ಕರಾವಳಿ

ಕರಾವಳಿಯಲ್ಲಿ ಶುಕ್ರವಾರ (ನಾಳೆ) ಈದುಲ್ ಫಿತ್ರ್

Pinterest LinkedIn Tumblr

ಉಡುಪಿ: ಚಂದ್ರ ದರ್ಶನ ಹಿನ್ನಲೆಯಲ್ಲಿ ಶುಕ್ರವಾರದಂದು ಕರಾವಳಿ ಜಿಲ್ಲೆಗಳಲ್ಲಿ ಈದುಲ್ ಫಿತ್ರ್ ಆಚರಣೆ ನಡೆಯಲಿದೆ.

ಕೇರಳದ ಕ್ಯಾಲಿಕಟ್ ನಲ್ಲಿ ಗುರುವಾರ ಚಂದ್ರ ಅಸ್ತಮಿಸಿ ಶುಕ್ರವಾರ ಶವ್ವಾಲ್ ನ ಪ್ರಥಮ ಚಂದ್ರದರ್ಶನ ಆಗಿರುವ ಕಾರಣ ಶುಕ್ರವಾರದಂದೇ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ಹಬ್ಬ ಆಚರಣೆ ನಡೆಯಲಿದೆ.

ಈ ಬಗ್ಗೆ ಉಡುಪಿ, ಚಿಕ್ಕಮಗಳೂರು. ಹಾಸನ ಜಿಲ್ಲಾ ಸಂಯುಕ್ತ ಖಾಜಿ ಪಿ.ಎಮ್. ಇಬ್ರಾಹಿಂ ಮುಸ್ಲಿಯಾರ್ ಕರೆ ನೀಡಿದ್ದಾರೆಂದು ಪ್ರಕಟನೆಯಲ್ಲಿ ಹೇಳಲಾಗಿದೆ.

Comments are closed.