ಕರಾವಳಿ

ಮುಂಬಾಯಿಯಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಶಿಲೆಯ ವಿಗ್ರಹ ಪ್ರತಿಷ್ಠಾಪನೆ

Pinterest LinkedIn Tumblr

ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಗುರುವರ್ಯರಾದ ಪರಮ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ನೂತನವಾಗಿ ನಿರ್ಮಿಸಲಾದ ಅಮೃತ ಶಿಲೆಯ ವಿಗ್ರಹದ ಪ್ರತಿಷ್ಠಾಪನೆಯು ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಮುಂಬೈಯಲ್ಲಿರುವ ವಾಲ್ಕೆಶ್ವರ ಕಾಶೀಮಠದಲ್ಲಿ ನೆರವೇರಿತು.

ನೂತನ ಶಾಸಕ ವೇದವ್ಯಾಸ್ ಕಾಮಾತ್‌ರಿಗೆ ಸಮ್ಮಾನ :

ಇದೇ ವೇಳೆ ಮುಂಬೈಯಲ್ಲಿರುವ ವಾಲ್ಕೆಶ್ವರ ಕಾಶೀಮಠದಲ್ಲಿ ಜಿ ಎಸ್ ಬಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕ ಡಿ.ವೇದವ್ಯಾಸ ಕಾಮಾತ್ ಅವರನ್ನು ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಸನ್ಮಾನಿಸಿ ಗೌರವಿಸಲಾಯಿತು.

Comments are closed.