ಕರಾವಳಿ

ಬಡವ, ಶ್ರೀಮಂತ, ಗಂಡು, ಹೆಣ್ಣು ಎಂಬ ಬೇಧ ಇಲ್ಲದೇ ಎಲ್ಲರನ್ನೂ ಕಾಡುವ ಜಾಗತಿಕ ಖಾಯಿಲೆ ಬಗ್ಗೆ ಗೊತ್ತೇ..?

Pinterest LinkedIn Tumblr

ನಮ್ಮ ಆರೋಗ್ಯ ಹಾಳಾಗಲು ನಮ್ಮ ಇಂದಿನ ದಿನಮಾನಗಳ ಜೀವನ ಶೈಲಿಯೇ ಕಾರಣ ಎಂದರೆ ಖಂಡಿತ ತಪ್ಪಾಗಲಾರದು. ನಾವು ತಿನ್ನುವ ಆಹಾರಗಳು ಕುಡಿಯುವ ಪಾನೀಯಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವನ್ನ ಬೀರುತ್ತವೆ. ಈ ಕಾಯಿಲೆಗಳಲ್ಲಿ ಅಪೆಂಡಿಕ್ಸ್ ಕೂಡ ಒಂದು.

ನಾವು ವಾತಾವರಣ ಬದಲಾದರೆ ಹೆಚ್ಚಾಗಿ ಕಾಯಿಸಿ ಆರಿಸಿದ ನೀರನ್ನ ಕುಡಿಯುತ್ತೇವೆ, ಹೀಗೆ ಬಿಸಿ ನೀರನ್ನ ಕುಡಿಯುವುದರಿಂದ ಅರೋಗ್ಯ ಹಾಳಾಗುವುದಿಲ್ಲ. ಈ ಅಪೆಂಡಿಕ್ಸ್ ಕಾಯಿಲೆಗೂ ಸಹ ಬಿಸಿ ನೀರು ಬಹಳ ಮುಖ್ಯ. ಬಿಸಿ ನೀರು ರೋಗಿಯ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಬಿಸಿ ನೀರು ಕರುಳನ್ನು ಸ್ವಚ್ಛಗೊಳಿಸಲು ಸಹಾಯಕವಾಗಿತ್ತದೆ. ಕರುಳಿನಲ್ಲಿ ವಿಷಯುಕ್ತ ಅಂಶ ತುಂಬಿದ್ದಾರೆ ಕರುಳಿನಲ್ಲಿ ಉರಿಯೂತ ಕಂಡುಬರುತ್ತದೆ, ಬಿಸಿ ನೀರು ಕುಡಿಯುವುದರಿಂದ ಕರುಳಿನಲ್ಲಿರುವ ವಿಷಾದ ಅಂಶ ಹೊರಹೋಗುತ್ತದೆ.

* ನಾವು ದಿನನಿತ್ಯ ಅಡುಗೆಗೆ ಬಳಸುವ ಹಲವು ಕಾಳುಗಳು ಬಹಳ ಪೌಷ್ಟಿಕತೆಯನ್ನು ಹೊಂದಿವೆ. ಅದರಲ್ಲೂ ಹೆಸರು ಕಾಳಿನಲ್ಲಿ ವಿವಿಧ ಪೋಷಕಾಂಶಗಳು ಅಡಗಿವೆ. ಹೆಸರು ಕಾಳನ್ನ ನೆನೆಸಿ ಮೊಳಕೆ ಕಟ್ಟಿ ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹೆಸರು ಕಾಳುಗಳನ್ನ ನೆನೆಸಿ ದಿನಕ್ಕೆ 2-3 ಸಲ ಒಂದು ಚಮಚದಷ್ಟು ತಿಂದರೆ ಸಾಕು ನಮ್ಮ ದೇಹಕ್ಕೆ ಬೇಕಾದಷ್ಟು ಪೋಷಕಾಂಶಗಳು ದೊರೆಯುತ್ತವೆ.

* ಅಪೆಂಡಿಕ್ಸ್ ಚಿಕಿತ್ಸೆಗೆ ಬಹಳ ಪರಿಣಾಮಕಾರಿ ಮಜ್ಜಿಗೆ. ಮಜ್ಜಿಗೆಯು ಅಪಾಂಡಿಕ್ಸ್ ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ಮಜ್ಜಿಗೆ ಅಪಾಂಡಿಕ್ಸ್ ನೋವನ್ನು ಕಡಿಮೆ ಮಾಡುತ್ತದೆ. ಈ ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿದರೆ ಬಾಯಿಗೂ ರುಚಿ ಆರೋಗ್ಯಕ್ಕೂ ಉತ್ತಮ .

ಅಪೆಂಡಿಸೈಟಿಸ್ ಲಕ್ಷಣಗಳು ಏನು?
ಅಪೆಂಡಿಸೈಟಿಸ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು, ಆದರೆ 10 ರಿಂದ 30ರ ವಯಸ್ಸಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 2 ವರ್ಷಗಳಿಗಿಂತ ಚಿಕ್ಕ ವಯಸ್ಸಿನಲ್ಲಿ ಬಹಳ ವಿರಳ. ಅಮೇರಿಕಾ ದೇಶದಲ್ಲಿ ಪ್ರತಿ 15ರಲ್ಲಿ ಒಬ್ಬ ಈ ರೋಗದಿಂದ ಬಳಲುತ್ತಾನೆ. ಅಪೆಂಡಿಸೈಟಿಸ್ ರೋಗವನ್ನು ತಡೆಗಟ್ಟುವುದು ಕಷ್ಟಕರ. ಆದರೆ ಹೆಚ್ಚು ನಾರುಯುಕ್ತ ಆಹಾರಗಳಾದ ಹಸಿ ತರಕಾರಿ, ತಾಜಾ ಹಣ್ಣುಗಳನ್ನು ಸೇವಿಸುವವರಲ್ಲಿ ಅಪೆಂಡಿಸೈಟಿಸ್ ರೋಗ ಬರುವ ಸಾಧ್ಯತೆ ಕಡಮೆ ಇರುತ್ತದೆ.

1. ಹೊಟ್ಟೆ ನೋವು ಆರಂಭದಲ್ಲಿ ಸಣ್ಣದಾಗಿ ಕಿಬ್ಬೊಟ್ಟೆಯಲ್ಲಿ, ಹೊಕ್ಕಳ ಸುತ್ತ, ಕ್ರಮೇಣ ನೋವಿನ ತೀವ್ರತೆ ಜಾಸ್ತಿಯಾಗಿ ಬಲಭಾಗದ ಕಿಬ್ಬೊಟ್ಟೆಯಲ್ಲಿ ನೋವು ಹೆಚ್ಚು ವ್ಯಾಪಿಸುತ್ತದೆ. ಏನೂ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ನೋವಿನ ತೀವ್ರತೆ ಜಾಸ್ತಿಯಾಗುತ್ತಾ ಹೋಗಿ ಹೊಟ್ಟೆಯ ತಳಭಾಗಕ್ಕೆ ವ್ಯಾಪಿಸುತ್ತದೆ.

2. ಜ್ವರ, ವಾಂತಿ, ವಾಕರಿಕೆ, ಹಸಿವಿಲ್ಲದಿರುವುದು, ಸರ್ವೇ ಸಾಮಾನ್ಯವಾಗಿ ಹೊಟ್ಟೆ ನೋವಿನ ಜೊತೆ ಜೊತೆಯಾಗಿ ಬರುತ್ತದೆ. ನೋವಿನ ಜೊತೆಗೆ ಆರಂಭವಾದ ಜ್ವರ ಹೆಚ್ಚು ಏರುವುದೇ ಇಲ್ಲ. ನಿರಂತರವಾಗಿ 100 ಡಿಗ್ರಿಯಲ್ಲಿ ಇದ್ದೇ ಇರುತ್ತದೆ. ಮಧ್ಯ ಮಧ್ಯದಲ್ಲಿ ಜ್ವರ ಕಡಮೆಯಾಗದೆ, ಒಂದೇ ರೀತಿ ಇರುತ್ತದೆ. ಹಸಿವಿನ ತೀವ್ರತೆ ಕಡಮೆಯಾಗಿ, ವಾಂತಿ ಬರದೇ ಇರಲೂಬಹುದು. ಪದೇ ಪದೇ ವಾಕರಿಕೆ ಬಂದಂತಾಗಬಹುದು, ಕೆಲವೊಮ್ಮೆ ಮಲಬದ್ಧತೆ ಮತ್ತು ಅತೀಬೇಧಿಯೂ ಉಂಟಾಗಬಹುದು. ಈ ಲಕ್ಷಣಗಳ ಜೊತೆಗೆ ಮೂತ್ರ ಮಾಡುವಾಗ ನೋವಾಗುವುದು, ಹೊಟ್ಟೆಯ ಸುತ್ತ ಯಾವಾಗಲೂ ಇರುವ ನಿರಂತರ ನೋವು, ಹೊಟ್ಟೆಯಲ್ಲಿನ ಸ್ನಾಯುಗಳು ಹಿಡಿದಂತಾಗಿ ನಿರಂತರವಾದ ನೋವು, ಹೊಟ್ಟೆಯೊಳಗೆ ಗ್ಯಾಸ್ ತುಂಬಿದಂತಾಗುವುದು ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಸಂದರ್ಶಿಸತಕ್ಕದ್ದು. ಯಾವುದೇ ಆಹಾರ, ನೀರು, ನೋವು ನಿವಾರಣೆ ಔಷಧಿ, ಗ್ಯಾಸ್ ನಿವಾರಣೆಗೆ ಔಷಧಿ ಅಥವಾ ಸಿರಪ್‍ನ್‍ಗಳನ್ನು ಸೇವಿಸಬಾರದು. ಹೊಟ್ಟೆಯ ಸುತ್ತ ನೋವು ನಿವಾರಣೆಗೆಂದು ಶಾಖ ಕೊಡಲೇ ಬಾರದು. ಈ ರೀತಿ ಮಾಡುವುದರಿಂದ ಅಪೆಂಡಿಕ್ಸ್ ಒಡೆದುಕೊಂಡು, ಅದರೊಳಗಿನ ಕೀವು ಹೊಟ್ಟೆ ಒಳಭಾಗವಾದ ಪೆರಿಟೋನಿಯಲ್ ಕವಚಕ್ಕೆ ಸೇರಿಕೊಂಡು ಪ್ರಾಣಾಪಾಯವಾಗುವ ಸಾಧ್ಯತೆಯೂ ಇರುತ್ತದೆ.

Comments are closed.