ರಾಷ್ಟ್ರೀಯ

500, 2000 ಮುಖಬೆಲೆಯ ನಕಲಿ ನೋಟ್ ಮುದ್ರಣ : ಮಲಯಾಳಂ ನಟಿ ಬಂಧನ

Pinterest LinkedIn Tumblr


ಕೇರಳ: 500 ಮತ್ತು 2000 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿದ ಆರೋಪದ ಮೇಲೆ ಮಲಯಾಳಂ ಕಿರುತೆರೆ ನಟಿ ಸೂರ್ಯ ಸಸಿಕುಮಾರ್, ಆತನ ಸೋದರಿ ಶ್ರುತಿ ಹಾಗೂ ತಾಯಿ ರಮಾದೇವಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಕೊಲ್ಲಂನ ಮನೈಕುಲಂಗರದಲ್ಲಿರುವ ತಮ್ಮ ಮನೆಯಲ್ಲಿ ಕಂಪ್ಯೂಟರ್, ಕಲರ್ ಪ್ರಿಂಟರ್ ಹಾಗು ಬಾಂಡ್ ಪೇಪರ್ ಬಳಸಿ ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದರು. ಬಂಧಿತರಿಂದ 57 ಲಕ್ಷ ಮೌಲ್ಯದ ನಕಲಿ ನೋಟು ಹಾಗೂ ಇನ್ನಿತರೆ ಸಲಕರಣೆಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಡಿವೈಎಸ್ಪಿ ಎನ್.ಸಿ.ರಾಜ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಕೃಷ್ಣಕುಮಾರ, ಲಿಯೋ ಸ್ಯಾಮ್, ಮತ್ತು ರವೀಂದ್ರನ್ ಎಂಬವರನ್ನು ಬಂಧಿಸಿದ್ದರು. ವಿಚಾರಣೆಯ ವೇಳೆ ಬಂಧಿತರು ನೀಡಿದ ಮಾಹಿತಿಯ ಆಧಾರದ ಮೇಲೆ ಈ ನಟನ ಬಂಧನವಾಗಿದೆ.

Comments are closed.