ಕುಂದಾಪುರ: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಾಪುರ ರೋಜರಿ ಮಾತಾ ಇಗರ್ಜಿನ ಧರ್ಮಗುರುಗಳಿಗೆ ವರ್ಗಾವಣೆ ಪ್ರಯುಕ್ತ ಅವರ ಬದಲಿಗೆ ನೂತನ ಧರ್ಮಗುರುಗಳಾದ ವಂ|ಸ್ಟಾನ್ಲಿ ತಾವ್ರೊ ಇವರ ಆಗಮನವಾಯಿತು. ಪ್ರಸ್ತುತ ಶಿರ್ವದ ಇಗರ್ಜಿಯಿಂದ ಬಂದ ಅವರನ್ನು ಆತ್ಮೀಯವಾಗಿ ಧಾರ್ಮಿಕ ವಿಧಿ ವಿದಾನಗಳಿಂದ ಸ್ವಾಗತಿಸಲಾಯಿತು.
ಉಡುಪಿ ಧರ್ಮ ಪ್ರಾಂತ್ಯದ ಬಿಷಪರ ಪ್ರತಿನಿಧಿಯಾಗಿ ಆಗಮಿಸಿದ ಉಡುಪಿ ಧರ್ಮ ಕೇಂದ್ರದ ಛಾನ್ಸಲರ್ ಅತಿ ವಂ| ವಾಲೇರಿಯನ್ ಮೆಂಡೊನ್ಸಾ ಅಧಿಕಾರ ಸ್ವೀಕರಿಸುವ ಧಾರ್ಮಿಕ ವಿಧಿ ವಿದಾನಗಳನ್ನು ನೆಡೆಸಿಕೊಟ್ಟು ಫಾ||ಸ್ಟಾನ್ಲಿಗೆ ಶುಭ ಕೋರಿದರು. ಪ್ರಸ್ತೂತ ಸೇವೆಯಲ್ಲಿದ್ದ ವಂ|ಫಾ|ಅನಿಲ್ ಡಿಸೋಜಾ ಅಧಿಕಾರವನ್ನು ವಹಿಸಿಕೊಟ್ಟು ನೂತನ ಧರ್ಮಗುರುಗಳಿಗೆ ’ಈ ದೇವಲಯದ ಪರಿಸರ ಭಾರೀ ಪವಿತ್ರವಾಗಿದ್ದು ಇಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ಜುಜೆ ವಾಜ್ ಸಂತ ಪದವಿ ಪಡೆದುಕೊಂಡವರು, ಅವರು ಕುಂದಾಪುರ ಇಗರ್ಜಿಯಲ್ಲಿ ದ್ಯಾನಸಕ್ತರಾದಗ ದೇವರು ಅವರನ್ನು ಗಾಳಿಯಲ್ಲಿ ತೇಲಿಸಿದ್ದ ಪವಾಡದ ಚಾರಿತ್ರಿಕ ಸಂಗತಿ ವಿವರಿಸಿ, ಕುಂದಾಪುರ ಜನತೆ ನಿಮಗೆ ಇಲ್ಲಿ ಒಳ್ಳೆಯ ಮನಸ್ಸಿನವರು, ನಿಮಗೆ ತುಂಬು ಸಹಕಾರ ನೀಡುತ್ತಾರೆಂದು ತಿಳಿಸಿ ಅವರಿಗೆ ಶುಭ ಕೋರಿದರು.
ಪಾಲನ ಮಂಡಳಿಯ ಉಪಾಧ್ಯಕ್ಷ ಜೇಕಬ್ ಡಿಸೋಜಾ ‘ಕುಂದಾಪುರ ಕ್ರೈಸ್ತ ಜನತೆ, ವಿಶಾಲ ಹ್ರದಯದವರು, ನಿಮ್ಮನ್ನು ಎಲ್ಲಾ ರೀತಿಯಲ್ಲಿ ಸಹಕರಿಸುತ್ತಾರೆ’ ಎಂದು ಆತ್ಮಿಯವಾಗಿ ಸ್ವಾಗತವನ್ನು ಬಯಸಿದರು. ಕಾರ್ಯದರ್ಶಿ ಕುಂದಾಪುರ ಚರ್ಚಿನ ಚರಿತ್ರೆಯನ್ನು ತೀಳಿಸಿ ನಮ್ಮ ಕುಂದಾಪುರದ ಚರ್ಚಿಗೆ ಈಗ 448 ವರ್ಷಳು ತುಂಬಿವೆ’ ಎಂದು ತಿಳಿಸಿದರು.
ನೂತನವಾಗಿ ಆಗಮಿಸಿದ ಫಾ|ಸ್ಟಾನ್ಲಿ ‘ನೀವು ನನ್ನನ್ನು ಆತ್ಮಿಯವಾಗಿ ಬರ ಮಾಡಿಕೊಂಡಿದ್ದಿರಿ, ನಿಮ್ಮ ಸಹಕಾರದಿಂದ ಮತ್ತು ಈ ಚರ್ಚಿನ ಪೋಷಕಿ ರೋಜರಿ ಮಾತೆಯ ಆಶಿರ್ವಾದದಿಂದ ನಾನು ನಿಮ್ಮ ಸೇವೆ ಮಾಡುತ್ತೇನೆಂದು ಹೇಳಿ ತಮ್ಮನ್ನು ಬ್ಯಾಂಡ್ ವಾದ್ಯದೊಂದಿಗೆ ಬೀಳ್ಕೊಡಲು ಬಂದ ಶಿರ್ವಾ ಆರೋಗ್ಯ ಮಾತೆಯ ಸುಮಾರು ೨೫೦ ಜನ ಕೈಸ್ತ ಬಂಧುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಕಾರ್ಯಕ್ರಮಕ್ಕೆ ಉಡುಪಿ ಧರ್ಮಪ್ರಾಂತ್ಯದ ಮೊನ್ಸಿಜೆಂರ್ ಅತಿ ವಂ| ಬ್ಯಾಪ್ಟಿಸ್ಟ್ ಮಿನೇಜೆಸ್, ಪ್ರಾಂಶುಪಾಲ ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಶಿರ್ವಾದ ಧಮಗುರು ವಂ|ಡೆನಿಸ್ ಡೆಸಾ, ಈ ಮೊದಲು ಇಲ್ಲಿ ಸೇವೆ ನೀಡಿದ ವಂ| ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ವಂ| ಲುವಿ ಡೆಸಾ ಇನ್ನು ಮುಂತಾದ ಹಲವಾರು ಧರ್ಮಗುರುಗಳು ಧರ್ಮಭಗಿನಿಯರು, ವಾಡೆಯ ಗುರಿಕಾರರು, ಪ್ರತಿನಿಧಿಗಳು, ಹಣಕಾಸು ಸಮಿತಿಯ ಸದಸ್ಯರು ಮತ್ತು ಹಲವಾರು ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಡಾಯಾನಾ ಡಿಆಲ್ಮೇಡ ಕಾರ್ಯಕ್ರಮವನ್ನು ನಿರೂಪಿಸಿದರು. ಒಸ್ವಲ್ಡ್ ಕರ್ವಾಲ್ಲೊ ಧನ್ಯವಾದಗಳನ್ನು ಅರ್ಪಿಸಿದರು.
Comments are closed.