ಕರಾವಳಿ

ಕೊರಗ ಹಾಗೂ ಮಲೆಕುಡಿಯ ಜನಾಂಗದವರಿಗೆ ನೀಡುವ ಪೌಷ್ಟಿಕ ಆಹಾರ ಖರೀದಿ ಮಾಡಿದ್ರೆ ಹುಷಾರ್!

Pinterest LinkedIn Tumblr

ಉಡುಪಿ: 2018-19 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕೊರಗ ಹಾಗೂ ಮಲೆಕುಡಿಯ ಜನಾಂಗದವರಿಗೆ ಜುಲೈ 2018 ರಿಂದ ಡಿಸೆಂಬರ್ 2018 ರ ವರೆಗೆ ಪೌಷ್ಟಿಕ ಆಹಾರವನ್ನು ಐ.ಟಿ.ಡಿ.ಪಿ ಇಲಾಖೆಯ ಮೂಲಕ ವಿತರಿಸುತ್ತಿದ್ದು, ಈ ಆಹಾರ ಸಾಮಾಗ್ರಿಗಳನ್ನು ಖಾಸಗಿ ವ್ಯಕ್ತಿಗಳಿಗೆ ಹಾಗೂ ಅಂಗಡಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿರುತ್ತದೆ.

ಆದ್ದರಿಂದ ಕೊರಗ ಹಾಗೂ ಮಲೆಕುಡಿಯ ಜನಾಂಗದವರಿಗೆ ಸರಕಾರದಿಂದ ಪೂರೈಕೆ ಮಾಡಿದ ಆಹಾರ ಸಾಮಾಗ್ರಿಗಳನ್ನು ಖರೀದಿಸುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಖರೀದಿಸುವವರ ಮೇಲೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.

Comments are closed.