ಕರಾವಳಿ

ರಕ್ತದಾನ ಜಗತ್ತಿನ ಅತ್ಯಂತ ಶ್ರೇಷ್ಟ ದಾನ : ವೇದವ್ಯಾಸ್ ಕಾಮತ್

Pinterest LinkedIn Tumblr

ಮಂಗಳೂರು : ರಕ್ತದಾನವೆನ್ನುವುದು ಜಗತ್ತಿನ ಅತ್ಯಂತ ಶ್ರೇಷ್ಟ ದಾನ, ತಮ್ಮ ದೇಹದ ರಕ್ತದಿಂದ ಮತ್ತೊಂದು ಜೀವ ಉಳಿಸುವ ಕಾರ್ಯ ಮಹತ್ತರವಾದದ್ದು ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅಭಿಪ್ರಾಯಪಟ್ಟರು.

ಅವರು ವಿಶ್ವ ಹಿಂದು ಪರಿಷತ್ ಬಜರಂಗದಳ ನಂದಿನಿ ಶಾಖೆ ಕುಲಶೇಖರ ಇದರ ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಮತ್ತು ಎ.ಜೆ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಪ್ರಮುಖರಾದ ವಸಂತ್ ಜೆ ಪೂಜಾರಿ,ಭಾಸ್ಕರ ಚಂದ್ರ ಶೆಟ್ಟಿ,ಅಜಯ್ ಮತ್ತು ವಿಶ್ವ ಹಿಂದು ಪರಿಷತ್,ಬಜರಂಗದಳ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.