ನಮ್ಮ ತಲೆಯ ಕೂದಲು ಬಿಳಿಯಾಗುವುದನ್ನ ತಡೆಯುವುದು ಬಹಳ ಸುಲಭ ಆದರೆ ಕೆಲವು ವಿಧಾನವನ್ನು ಸರಿಯಾಗಿ ಅನುಸರಿಸಬೇಕಷ್ಟೆ. ನಾವು ನಮ್ಮ ಮನೆಯಲ್ಲೇ ಸುಲಭವಾಗಿ ಸಿಗುವ ಪದಾರ್ಥಗಳನ್ನ ಬಳಸಿಕೊಂಡು ನಮ್ಮ ಬಿಳಿ ಕೂದಲನ್ನ ಕಪ್ಪಾಗಿಸಿಕೊಳ್ಳ ಬಹುದು. ಎನ್ನುತ್ತಾರೆ ತಜ್ಞರು. ಈಗ ನಾವು ಇಲ್ಲಿ ತಿಳಿಸಲಿರುವ ಕೆಲವು ವಿಧಾನಗಳಲ್ಲಿ ನೀವು ಯಾವುದಾದರು ಒಂದನ್ನು ವಾರಕ್ಕೆ ಎರಡು ಬಾರಿಯಾದರೂ ಬಳಸಬೇಕು.
* ಕಾಫಿ ಪುಡಿ ಸಹಾ ನೆರೆತ ಕೂದಲಿನ ಸಮಸ್ಯೆಯನ್ನು ಅದ್ಭುತವಾಗಿ ಹೋಗಲಾಡಿಸುತ್ತದೆ. ಒಂದು ಲೊಟ ನೀರಿನಲ್ಲಿ ಕಾಫಿ ಪುಡಿ ಹಾಕಿ ಕುದಿಸಿ ತಣ್ಣಗಾದ ನಂತರ ತಲೆಗೆ ಹಚ್ಚಿಕೊಂಡು ಮಸಾಜ್ ಮಾಡುತ್ತಾ 30 ನಿಮಿಷಗಳ ನಂತರ ತಲೆಗೆ ಸ್ನಾನ ಮಾಡಬೇಕು.
* ಮೊಟ್ಟೆಯಲ್ಲಿರುವ ಬಿಳಿಭಾಗ ಅಥವಾ ಮಜ್ಜಿಗೆಯೊಂದಿಗೆ ರುಬ್ಬಿದ ಕರಬೇವಿನಸೊಪ್ಪು ಅಥವಾ ಮೆಂತ್ಯೆ ಸೊಪ್ಪಿನ ಪೇಸ್ಟ್ ಅನ್ನು ತಲೆಗೆ ಪ್ಯಾಕ್ ಹಾಕಿಕೊಂಡು 2 ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಇದಕ್ಕೆ ರಾಸಾಯನಿಕಗಳನ್ನು ಹೊದಿರದ ಷಾಂಪೂ ಬಳಸಬೇಕು. ವಾರಕ್ಕೆ 2 ಬಾರಿ ಹೀಗೆ ಮಾಡಿದರೆ ಕ್ರಮೇಣವಾಗಿ ನೆರೆತ ಕೂದಲು ಕಪ್ಪು ಬಣ್ಣಕ್ಕೆ ಬದಲಾಗುತ್ತದೆ ಎನ್ನುತ್ತಾರೆ ತಜ್ಞರು.
* ದಾಸವಾಳದ ಎಲೆಗಳನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಪ್ಯಾಕ್ ತಯಾರಿಸಿಕೊಂಡು ಅದನ್ನು ಕೂದಲಿಗೆ ಹಚ್ಚಿಕೊಂಡು 2 ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಬಿಳಿಕೂದಲಿನ ಸಮಸ್ಯೆಗೆ ಪರಿಹಾರದೊರೆಯುತ್ತದೆ.

Comments are closed.