ಕರಾವಳಿ

ಜೂನ್.30: 3181 ಜಿಲ್ಲೆಯ ನೂತನ ಗವರ್‍ನರ್ ರೋಹಿನಾಥ್‌.ಪಿ ಪದಗ್ರಹಣ ಸಮಾರಂಭ : ನಾಲ್ಕು ಜಿಲ್ಲೆಗಳ 250 ಅಂಗನವಾಡಿ ಕೇಂದ್ರಗಳ ದತ್ತು ಸ್ವೀಕಾರ

Pinterest LinkedIn Tumblr

ಮಂಗಳೂರು, ಜೂನ್.29: ದ.ಕ ,ಮಡಿಕೇರಿ ,ಚಾಮರಾಜನಗರ್,ಮೈಸೂರ್ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181, 2018-19 ಜೂನ್ ಒಳಗೆ 250 ಅಂಗನವಾಡಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು 75 ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಮಾಡಲು ಎಲ್ಲಾ ತಯಾರಿ ಮಾಡಲಾಗಿದೆ ಎಂದು ರೋಟರಿಯ 3181 ಜಿಲ್ಲೆಯ ನೂತನ ಗವರ್‍ನರ್ ರೋಟೇರಿಯನ್ ಎಂಪಿ‌ಎಚೆಫ್ ರೋಹಿನಾಥ್‌ ಪಾದೆ ಅವರು ತಿಳಿಸಿದ್ದಾರೆ.

3181 ಜಿಲ್ಲೆಯ ನೂತನ ಗವರ್‍ನರ್ ರೋಟೇರಿಯನ್ ಪದಗ್ರಹಣದ ಪೂರ್ವಭಾವಿಯಾಗಿ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರೋಟರಿ ಜಿಲ್ಲಾ ಕ್ಲಬ್ 3181 ತನ್ನ ವ್ಯಾಪ್ತಿಗೆ ಒಳಪಡುವ ದ.ಕ., ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ 250 ಅಂಗನವಾಡಿಗಳನ್ನು ದತ್ತು ಸ್ವೀಕರಿಸಲಿದೆ. ದ.ಕ.ಜಿಲ್ಲೆಯಲ್ಲಿ ಕನಿಷ್ಠ 100 ಹಾಗೂ ತನ್ನ ವ್ಯಾಪ್ತಿಯ ಇತರ ಮೂರು ಜಿಲ್ಲೆಗಳಲ್ಲಿ 150 ಅಂಗನವಾಡಿಗಳನ್ನು ‘ಆಶಾ ಸ್ಫೂರ್ತಿ’ ಯೋಜನೆಯಡಿ ದತ್ತು ಸ್ವೀಕರಿಸಿ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರೋಟರಿ ಉದ್ದೇಶಿಸಿದೆ ಎಂದು ಹೇಳಿದರು.

ಮೂಲಭೂತ ಸೌಲಬ್ಯಗಳಾದ ಸುಸಜ್ಜಿತ ಶೌಚಾಗೃಹ, ಕುಡಿಯುವ ನೀರಿನ ವ್ಯವಸ್ಥೆ, ಕೈತೊಳೆಯುವ ಸಿಂಕ್ ಮತ್ತು ನೀರಿನ ವ್ಯವಸ್ಥೆ, ಆಟಿಕೆ ವಸ್ತುಗಳು, ನೇಮ್ ಟ್ಯಾಗ್, ಮಧ್ಯಾಹ್ನದ ಬಿಸಿಯೂಟ, ಆಟದ ಮೈದಾನ, ಮಕ್ಕಳಿಗೆ ಒಳಾಂಗಣ ಆಟೋಟ ಸಲಕರಣೆಗಳು, ಹೊರಾಂಗಣ ಆಟೋಟ ಸಲಕರಣೆಗಳು,ಎಲ್ಪಿಜಿ ಗ್ಯಾಸ್,ಸ್ಟೋವ್ ಸೆಟ್, ಶಾಲಾ ಪೀಠೋಪಕರಣಗಳು,ಗೋಡೆಗೆ ಬಣ್ಣ ಬಳಿದು ಆಕರ್‍ಶಕ ಚಿತ್ರಗಳನ್ನು ಬಿಡಿಸುವುದು,ನೆಲವನ್ನು ಉನ್ನತೀಕರಿಸುವುದು ಯಾ ಟೈಯ್ಲ್ಸ್ ಹಾಕುವುದು,ಕಟ್ಟಡ ದುರಸ್ಥಿ ಬೇಕಾದರೆ ಮಾಡುವುದು ಸಹಿತ ಪೂರಕ ವ್ಯವಸ್ಥೆಗಳನ್ನು ತಮ್ಮ ಸಂಸ್ಥೆ ಒದಗಿಸಲಿದೆ. ಅಲ್ಲದೆ ದತ್ತುಪಡೆದ ಅಂಗನವಾಡಿಗಳಲ್ಲಿ ಅಭಿವೃಧ್ಧಿ ಕೆಲಸಗಳು ಸರಿಯಾಗಿ ನಡೆದಿದೆಯೇ ಎನ್ನುವ ಕುರಿತು ನಿರಂತರ ಮೇಲ್ವಿಚಾರಣೆ ನಡೆಯಲಿದೆ ಎಂದು ರೋಹಿನಾಥ್ ಪಾದೆ ಹೇಳಿದರು.

ನಗರದ ಬೊಕ್ಕಪಟ್ಟಣದ ಯುಬಿಯಂಸಿ ಅಂಗನವಾಡಿಯನ್ನು ಆರು ಲಕ್ಶ ವೆಚ್ಚದಲ್ಲಿ ಸಂಪೂರ್ಣ ನವೀಕರಣ ಮಾಡಲಾಗಿದೆ. ಬೊಕ್ಕಪಟ್ಣದ ಯುಬಿಎಂಸಿ ಅಂಗನವಾಡಿಯನ್ನು ಮೇಲ್ದರ್ಜೆಗೇರಿಸಿ ಮಾದರಿ ಅಂಗನವಾಡಿಯಾಗಿ ರೂಪಿಸಲಾಗಿದೆ. ಸಂಸ್ಥೆಯ ವತಿಯಿಂದ ಸಂಬಂಧಿಸಿದ ಜಿಲ್ಲೆಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಲಾಗಿದ್ದು, ಆದ್ಯತೆಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿರುವ ಅಂಗನವಾಡಿಗಳ ಪಟ್ಟಿ ಕೋರಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಕೆ.ಕೃಷ್ಣ ಶೆಟ್ಟಿ ಮತ್ತು ಜಿಲ್ಲಾ ಕಾರ್ಯದರ್ಶಿ (ಯೋಜನೆ) ವಿಕ್ರಮದತ್ತ, ಜಿಲ್ಲಾ ಉಪ ಸಾರ್ವಜನಿಕ ಸಂಪರ್ಕಾಧಿಕಾರಿ ರೇಮಂಡ್ ಡಿಕೂನ ಉಪಸ್ಥಿತರಿದ್ದರು.

ನಾಳೆ ರೋಹಿನಾಥ್‌ಪಾದೆ ಅವರ ಪದಗ್ರಹಣ ಸಮಾರಂಭ:

ರೋಟರಿ 3181 ನೂತನ ಗವರ್ನರ್ ರೊಟೇರಿಯನ್ ಎಂಪಿ‌ಎಚ್‌ಎಫ್ ರೋಹಿನಾಥ್‌ಪಾದೆ ಅವರ ಪದಗ್ರಹಣ ಸಮಾರಂಭ ನಾಳೆ ಸಂಜೆ 7.30ಕ್ಕೆ ಮಂಗಳೂರಿನ ಕುಲಶೇಕರದ ಕೋರ್ಡೇಲ್ ಚರ್ಚ್ ಸಭಾಂಗಣದಲ್ಲಿ ನಡೆಯಲಿದೆ.

ರೊಟೇರಿಯನ್ ಎಂಪಿ‌ಎಚ್‌ಎಫ್ ರೋಹಿನಾಥ್ ಪಿ ಬಗ್ಗೆ:

ಶಿಕ್ಶಣಕ್ಕೆ ವಿಶೇಶ ಒತ್ತು ನೀಡುವ ರೋಟರಿಯ ಜಿಲ್ಲೆ 3181 ನೂತ ಗವರ್‍ನರ್ ಸ್ವತಾ ತಾನು ಬಂಟ್ವಾಳ ತಾಲೂಕಿನ ಕಕ್ಯಪದವಿನಲ್ಲಿ ಎಲ್‌ಸಿ‌ಆರ್ ಎಂಬ ಸಂಸ್ಥೆಯಡಿ ಅಂಗನವಾಡಿಯಿಂದ ಡಿಗ್ರಿವರೆಗೆ ಶಿಕ್ಶಣ ನೀಡುವ ಸಂಸ್ಥೆಯನ್ನು ಗ್ರಾಮೀಣ ಮಕ್ಕಳಿಗಾಗಿ ನಡೆಸುತ್ತೀದ್ದಾರೆ .ಒಂದು ಸಾವಿರ ಯುವಜನರಿಗೆ ಉದ್ಯೋಗವನ್ನು ತಮ್ಮ ಪ್ರೀಮಿಯರ್ ಸೆಕ್ಯೂರಿಟಿ ಸರ್‍ವೀಸಸ್ ಮುಕಾಂತರ ಕರ್‍ನಾಟಕದಾದ್ಯಂತ ನೀಡಿದ್ದಾರೆ.

ರೋಟರಿ ಬಗ್ಗೆ:

1905ರಲ್ಲಿ ಅಮೇರಿಕಾದ ಶಿಕಾಗೊದಲ್ಲಿ ವಕೀಲರಾಗಿದ್ದ ಪಾವ್ಲ್ ಹ್ಯಾರಿಸ್ ಎಂಬವರು ನೆರೆಯವರೊಡನೆ ಸೌಹಾರ್ದಕ್ಕಾಗಿ ಮಿತ್ರರಾದ ನೆರೆಯ ಮೂವರೊಡನೆ ಆರಂಭಿಸಿದ ರೋಟರಿಯು ಈಗ 217 ರಾಷ್ಟಗಳಲ್ಲಿ 12 ಲಕ್ಶದಷ್ಟು ಸದಸ್ಯರನ್ನು ಹೊಂದಿಕೊಂಡು 35 ಸಾವಿರ ಕ್ಲಬ್ಗಳ ಮುಖಾಂತರ ಸೇವಾ ಕಾರ್‍ಯಗಳನ್ನು ಮಾಡುತ್ತಿದೆ.ಇಡೀ ಜಗತ್ತಿನಲ್ಲಿ ಪೋಲಿಯೋ ಲಸಿಕೆಯನ್ನು ಹಾಕಿ ಪೋಲಿಯೊ ನಿರ್‍ಮೂಲನೆ ಮಾಡುವಲ್ಲಿ ಮಹತ್ತರ ಮಾನವೀಯ ಕೆಲಸ ಮಾಡಿದೆ.

1919 ದರಲ್ಲಿ ಭಾರತದಲ್ಲಿ ಕಲ್ಕತ್ತ ರೋಟರಿ ಕ್ಲಬ್ ಆರಂಭವಾಯಿತು.ಈಗ 58777 ಸದಸ್ಯರ 1654 ಕ್ಲಬ್ಗಳು ರೋಟರಿಯ 28 ಜಿಲ್ಲೆಗಳಲ್ಲಿವೆ. ರೋಟರಿ ಜಿಲ್ಲೆ 3181 ಆರಂಭವಾಗಿ ಮೂರನೇ ವರ್‍ಶಕ್ಕೆ ರೊಟೇರಿಯನ್ ಎಂಪಿ‌ಎಚ್ ಎಫ್ ರೋಹಿನಾಥ್ ಪಿ ಜಿಲ್ಲಾದ್ಯಕ್ಶರಾಗುತ್ತಿದ್ದಾರೆ. ಜಿಲ್ಲೆಯಲಿ3500 ಸದಸ್ಯರು 75ಕ್ಲಬ್ ಗಳ ಮುಕಾಂತರ ಸೇವಾ ಕಾರ್‍ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ

Comments are closed.