ಕರಾವಳಿ

ನೈಸರ್ಗಿಕವಾಗಿ ಕೈಗೆ ಹಾಕಿದ ಮೆಹಂದಿಯ ಕೆಂಪಾಗಿ ಕಾಣಲು ಈ ಟಿಪ್ಸ್

Pinterest LinkedIn Tumblr

ಶುಭ ಸಮಾರಂಭಗಳಲ್ಲಿ ಮೆಹಂದಿ ಹಾಕಿಕೊಳ್ಳುವುದು ನಮ್ಮ ಭಾರತೀಯ ಹೆಣ್ಣು ಮಕ್ಕಳಿಗೆ ಒಂದು ಸಂಭ್ರಮವೇ ಸರಿ. ಹೆಚ್ಚಾಗಿ ಮದುವೆ ಸಂದರ್ಭದಲ್ಲಿ ಮೆಹಂದಿಯನ್ನ ಕಡ್ಡಾಯವಾಗಿ ಹಾಕಿಕೊಳ್ಳುತ್ತಾರೆ, ಅದರಲ್ಲೂ ಮಧು ಮಗಳ ಕೈಗೆ ಕಾಲಿಗೆ ಮೆಹಂದಿ ಹಾಕುವುದೇ ವಿಶೇಷ. ಮೆಹಂದಿ ಹಾಕುವುದರೊಂದಿಗೆ ಹಾಕಿದ ಮೆಹಂದಿ ಬಹಳ ಕೆಂಪಾದರೆ ಆಕೆಯ ಗಂಡ ತುಂಬಾ ಪ್ರೀತಿ ಮಾಡುತ್ತಾನೆ ಎಂಬುದು ಹಲವರ ನಂಬಿಕೆ. ಕೈಗೆ ಹಾಕಿದ ಮೆಹಂದಿಯ ಚಿತ್ತಾರ ಹೇಗಿದ್ದರೂ ಪರವಾಗಿಲ್ಲ ಆದರೆ ಅದರ ಬಣ್ಣ ಮಾತ್ರ ಕಾಡು ಕೆಂಪಾಗಿರಬೇಕು ಆಗಲೇ ಮೆಹಂದಿಯ ಆಕರ್ಷಣೆ ಹೆಚ್ಚಾಗುವುದು. ಮೆಹಂದಿ ಕೆಮಗಿ ಕಾಣಲು ಇಲ್ಲಿವೆ ನೋಡಿ ಕೆಲವು ಟಿಪ್ಸ್.

* ಮೆಹಂದಿ ಹಚ್ಚುವ ಮುನ್ನ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು.
* ಮಲಗುವ ಮುನ್ನ ಮೆಹಂದಿಯನ್ನ ಹಾಕಿದರೆ ಸ್ವಲ್ಪ ಒಣಗಿದ ಮೇಲೆ ಮಲಗುವುದು ಒಳ್ಳೆಯದು, ಇದರಿಂದ ಹಾಕಿದ ಚಿತ್ತಾರ ಹಾಳಾಗುವುದಿಲ್ಲ.
* ಮೆಹಂದಿಯನ್ನ ಸ್ವಲ್ಪ ದಪ್ಪವಾಗಿ ಹಾಕುವುದರಿಂದ ಮೆಹಂದಿಯ ಆಕರ್ಷಣೆ ಹೆಚ್ಚುತ್ತದೆ.
* ಮೆಹಂದಿ ಒಣಗಿದ ಬಳಿಕ ಅದಕ್ಕೆ ಸ್ವಲ್ಪ ಸಕ್ಕರೆ ಹಾಗೂ ನಿಂಬೆ ರಸವನ್ನ ಹಚ್ಚಬೇಕು.
* ಮೆಹಂದಿಯನ್ನು ತೊಳೆದ ಬಳಿಕ ಕೈಗಳಿಗೆ ಕೊಬ್ಬರಿ ಎಣ್ಣೆ ಇಲ್ಲವೇ ಪೆಟ್ರೋಲಿಯಂ ಜಲ್ ಹಚ್ಚುವುದು ಉತ್ತಮ ಇದು ಮೆಹಂದಿಯನ್ನ ಇನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

Comments are closed.