ಕರಾವಳಿ

ಮುಂಗಾರು ಮಳೆ: ಸಾರ್ವಜನಿಕರು, ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದು ನಿಷೇಧ

Pinterest LinkedIn Tumblr

ಉಡುಪಿ: ಮುಂಗಾರು ಮಳೆಯು ಜಿಲ್ಲೆಯಲ್ಲಿ ಪ್ರಾರಂಭಗೊಂಡಿದ್ದು, ಮಳೆಗಾಲದಲ್ಲಿ ಸಮುದ್ರ ತೀರದ ಅಲೆಗಳ ಆರ್ಭಟದ ತೀವ್ರತೆಯನ್ನು ಗಮನಿಸದೇ ಸಮುದ್ರ ತೀರಕ್ಕೆ ಇಳಿಯುವ ಪರಿಣಾಮ ಜೀವ ಹಾನಿ ಸಂಭವಿಸುತ್ತದೆ.

ಆದ್ದರಿಂದ ಮಳೆಗಾಲದ ಅವಧಿಯಲ್ಲಿ ಜಿಲ್ಲೆಯ ಪ್ರಮುಖ ಬೀಚ್ಗಳಾದ ಸೈಂಟ್ ಮೇರಿಸ್ ದ್ವೀಪ, ಪಡುಬಿದ್ರೆ, ಕಾಪು, ಮಲ್ಪೆ, ಕುಂದಾಪುರ –ಕೋಡಿ ಲೈಟ್ ಹೈಸ್, ತ್ರಾಸಿ-ಮರವಂತೆ, ಬೈಂದೂರು-ಸೋಮೇಶ್ವರ(ಒತ್ತಿನೆಣೆ) ಬೀಚ್ಗಳಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ಹೊರತುಪಡಿಸಿ, ಇತರ ಯಾವುದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ.

ಸಾರ್ವಜನಿಕರ ಜೀವ ರಕ್ಷಣೆಯ ದೃಷ್ಟಿಯಿಂದ ಈಗಾಗಲೇ ಬೀಚ್ಗಳಿಗೆ 10 ಜನ ಗೃಹರಕ್ಷಕರು, ಪೊಲೀಸ್ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ. ಆದ್ದರಿಂದ ಅಹಿತಕರ ಘಟನೆಗಳನ್ನು ತಪ್ಪಿಸುವ ದೃಷ್ಟಿಯಿಂದ, ಮುಂಜಾಗೃತ ಕ್ರಮವಾಗಿ ನಿರ್ಬಂದ ವಿಧಿಸಿದ್ದು, ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.

Comments are closed.