ರಾಷ್ಟ್ರೀಯ

ಫೇಸುಬುಕ್‌ ಲವ್‌ ಸ್ಟೋರಿ: 65 ರ ಅಜ್ಜಿಯ ಮದುವೆಯಾದ 27 ರ ಯುವಕ !

Pinterest LinkedIn Tumblr

ಚಂದೀಘಡ : ಪ್ರೀತಿ ಕುರುಡು ಎಂಬ ಮಾತಿನಂತೆ ಫೇಸುಬುಕ್‌ ಲವ್‌ ಸ್ಟೋರಿಯೊಂದರಲ್ಲಿ 27ರ ಯುವಕ 65 ರ ಅಜ್ಜಿಯನ್ನು ವರಿಸಿದ ಘಟನೆ ನಡೆದಿದೆ.

ಹರಿಯಾಣದ ಕಾತಿಹಾಳ ಎಂಬಲ್ಲಿನ ಹಳ್ಳಿಯೊಂದರಲ್ಲಿ ಅಮೆರಿಕದ ಮಹಿಳೆ ಕೆರೇನ್‌ ಲಿಲಿಯಾನ್‌ ಮತ್ತು ಪ್ರವೀಣ್‌ ಅವರ ವಿವಾಹ ಗುರು ಹಿರಿಯರ ಸಮ್ಮುಖದಲ್ಲೇ ನೆರವೇರಿದೆ.

ಫೇಸ್‌ಬುಕ್‌ನಲ್ಲಿ ಮೊದಲು ಸ್ನೇಹಿತರಾಗಿದ್ದ ಇಬ್ಬರೂ ಬಳಿಕ ಪರಸ್ಪರ ಪ್ರೀತಿಸಲು ಆರಂಭಿಸಿ ಕೊನೆಗೆ ವಿವಾಹವಾಗಲು ನಿರ್ಧರಿಸಿ ಹೊಸ ಬಾಳಿಗೂ ಕಾಲಿಟ್ಟಿದ್ದಾರೆ.

ಪ್ರವೀಣ್‌ ಹಿಂದು ಆಗಿದ್ದರೆ ಕೆರೇನ್‌ ಕ್ರಿಶ್ಚಿಯನ್‌ ಧರ್ಮೀಯರು ,ಆದರೆ ವಿವಾಹ ಮಾತ್ರ ಸಿಖ್ಬ್‌ ಸಂಪ್ರದಾಯದಂತೆ ಮಾಡಿಕೊಂಡಿದ್ದಾರೆ.

ಪ್ರವೀಣ್‌ ಸ್ನಾತಕೋತ್ತರ ಪದವೀಧರನಾದ ಹೊರತಾಗಿಯೂ ಸರಿಯಾದ ಕೆಲಸ ಸಿಗದ ಕಾರಣ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.

ಇದೀಗ ಭಾರತಕ್ಕೆ ವಿವಾಹವಾಗಲು ಆಗಮಿಸಿದ್ದ ಕೆರೇನ್‌ ಪ್ರವೀಣ್‌ರನ್ನು ಅಮೆರಿಕಕ್ಕೆ ಕರೆದೊಯ್ದಿದ್ದು ಅಲ್ಲಿನ ವೀಸಾ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ವೀಸಾ ಸಿಕ್ಕರೆ ಪ್ರವೀಣ್‌ ಅಮೆರಿಕದಲ್ಲಿ ನೆಲೆಸಲಿದ್ದು, ಇಲ್ಲವಾದರೆ ಕೆರೇನ್‌ ಭಾರತಕ್ಕೆ ಬಂದು ನೆಲೆಸಲಿದ್ದಾರಂತೆ..!

Comments are closed.