ಕರಾವಳಿ

ಪೊಲಿಯೋವನ್ನು ಇಡೀ ಲೊಕದ ನಕ್ಷೆಯಿಂದಲೇ ತೆಗೆದವರು ರೊಟೇರಿಯನರು :ರೋಟರಿ ನೂತನ ಗವರ್ನರ್ ರೊ| ಎಂಪಿಎಚ್ ಎಫ್. ರೋಹಿನಾಥ್

Pinterest LinkedIn Tumblr

ಮಂಗಳೂರು : ರೋಟರಿ 3181ಜಿಲ್ಲೆಯ ನೂತನ ಗವರ್ನರ್ ರೊಟೇರಿಯನ್ ಎಂಪಿಎಚ್ ಎಫ್. ರೋಹಿನಾಥ್ ಪಿ. ಪದಗ್ರಹಣ ಕಾರ್ಯಕ್ರಮವು ನಗರದ ಕುಲಶೇಕರದ ಕೊರ್ಡೆಲ್ ಹಾಲ್‌ನಲ್ಲಿ ಇತ್ತೀಚೆಗೆ ಜರುಗಿತು.

ನಿಟ್ಟೆ ವಿನಯ್ ಹೆಗ್ಡೆ ಅವರು ರೋಟರಿ ಸಂಸ್ಥೆಯು 250 ಅಂಗನವಾಡಿಗಳನ್ನು ದತ್ತು ಪಡೆವ ಮಾರ್ಗದರ್ಶಿ ಪತ್ರ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಹೆಗ್ಡೆಯವರು, ಬ್ರಿಟಿಷರು ಒಡೆದಾಳುವುದನ್ನೇ ಬಂಡವಾಳ ಮಾಡಿ ಆಳಿದರು ಮತ್ತು ಅಂಥದ್ದೇ ಶಿಕ್ಷಣವನ್ನೂ ನೀಡಿದರು. ದೇಶಕ್ಕೆ ಸ್ವಾತಂತ್ರ ಲಭಿಸಿದಾಗ ನಾನು ತುಂಬಾ ಆಶಯಗಳನ್ನು ಕಂಡ್ಡಿದ್ದೆ. ಈಗೀಗ ಸಮಾಜದಲ್ಲಿ ಒಡಕು ಮೂಡಿಸಿ ವಿಜ್ರಂಭಿಸುವುದನ್ನು ಕಂಡು ಮರುಗುತ್ತಿದ್ದೇನೆ. ರೋಟರಿಯಂತಹ ಸೇವಾ ಸಂಸ್ಥೆಗಳು ಈ ಒಡಕುಗಳನ್ನು ಮೀರಿ ನಿಂತು ಸಮಾಜ ಸೇವೆಗಾಗಿ ತನ್ನನ್ನು ತಾನು ಮುಡಿಪಿಡಬೇಕು ಎಂದರು.

ಆಂಗನವಾಡಿ ಶಾಲೆಗಳ ಸೌಕರ್‍ಯಗಳನ್ನು ಅಭಿವೃಧ್ದಿಪಡಿಸುವುದು ಸರಿಯಾದ ಕಾರ್‍ಯಕ್ರಮ ಎಂದ ಆವರು, ಎಳೆ ವಯಸ್ಸಿನಲ್ಲಿ ಸರಿಯಾದ ಕ್ರಮದಲ್ಲಿ ಶಿಕ್ಷಣದ ವಾತಾವರಣ ಮಾಡಿದರೆನೇ ಸ್ವಸ್ಥ ಸಮಾಜಕ್ಕೆ ಬುನಾದಿಯಾದೀತು.ಇದಕ್ಕೆಲ್ಲಾ ಕಟಿಬದ್ದರಾಗಿ ಶ್ರಮಿಸಲು ಮುಂದೆ ಬಂದರೆನೇ ಈ ಸಂಸ್ಥೆಗಳಿಗೆ ಅರ್ಥ ಬರುತ್ತದೆ ಎಂದು ವಿನಯ್ ಹೆಗ್ಡೆ ಹೇಳಿದರು.

ಪದವಿ ಸ್ವೀಕರಿಸಿ ಮಾತನಾಡಿದ ಗವರ್ನರ್ ರೊಟೇರಿಯನ್ ರೋಹಿನಾಥ್ ಅವರು, ರೊಟೇರಿಯನರು ಶೀಮಂತ ಹೃದಯದವರು. ಪೊಲಿಯೋ ಇಡೀ ಲೊಕದ ನಕ್ಷೆಯಿಂದಲೇ ತೆಗೆದವರು. ಇಂದಿಗೆ ಭಾರತದಲ್ಲಿ ಒಂದು ಮಗು ಕುಂಟುತ್ತಾ ನಡೆಯದೆ ಇರುವ ದೃಶ್ಯ ರೋಟರಿಯ ಕೊಟ್ಯಾಂತರ ಬಿಲಿಯನ್ ರೂಪಾಯಿ ಖರ್ಚು ಮಾಡಿದ ಹೃದಯ ವ್ಯೆಶಾಲ್ಯದ ಫಲವಾಗಿದೆ ಎಂದರು.

ರೊಟೇರಿಯನ್ ಕೃಷ್ಣ ಶೆಟ್ಟಿ, ರೊಟೇರಿಯನ್ ದೇವ್‌ದಾಸ್ ರಾಯ್, ನಿರ್ಗಮನ ಗವರ್ನರ್ ಎಂ.ಎಂ. ಸುರೇಶ್ ಚಂಗಪ್ಪ ಶುಭಹಾರೈಸಿದರು. ಜಿಲ್ಲಾ ಆಡಳಿತ ಕಾರ್ಯದರ್ಶಿ ವಿಕ್ರಮ್ ದತ್ತ ಸ್ವಾಗತಿಸಿದರು. ಕಾರ್ಯಕ್ರಮ ಕಾರ್ಯದರ್ಶಿ ವಿನಾಯಕ ಪ್ರಭು ವಂದಿಸಿದರು. ಆಲ್ವಿವನ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.

ಉಪ ಗವರ್‍ನರ್ ಗಳು ಒಂಬತ್ತು ಮಂದಿ ಮತ್ತು ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಹಾಲಿ ಮತ್ತು ನಿಕಟಪೂರ್ವ ಗವರ್‍ನರ್ ಗಳ ಪತ್ನಿಯರು ವೇದಿಕೆಯಲ್ಲಿದ್ದರು. ದ.ಕ. ಮಡಿಕೇರಿ,ಚಾಮರಾಜ ನಗರ, ಮೈಸೂರ್ ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments are closed.