ಕರಾವಳಿ

ತಲಾಕ್ ನೀಡುವಂತೆ ಪತ್ನಿಗೆ ಬಾಸುಂಡೆ ಬರುವಂತೆ ಥಳಿಸಿದ ಪತಿರಾಯ

Pinterest LinkedIn Tumblr

ಕುಂದಾಪುರ: ಹತ್ತು ವರ್ಷಗಳ ಹಿಂದೆ ಮದುವೆಯಾದ ಪತ್ನಿಗೆ ನಿರಂತರ ದೈಹಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ ಬಗ್ಗೆ ಸ್ವತಃ ಪತ್ನಿಯೇ ಠಾಣೆ ಮೆಟ್ಟಿಲೇರಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ತಾಲೂಕಿನ ಕೋಡಿ ನಿವಾಸಿ ಸಯ್ಯದ್ ಮೊಹಮ್ಮದ್ ಎಂಬುವರು ಕಳೆದ 10 ವರ್ಷಗಳ ಹಿಂದೆ ಮಂಗಳೂರು ಮೂಲದ ಮಹಿಳೆಯನ್ನು ವಿವಾಹವಾಗಿದ್ದು ಇಬ್ಬರು ಪುತ್ರಿಯರಿದ್ದಾರೆ. ಆದರೇ ಇತ್ತೀಚೆಗೆ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ ಆತ ತಾನು ಇನ್ನೊಂದು ಮದುವೆಯಾಗಬೇಕು ಅದಕ್ಕಾಗಿ ನೀನು ತಲಾಖ್ ನೀಡು ಎಂದು ಪೀಡಿಸಲು ಆರಂಭಿಸಿದ್ದ ಎನ್ನಲಾಗಿದೆ. ಆದರೇ ಪತ್ನಿ ಇದಕ್ಕೆ ಒಪ್ಪದಿದ್ದಾಗ ನಾಲ್ಕೈದು ದಿನಗಳ ಹಿಂದೆ ಆಕೆಗೆ ಹಿಗ್ಗಾಮುಗ್ಗಾ ಥಳಿಸಿ ಕೊಲೆಯತ್ನ ನಡೆಸಿದ್ದಾನೆಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ನೊಂದ ಮಹಿಳೆ ಕುಂದಾಪುರ ಸಾಂತ್ವಾನ ಕೇಂದ್ರದ ನೆರವು ಕೋರಿ ಬಂದಿದ್ದು ಇಲ್ಲಿನ ಅಧ್ಯಕ್ಷೆ ರಾಧಾದಾಸ್ ಆಕೆಗೆ ಧೈರ್ಯ ತುಂಬಿದ್ದಾರೆ. ಪೊಲೀಸರಿಗೂ ಆಕೆಯ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿದ್ದು ಸದ್ಯ ನೊಂದ ಮಹಿಳೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ದ ದೂರು ದಾಖಲು ಮಾಡಿದ್ದಾರೆ.

Comments are closed.