ಯುವತಿಯರಾಗಲೀ, ಯುವಕರಾಗಲೀ ಕೂದಲಿನ ಬಗ್ಗೆ ಎಲ್ಲರೂ ವಿಶೇಷ ಕಾಳಜಿ ಹೊಂದಿರುತ್ತಾರೆ. ಅದರಲ್ಲೂ ಸ್ವಲ್ಪ ಫ್ಯಾಶನ್ ಪ್ರಿಯರಾದರೆ ಕೇಳುವುದೇ ಬೇಡ, ಆ ಕಟ್ ಈ ಕಟ್ ಎಂದೆಲ್ಲಾ ಸ್ಟೈಲ್ ಮಾಡಿ ಕೂದಲಿನ ಜೊತೆ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಜೊತೆಗೆ ಮಾರ್ಕೆಟ್ ನಲ್ಲಿ ಸಿಗುವ ಅದಷ್ಟೂ ಶ್ಯಾಂಪು, ಕಂಡೀಶನರ್ ಗಳನ್ನು ಕೂದಲ ಮೇಲೆ ಪ್ರಯೋಗಿಸಿ ಅದನ್ನು ರೇಷ್ಮೆಯಂತೆ ಮಾಡಲು ಪ್ರಯತ್ನಿಸುತ್ತಾರೆ.

ಆದರೆ ಈ ಪ್ರಯತ್ನದಲ್ಲಿ ಹೆಚ್ಚಿನವರ ಕೂದಲು ತನ್ನ ನಿಜವಾದ ಅಂದವನ್ನೇ ಕಳೆದುಕೊಳ್ಳವುದುಂಟು. ಹಾಗಾದಾಗ ಕೂದಲು ಪ್ರಿಯರಿಗೆ ಆಗುವ ದುಃಖ ಅಷ್ಟಿಷ್ಟಲ್ಲ. ಅದಕ್ಕೆ ಕಾರಣ ಶ್ಯಾಂಪು, ಕಂಡೀಶನರ್ ಮುಂತಾದುವುಗಳಲ್ಲಿ ಹೇರಳವಾಗಿ ಬಳಸಲಾಗಿರುವ ಕೆಮಿಕಲ್ ಗಳು. ಅದಕ್ಕಾಗಿಯೇ ಸೊಂಪಾದ, ಕಪ್ಪಗಿನ ಕೂದಲು ನೀವು ಪಡೆಯಬೇಕೆಂದರೆ ಶ್ಯಾಂಪುಗಳಿಗೆ ಮೊರೆ ಹೋಗದೆ ನಿಮ್ಮ ಅಡುಗೆ ಕೋಣೆಯೊಳಗೊಮ್ಮೆ ಇಣುಕಿ ನೋಡಿ, ಅಲ್ಲೇ ನಿಮಗೆ ಬೇಕಾದ ಕಂಡೀಶನರ್ ಸಿಗುತ್ತದೆ.
ಕಿಚನ್ ನಲ್ಲಿ ಸಿಗುವ ಕಂಡೀಶನರ್ ಯಾವುದೆಂದು ಯೋಚನೆ ಮಾಡುತ್ತದ್ದೀರಾ? ಅದು ಬೇರ್ಯಾವುದೂ ಅಲ್ಲ ಶುದ್ಧ ಹಸುವಿನ ತುಪ್ಪ. ಅದ್ಹೇಗೆ ಎಂದು ನೀವೇ ಮುಂದೆ ಓದಿ;
ಉತ್ತಮ ಕಂಡೀಶನರ್;
ದೇಸೀ ತುಪ್ಪ ಉತ್ತಮ ಕಂಡೀಶನರ್. ಎರಡು ಟೇಬಲ್ ಸ್ಪೂನ್ ತುಪ್ಪವನ್ನು ಒಂದು ಟೇಬಲ್ ಸ್ಪೂನ್ ಆಲಿವ್ ಆಯಿಲ್ ಜೊತೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. 20 ನಿಮಿಷಗಳ ನಂತರ ಶ್ಯಾಂಪುವಿನಿಂದ ತೊಳೆಯಿರಿ.
ಸ್ಪ್ಲಿಟ್ ಎಂಡ್ ಗಳಿಂದ ಮುಕ್ತಿ;
ಮೂರು ಟೇಬಲ್ ಸ್ಪೂನ್ ತುಪ್ಪವನ್ನು ಒಡೆದ ಕೂದಲುಗಳ ಮೇಲೆ ಚೆನ್ನಾಗಿ ಹಚ್ಚಿ. 15 ನಿಮಿಷಗಳ ನಂತರ ಕೂದಲನ್ನು ಬಾಚಿ, ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆಯಿರಿ. ಸ್ಪ್ಲಿಟ್ ಎಂಡ್ ಗಳಿಂದ ಮುಕ್ತಿ.
ಕೂದಲ ಬೆಳವಣಿಗೆ;
ಕೂದಲು ಉದ್ದ ಬೆಳೆಯಬೇಕು ಎಂದು ಬಯಸುವವರು ರಾತ್ರಿ ಮಲಗುವ ಮೊದಲು ಕೂದಲಿಗೆ ತುಪ್ಪ ಹಚ್ಚಿ ಮಲಗಬೇಕು. ಮರುದಿನ ಬೆಳಿಗ್ಗೆ ಆಮ್ಲಾ ಅಥವಾ ಈರುಳ್ಳಿ ರಸದಿಂದ ಕೂದಲನ್ನು ತೊಳೆಯಬೇಕು. ಹೀಗೆ ತಿಂಗಳಿಗೆ ಎರಡು ಬಾರಿ ಮಾಡಿದಲ್ಲಿ ನಿಮ್ಮ ಕೂದಲ ಬೆಳವಣಿಗೆ ಇಮ್ಮಡಿಯಾಗುತ್ತದೆ.
ಡ್ಯಾಂಡ್ರಫ್ ಸಮಸ್ಯೆ;
ಉಗುರು ಬೆಚ್ಚನೆಯ ತುಪ್ಪ ಮತ್ತು ಬಾದಾಮಿ ಎಣ್ಣೆಯ ಮಿಶ್ರಣದಿಂದ ತಲೆಗೆ ಚೆನ್ನಾಗಿ ಮಸಾಜ್ ಮಾಡಿ. 15 ನಿಮಿಷ ಬಿಟ್ಟು ರೋಸ್ ವಾಟರ್ ನಿಂದ ತಲೆಯನ್ನು ತೊಳೆಯಿರಿ. ಹೀಗೆ ತಿಂಗಳಿಗೆ ಎರಡು ಬಾರಿ ಮಾಡಿದರೆ ಡ್ಯಾಂಡ್ರಫ್ ಮಾಯ.
Comments are closed.