ಕರಾವಳಿ

ದನ ಚರ್ಮ ಅಕ್ರಮವಾಗಿ ಸಾಗಾಟ: ಪೊಲೀಸರಿಂದ ಇಬ್ಬರ ಬಂಧನ

Pinterest LinkedIn Tumblr

ಕುಂದಾಪುರ: ದನದ ಹಸಿ ಚರ್ಮವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಂಗೊಳ್ಳಿ ನಿವಾಸಿಗಳಾದ ಖಾಜಾ ಬಾವುದ್ದೀನ್‌(72), ಹಂಝಲ್, (22) ಬಂಧಿತ ಆರೋಪಿಗಳು.

ಗ್ರಾಮಾಂತರ ಠಾಣೆ ಪಿಎಸೈ ಶ್ರೀಧರ ನಾಯ್ಕ ಅವರು ರೌಂಡ್ಸ್‌ ಕರ್ತವ್ಯದಲ್ಲಿರುವ ತಾಊಕಿನ ಗುಲ್ವಾಡಿ ಕಡೆಯಿಂದ ಬಸ್ರೂರು ಕಡೆ KA-19-MD-2661 ನೇ ಕಾರಿನಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಬೋಳಕಟ್ಟೆ ಜಂಕ್ಷನ್‌ ತಲುಪಿ ಅಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದು ಈ ವೇಳೆ ಬಿಳಿ ಸ್ವಿಫ್ಟ್‌ಕಾರು ಗುಲ್ವಾಡಿ ಕಡೆಯಿಂದ ಬೋಳಕಟ್ಟೆ ಕಡೆ ಬಂದಿದ್ದು ಕಾರನ್ನು ತಡೆದು ನಿಲ್ಲಿಸಿದಾಗ ಕಾರಿನಲ್ಲಿದ್ದ ಆರೋಪಿಗಳಿಬ್ಬರು ಕಾರನ್ನು ನಿಲ್ಲಿಸಿ ಇಳಿದು ಓಡಲು ಯತ್ನಿಸಿರುರೆ. ಕೂಡಲೇ ಪೊಲೀಸರು ಕಾರಿನ ಚಾಲಕ ಹಾಗೂ ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಹಿಡಿದು ವಿಚಾರಿಸಿದ್ದು ಇಲಿಯಾಸ್‌ ಎಂಬುವವರು ಬೆಳಿಗ್ಗೆ ದೂರವಾಣಿ ಕರೆ ಮಾಡಿ ಗುಲ್ವಾಡಿಯ ಮೊಯಿದ್ದಿನ್‌ ಬ್ಯಾರಿ ಹಾಗೂ ಅಬ್ದುಲ್ ಸಮದ್‌ ಇವರ ಮನೆಯಲ್ಲಿ ದನದ ಚರ್ಮ ಇದ್ದು ತೆಗೆದುಕೊಂಡು ಹೋಗಲು ಹೇಳಿದಂತೆ ನಾವು ಗುಲ್ವಾಡಿ ಕಾಂಡ್ಲಗದ್ದೆ ಎಂಬಲ್ಲಿಗೆ ಬಂದು ಸಮದ್‌, ಮೊಯಿದ್ದಿನ್‌ ಬ್ಯಾರಿ ಹಾಗೂ ಇಲಿಯಾಸ್‌ ಎಂಬವರಿಂದ ಜಾನುವಾರಿನ ಚರ್ಮಗಳನ್ನು ಖರೀದಿಸಿ ಅವುಗಳನ್ನು ಕಾರಿನಲ್ಲಿ ಗಂಗೊಳ್ಳಿ ಕಡೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದು ಈ ಜಾನುವಾರುಗಳ ಚರ್ಮವನ್ನು ಹೊಂದಲು, ಸಾಗಾಟ ಮಾಡಲು ಯಾವುದೇ ಪರವಾನಿಗೆ ಇಲ್ಲ ಎಂದಿದ್ದಾರೆ.

ಕಾರಿನ ಹಿಂಬದಿ ಢಿಕ್ಕಿಯಲ್ಲಿದ್ದ ಚೀಲದಲ್ಲಿ 3 ಹಾಗೂ ಇನ್ನೊಂದು ಪಾಲಿಥಿನ್‌ ಚೀಲದ ಒಳಗೆ ಗೋಣಿ ಚೀಲದಲ್ಲಿ 4 ಒಟ್ಟು 7 ದನದ ಹಸಿ ಚರ್ಮಗಳನ್ನು ತುಂಬಿ ಕಟ್ಟಿರುವುದು ಕಂಡುಬಂದಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Comments are closed.