಳಲ್ಲಿ 1500 ಗಿಡಗಳನ್ನು ನಡೆವ ಮೂಲಕ ವನಮಹೋತ್ಸವ ಕಾರ್ಯಕ್ರಮವು ಜುಲೈ 1 ರಿಂದ 7 ರವೆರಗೆ ನಡೆಯಿತು.

ಕಾರ್ಯಕ್ರಮದಲ್ಲಿ ಕಂಪನಿ ಕಮಾಂಡರ್ ಅಮಿತ್ ಕುಮಾರ್, ಸಿ.ಐ.ಡಬ್ಲ್ಯೂ ಇನ್ ಚಾರ್ಜ್ ಅಮಿತ್ ಬೋರಾ ಮತ್ತಿತರರು ಉಪಸ್ಥಿತರಿದ್ದರು.

Comments are closed.