ಕರಾವಳಿ

ದನದ ವ್ಯಾಪಾರಿ ಸಾವು ಮುಚ್ಚಿಹಾಕಲು ಹಿರಿಯಡ್ಕ ಪೊಲೀಸರು ಭಜರಂಗಿಗಳಿಗೆ ಸಾತ್: ಉಡುಪಿ ಎಸ್ಪಿ

Pinterest LinkedIn Tumblr

ಉಡುಪಿ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಮಂಗಳೂರು ಮೂಲದ ದನದ ವ್ಯಾಪಾರಿ ಸಾವಿನ ಪ್ರಕರಣದಲ್ಲಿ ಬಜರಂಗದಳದ ಕಾರ್ಯಕರ್ತರ ಜೊತೆ ಪೊಲೀಸರು ಕೂಡ ಭಾಗಿಯಾಗಿದ್ದು ಪ್ರಕರಣಕ್ಕೆ ಸಂಭಂಧಿಸಿದಂತೆ ಹಿರಿಯಡ್ಕ ಪೊಲೀಸ್ ಠಾಣಾ ಎಸ್ ಐ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿದ್ದು,ಮೂವರನ್ನ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸದಂತೆ ಹತ್ತು‌ ಜನ ಬಜರಂಗ ದಳ ಕಾರ್ಯಕರ್ತರನ‌ ಬಂಧಿಸಲಾಗಿದ್ದು,ಇನ್ನಷ್ಟು ಅರೋಪಿಗಳನ್ನ ಬಂಧಿಸಲಾಗುತ್ತದೆಂದು ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.

ಮೇ.30 ರಂದು ಪೆರ್ಡೂರಿನ ಶೇನರಬೆಟ್ಟುವಿನಲ್ಲಿ ಅಕ್ರಮವಾಗಿ ಸ್ಕಾರ್ಪಿಯೋ ವಾಹನದಲ್ಲಿ ದನಗಳ ಸಾಗಾಟದ ಬಗ್ಗೆ ಮಾಹಿತಿ ಪಡೆದ ಬಂಜರಂಗ ದಳದ ತಂಡ ಪೊಲೀಸರ ಜೊತೆ ಸೇರಿ ದನಗಳ್ಳರ ವಾಹನವನ್ನು‌ ಅಡ್ಡಗಟ್ಟಿದೆ. ಈ ಸಂದರ್ಭ ದನದ ವ್ಯಾಪಾರಿ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ವಾಹನದಲ್ಲಿದ್ದ ಮೂವರು ತಪ್ಪಿಸಿಕೊಂಡು ಪರಾರಿಯಾಗಿದ್ದರು. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಂಗಳೂರಿನ ಜೋಕಟ್ಟೆ ನಿವಾಸಿ ಹುಸೆನಬ್ಬ ಅವರನ್ನು ಪೊಲೀಸ್ ಇಲಾಹೆ ಜೀಪಿನಲ್ಲಿ ಕುಳ್ಳೀರಿಸಿಕೊಂಡು ಹೋಗುವಗ ಅವರು ಸಾವನ್ನಪ್ಪಿದ್ದರು, ಸಾವನ್ನು ಮುಚ್ಚಿ ಹಾಕಲು ಹಿರಿಯಡ್ಕ ಪೊಲೀಸ್ ಎಸ್ಐ ಡಿ.ಎನ್ .ಕುಮಾರ್ ಮತ್ತು ಸಿಬಂದಿಗಳು ಪ್ರಯತ್ನಿಸಿದ ಬಗ್ಗೆ ಬೆಳಕಿಗೆ ಬಂದಿದ್ದು ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಸಿಟ್ಟಿಗೆದ್ದಿದ್ದ ಬಜರಂಗದಳದ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೆ ಹುಸೆನಬ್ಬ ಮೇಲೆ‌ಹಲ್ಲೆ ನಡೆಸಿದ್ದಾರೆ,ಅಷ್ಟೇ ಅಲ್ಲದೇ ಸ್ಕಾರ್ಪಿಯೋ ವಾಹನದ ಗಾಜುಗಳನ್ನು‌ಪುಡಿ ಪುಡಿ‌ ‌ಮಾಡಿದ್ದಾರೆ. ನಂತರ ಹುಸೆನಬ್ಬರನ್ನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಹುಸೆನಬ್ಬರನ್ನ ಜೀಪಲ್ಲಿ‌ ಕುರಿಸಿಕೊಂಡು ಬರುತ್ತಿದ್ದಾಗ ಗಂಭೀರ ಸ್ಥಿತಿಯಲ್ಲಿದ್ದ ಹುಸೆನಬ್ಬ ಜೀಪ್‌ನಲ್ಲೆ ಕೊನೆಯುಸಿರೆಳೆಯ್ಯುತ್ತಾರೆ. ತಮ್ಮ ಕೆಲಸಕ್ಕೆ ಕುತ್ತು ಬರುತ್ತದೆಂದು ತಿಳಿದ ಪೊಲೀಸರು ಬಜರಂಗದಳದ ಕಾರ್ಯಕರ್ತರ ಜೊತೆಗೂಡಿ ಮೃತ ದೇಹವನ್ನು ಘಟನೆ ನಡೆದ ಒಂದುವರೆ ಕಿಲೋ ಮೀಟರ್ ದೂರ ಇಟ್ಟು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಹಿರಿಯಡ್ಕ ಠಾಣಾಧಿಕಾರಿ ಅಕ್ರಮ ಗೋ ಸಾಗಾಟದ ಪ್ರಕರಣ ದಾಖಲಿಸಿದ್ದಲ್ಲದೇ ಸ್ವಲ್ಲ ಹೊತ್ತಿನ ನಂತರ ಅಸಹಜ ಸಾವಿನ ಇನ್ನೊಂದು ಪ್ರಕರಣ ದಾಖಲಿಸುತ್ತಾರೆ. ಅಷ್ಟರ ಬಳಿಕ ದಾಳಿಯಿಂದ ತಪ್ಪಿಸಿಕೊಂಡ ಇನ್ನಿಬ್ಬರು, ಅದು ಅಸಹಜ ಸಾವಲ್ಲ ಬಜರಂಗದಳದವರು ಹಲ್ಲೆ ನಡೆಸಿ ಕೊಲೆ ಮಾಡಿದ್ದ ಬಗ್ಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ,ಹಿರಿಯಡ್ಕ ಠಾಣೆಯಲ್ಲಿ‌ ಕೊಲೆ ಕೇಸು ದಾಖಲಾಗುತ್ತದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಮುಖ ಮೂವರು ಆರೋಪಿಗಳಾದ ಸುರೇಶ್ ಮೆಂಡನ್ ಅಲಿಯಾಸ್ ಸೂರಿ, ಪ್ರಸಾದ್ ಕೊಂಡಾಡಿಯನ್ನು ಬಳ್ಳಾರಿಯಲ್ಲಿ ಬಂಧಿಸಿಸ್ದ್ದು ತನಿಖೆಯಲ್ಲಿ ಹಿರಿಯಡ್ಕ ಪೊಲೀಸರು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಬಾಯ್ಬಿಡುತ್ತಾರೆ. ಹಿರಿಯಡ್ಕ ಎಸ್ಐ ಡಿ.ಎನ್‌. ಕುಮಾರ್, ಜೀಪು ಚಾಲಕ ಗೋಪಾಲ್ ಹಾಗೂ ಹೆಡ್ ಕಾನಸ್ಟೇಬಲ್ ಮೋಹನ್‌ ಕೋತ್ವಾಲ್ ಎಂಬ ಮೂವರು ಆರಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದನದ ವ್ಯಾಪಾರಿ ಸಾವಿನ ಬಹಿರಂಗ ಗೊಂಡಿದೆ. ಘಟನೆ ಬಗ್ಗೆ ಪೊಲೀಸರು ತಪ್ಪೋಪ್ಪಿಕೊಂಡಿದ್ದು ,ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ೧೫ ದಿನಗಳ ನ್ಯಾಯಂಗ ಬಂಧನ ವಿಧಿಸಿದೆ.

ಹುಸೇನಬ್ಬ ಅಸಹಜ ಸಾವು ಪ್ರಕರಣದಲ್ಲಿ ಈವರೆಗೂ ಒಟ್ಟು ಹತ್ತು ಜನ ಬಜರಂಗದಳದ ಕಾರ್ಯಕರ್ತರನ್ನ ಬಂಧಿಸಲಾಗಿದೆ. ಇನ್ನಷ್ಟು ಆರೋಪಿಗಳಿಗೊಸ್ಕರ ಪೊಲೀಸರು ಬಲೆ‌ ಬೀಸಿದ್ದಾರೆ. ಅರೋಪಿಗಳನ್ನ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ವಿನ ತನಿಖೆ ಉದ್ದೇಶದಿಂದಾಗಿ ನಾಲ್ಬರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

Comments are closed.