ಕರಾವಳಿ

ತಂಬಾಕು ಒಂದು ವಾಣಿಜ್ಯ ಬೆಳೆ : ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಸರಿಯೇ ತಪ್ಪೆ..?

Pinterest LinkedIn Tumblr

ಮಂಗಳೂರು ಜೂನ್ 4 : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ಆಚರಿಸಲಾಯಿತು.

ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಮ್.ಆರ್. ರವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡುತ್ತಾ ತಂಬಾಕು ಉತ್ಪನ್ನಗಳ ದುಷ್ಪರಿಣಾಮ ಹಾಗೂ ಮಾರಾಟ ನಿಷೇಧ ಕುರಿತಂತೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾದರು ನಾವು ಈ ವಿಷಯದ ಬಗ್ಗೆ ಯೋಚಿಸ ಬೇಕಾಗಿದೆ. ಯಾಕೆಂದರೆ ಇದು ಒಂದು ವಾಣಿಜ್ಯ ಬೆಳೆಯಾಗಿದ್ದು, ತಂಬಾಕು ಉತ್ಪನ್ನಗಳಲ್ಲಿ ನಮ್ಮ ದೇಶವು ವಿಶ್ವದಲ್ಲಿಯೇ 2 ನೇ ಸ್ಥಾನದಲ್ಲಿದೆ.

ಗ್ರಾಮೀಣ ಭಾಗದ ಎಷ್ಟೋ ಜನರಿಗೆ ಬೀಡಿ ಉಧ್ಯಮವೇ ಜೀವನಾಧಾರವಾಗಿದೆ. ಅದ್ದರಿಂದ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಇಂತಹ ಬಡ ಜನರ ಜೀವನೋಪಾಯಕ್ಕೆ ತೊಂದರೆಯು ಆಗಬಹುದು. ಆದ್ದರಿಂದ ಸಮಾಜದ ಪ್ರತಿಯೊಬ್ಬರಿಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸ ಬೇಕಾಗಿದೆ. ಆರೋಗ್ಯ ಇಲಾಖೆಯೊಂದಿಗೆ ಇತರ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳು ಸಹಕಾರಿಸಿ ಕಾರ್ಯ ಪ್ರರ್ವತರಾಗಬೇಕಾಗಿದೆ ಎಂದರು.

ತಂಬಾಕು ಉತ್ಪನ್ನ ಸೇವನೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೊರತಂದ ಮಾಹಿತಿ ಪುಸ್ತಕವನ್ನು ನಿಟ್ಟೆ ಯುನಿರ್ವಸಿಟಿ ಕುಲಪತಿ ಡಾ|| ಸತೀಶ್ ಭಂಡಾರಿ, ಬಿಡುಗಡೆ ಮಾಡಿದರು. ಪುಸ್ತಕದ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಆರೋಗ್ಯ ಅರಿವು ಮೂಡಿಸುವುದು. ಯಾವುದೇ ಸಾರ್ವಜನಿಕ ಸ್ಥಳ ಶಾಲಾ-ಕಾಲೇಜುಗಳಲ್ಲಿ ಈ ಕಾಯ್ದೆ ಉಲ್ಲಂಘನೆಯಾದಲ್ಲಿ ಆ್ಯಪ್ ಮೂಲಕ ಪೊಲೀಸರಿಗೆ ದೂರು ಅಥವಾ ತಂಬಾಕು ನಿಷೇಧಕೋಶಕ್ಕೆ ನೇರವಾಗಿ ದೂರು/ವರದಿಯನ್ನು ನೀಡಲು ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಇದರ ಸಹಾಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಡಾ|| ಸತೀಶ್ ಭಂಡಾರಿ ಹೇಳಿದರು.

ಉಪ ಪೊಲೀಸ್ ಆಯುಕ ಹನುಮಂತ ರಾಯ ಅವರು ತಂಬಾಕು ನಿಷೇಧದ ‘ಕಿಯೋಸ್ಕ್’ನ್ನು ಉದ್ಘಾಟಿಸಿ,ಸಹಿ ಅಂದೋಲನವನ್ನು ನೆರವೆರಿಸಿದರು. ಕಿಯೋಸ್ಕ್‍ನ್ನು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇದರ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಅರಿವು ಮೂಡಿಸುವುದರೊಂದಿಗೆ 10 ಮಿಲಿಯನ್ ಜನರ ಸಹಿ ಸಂಗ್ರಹಿಸುವ ಮಹತ್ತರ ಉದ್ದೇಶವನ್ನು ಇದು ಒಳಗೊಂಡಿದೆ. ಇನ್ನೋರ್ವ ಯೆನಪೋಯ ಮೆಡಿಕಲ್ ಕಾಲೇಜು ಉಪ ಪ್ರಾಂಶುಪಾಲ ಡಾ|| ಶ್ಯಾಮ್ ಭಟ್ ಐಇಸಿ ಸಾಮಾಗ್ರಿಗಳಾದ ಭಿತ್ತಿಪತ್ರ, ಪ್ಲಿಪ್ ಚಾರ್ಟ್ ಹಾಗೂ ಹಾವು ಏಣಿ ಆಟ ಐಇಸಿ ಬೋರ್ಡನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲಣ ಗೌಡ ಪಾಟೀಲ್ ವಹಿಸುತ್ತಾ, ತಂಬಾಕು ನಿಷೇಧ ಘಟಕದೊಂದಿಗೆ ಆರೋಗ್ಯ ಇಲಾಖೆಯು ಉತ್ತಮ ಸೇವೆಗಳನ್ನು ನೀಡುವುದರೊಂದಿಗೆ ಜಾಗೃತಿಯನ್ನು ಮೂಡಿಸುತ್ತಿದೆ. ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಿದಾಗ ನಮ್ಮ ಸೇವೆ ಸಾರ್ಥಕವೆನಿಸುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಂ ರಾಮಕೃಷ್ಣ ರಾವ್ ಪ್ರಾಸ್ತವಿಕ ಭಾಷಣವನ್ನು ಮಾಡಿದರು. ತಂಬಾಕು ಮತ್ತು ಹೃದಯ ರೋಗಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಡಾ|| ಜಗನ್ನಾಥ್ ಹಾಗೂ ಕಿಶೋರ ಡಿ ಸಿಲ್ವ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ವೆನ್‍ಲಾಕ್ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ|| ಶರತ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ರಾಜೇಶ್, ಜ್ಯೋತಿ ಕೆ ವಂದಿಸಿದರು.

Comments are closed.