ಪ್ರತಿ ಬಿಸಿ ರಕ್ತದ ಪ್ರಾಣಿಯ ಜೀವ ರಕ್ತ ಚಲನೆಗೆ ಅವಲಂಬಿತವಾಗಿದೆ.ರಕ್ತ ಎಂದರೆ ನಮ್ಮ ಕಣ್ಣಿಗೆ ಕಟ್ಟುವುದು ಗಾಢ ಕೆಂಪು ಬಣ್ಣ.ಈ ಬಣ್ಣಕ್ಕೆ ಕಾರಣ ಹಿಮೋಗ್ಲೊಬಿನ್ ಎಂಬ ಕಬ್ಬಿಣ ಆಧರಿತ ಪ್ರೋಟೀನು.ಆದ್ದರಿಂದ ದೇಹದಲ್ಲಿನ ಹಿಮೋಗ್ಲೋಬಿನ್ ಆರೋಗ್ಯವಾಗಿರುವುದು ಅವಶ್ಯಕವಾಗಿದೆ. ನಿಮ್ಮ ದೇಹದಲ್ಲಿನ ರಕ್ತ ಹೀನತೆ ಸಮಸ್ಯೆಯನ್ನು ಕಡಿಮೆ ಮಾಡಲು ಈ ಸೇಬು ತುಂಬ ಸಹಕಾರಿಯಾಗುತ್ತದೆ.
.
ದಿನಕ್ಕೊಂದು ಸೇಬು
ಸೇಬು ಹಣ್ಣಿನಲ್ಲಿ ಉತ್ತಮ ಕಬ್ಬಿಣಾಂಶ ಮತ್ತು ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ.ಪ್ರತಿದಿನ ಒಂದು ಸೇಬು ಸೇವಿಸುವುದು ಉತ್ತಮ.ಅದರಲ್ಲೂ ರಕ್ತ ಹೀನತೆಗೆ ಹಸಿರು ಸೇಬು ಉತ್ತಮ.ಸೇಬು ಹಣ್ಣಿನ ರಸಕ್ಕೆ ಸ್ವಲ್ಪ ಲಿಂಬೆ ರಸವನ್ನು,ಮತ್ತು ಸ್ವಲ್ಪ ಪ್ರಮಾಣದಲ್ಲಿ ಶುಂಠಿ ರಸವನ್ನು ಸೇರಿಸಿ ಸೇವಿಸಿದರೆ ರಕ್ತ ಹೀನತೆ ಶೀಘ್ರವಾಗಿ ಕಡಿಮೆಯಾಗುತ್ತದೆ.
ಪೇರಳೆ ಹಣ್ಣು :
ನೀವು ವಾರಕ್ಕೆ ಮೂರು ಪೇರಳೆ ಹಣ್ಣು ಸೇವನೆಯಿಂದ ನಿಮ್ಮ ಹಿಮೋಗ್ಲೋಬಿನ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಿ.
ವಿಟಮಿನ್ ಸಿ ಹೆಚ್ಚು ಸೇವಿಸಿ
ಒಂದು ವೇಳೆ ವಿಟಮಿನ್ ಸಿ ಯ ಕೊರತೆಯಿಂದ ರಕ್ತ ಹೀನತೆ ಉಂಟಾದರೆ ವಿಟಮಿನ್ ಸಿ ಪ್ರೋಟಿನ್ ಅಂಶ ಹೆಚ್ಚು ಇರುವ ಆಹಾರವನ್ನು ಸೇವಿಸುವುದು ಉತ್ತಮ. ಪಪಾಯ,ಕಿತ್ತಾಳೆ,ಲಿಂಬೆ,ಚಕ್ಕೊತ ದೊಣ್ಣೆ ಮೆಣಸು,ಮತ್ತು ಟೋಮೆಟೋ ಮತ್ತು ಪಾಲಕ್ ಸೊಪ್ಪಿನಲ್ಲಿ ಅಧಿಕವಾಗಿ ವಿಟಮಿನ್ ಸಿ ಇದೆ
ಬೀಟ್ರೋಟ್ :
ನೀವು ಪ್ರತಿದಿನ ಅಥವಾ ಊಟದಲ್ಲಿ ಬೀಟ್ರೋಟ್ ಸೇವಿಸುವುದು ತುಂಬ ಒಳಿತು ಬೀಟ್ರೋಟ್ ಜ್ಯೂಸ್ ಅಥವಾ ಬೀಟ್ರೋಟ್ ಪಲ್ಯ ಸೇವಿಸಿ ಹಿಮೋಗ್ಲೋಬಿನ್ ಸಮಸ್ಯೆಯಿಂದ ದೂರವಿರಿ.
ದಾಳಿಂಬೆ:
ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಸಮಸ್ಯೆ ಕಂಡುಬಂದರೆ ದಾಳಿಂಬೆ ಸೇವನೆ ಮಾಡಿದ್ರೆ ತುಂಬ ಒಳಿತು ಇದು ನಿಮ್ಮ ಆರೋಗ್ಯಕ್ಕೆ ತುಂಬ ಸಹಾಯ ಮಾಡಲಿದೆ.
Comments are closed.