ಕರಾವಳಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರ 88ನೇ ಹುಟ್ಟು ಹಬ್ಬ ಆಚರಣೆ

Pinterest LinkedIn Tumblr

ಮುಂಬಯಿ : ಕಾರ್ಮಿಕ ಮುಂದಾಳು, ದೇಶದ ಮಾಜಿ ಸಚಿವ, ಕೊಂಕಣ ರೈಲ್ವೆಯ ರೂವಾರಿ, ಮೂಲತ ದಕ್ಷಿಣ ಕನ್ನಡ ಜಿಲ್ಲೆಯವರಾದ ಜಾರ್ಜ್ ಫೆರ್ನಾಂಡಿಸ್ ಇವರ 88ನೇ ಹುಟ್ಟು ಹಬ್ಬವನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ನಗರದ ಬಿಲ್ಲವ ಭವನದಲ್ಲಿ ಆಚರಿಸಲಾಯಿತು.

ಜಾರ್ಜ್ ಫೆರ್ನಾಂಡಿಸ್ ರ ಸಾಧನೆ ಬಗ್ಗೆ ಮಾತನಾಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಮುಂಬಯಿ ಮಹಾನಗರದಲ್ಲಿ ಕಾರ್ಮಿಕ ನೇತಾರರಾಗಿ, ಬಡ ಜನರ ಪರ ಹೋರಾಡಿದ ಜಾರ್ಜ್ ಫೆರ್ನಾಂಡಿಸ್ ರ ಮುಂಬಯಿ ಹೋಟೇಲು ಕಾರ್ಮಿಕರ ಪರವಾಗಿ ಹೋರಾಟ ನಡೆಸಿ ನ್ಯಾಯ ಒದಗಿಸಿದ ದೇಶದ ಹೆಮ್ಮೆಯ ಪುತ್ರ.ನಮ್ಮ ಜಿಲ್ಲೆಯವರಾದ ಇವರ ಸಾಧನೆಯಿಂದ ಉಭಯ ಜಿಲ್ಲೆಯವರಾದ ನಮಗೆ ಅಭಿಮಾನವಾಗುತ್ತಿದೆ. ಇದೀಗ ಅನಾರೋಗ್ಯದಿಂದಿರುವ ಜಾರ್ಜ್ ಫೆರ್ನಾಂಡಿಸ್ ಅವರು ಶೀಘ್ರವಾಗಿ ಗುಣಮುಖವಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ ವಹಿಸಿದ್ದು ಕಾರ್ಯಕ್ರಮದಲ್ಲಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಆರ್. ಬೆಳ್ಚಡ, ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ವಿಶ್ವನಾಥ ಮಾಡ, ಬಿಲ್ಲವರ ಅಸೋಷಿಯೇಶನಿನ ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ಬಿಲ್ಲವರ ಅಸೋಷಿಯೇಶನಿನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಬಂಟರ ಸಂಘದ ಪ್ರಾದೇಶಿಕ ಸಮಿತಿಯ ಸಮನ್ವಯಕ ಡಾ. ಪ್ರಭಾಕರ ಶೆಟ್ಟಿ, ತೀಯಾ ಸಮಾಜ ಮುಂಬಯಿಯ ಟ್ರಷ್ಟಿ ಕಾಯಾಧ್ಯಕ್ಷ ರೋಹಿದಾಸ ಬಂಗೇರ, ಗಾಣಿಗ ಸಂಘದ ಅಧ್ಯಕ್ಷ ರಾಮಚಂದ್ರ ಗಾಣಿಗ, ಜೈನ್ ಸಂಘದ ಅಧ್ಯಕ್ಷ ಮುನಿರಾಜ್ ಜೈನ್, ವಿದ್ಯಾದಾಯಿನಿ ಸಭಾದ ಪ್ರಧಾನ ಕಾರ್ಯದರ್ಶಿ ಕೆ. ಎಂ. ಕೋಟ್ಯಾನ್, ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಬಂಟ್ಸ್ ಪೋರಂ ಮೀರಾ – ಭಾಯಂದರ್ ನ ಗೌರವ ಅಧ್ಯಕ್ಷ ಸಂತೋಷ್ ರೈ ಬೆಳ್ಳಿಪ್ಪಾಡಿ, ಕರ್ನಾಟಕ ವಿಶ್ವಕರ್ಮ ಅಸೋಶಿಯೇಶನಿನ ಮಾಜಿ ಅಧ್ಯಕ್ಷ ಜಿ. ಟಿ. ಆಚಾರ್ಯ, ಸಮಿತಿಯ ಸ್ಥಾಪಕ ಸದಸ್ಯ ಪಿ. ಡಿ. ಶೆಟ್ಟಿ, ರಂಜನಿ ದೇವಾಡಿಗ, ದೇವಾಡಿಗ ಸಂಘದ ಮಾಜಿ ಅಧ್ಯಕ್ಷರುಗಳಾದ ವಾಸು ದೇವಾಡಿಗ, ಹಿರಿಯಡ್ಕ ಮೋಹನ್ ದಾಸ್, ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಫೆಲಿಕ್ಸ್ ಡಿ’ಸೋಜಾ, ಕೊಂಕಣಿ ವೆಲ್ಪೇರ ಅಸೋಷಿಯೇಶನಿನ ಅಧ್ಯಕ್ಷ ಹ್ಯಾರಿ ಸಿಕ್ವೇರಾ, ಮಾಲತಿ ಜೆ ಮೊಯಿಲಿ, ಸುರೇಖಾ ದೇವಾಡಿಗ, ಹೇಮಂತ್ ದೇವಾಡಿಗ ಹಾಗೂ ಸಮಿತಿಯ ಇತರ ಸದಸ್ಯರುಗಳು ಉಪಸ್ಥಿತರಿದ್ದು ಜಾರ್ಜ್ ಫೆರ್ನಾಂಡಿಸ್ ರ 88ನೇ ಹುಟ್ಟು ಹಬ್ಬಕ್ಕೆ ಶುಭ ಕೋರಿದರು.

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

Comments are closed.