ಕರಾವಳಿ

ಶಾಸಕ ವೇದವ್ಯಾಸ್ ಕಾಮತ್ ಕುದ್ರೊಳಿ ಶ್ರೀ ಕ್ಷೇತ್ರಕ್ಕೆ ಭೇಟಿ ; ಚಿಲಿಂಬಿಯಲ್ಲಿ ಸಾಯಿಬಾಬಾರ ಪವಿತ್ರ ಪಾದುಕಾ ದರ್ಶನ

Pinterest LinkedIn Tumblr

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಬಳಿಕ ಡಿ. ವೇದವ್ಯಾಸ್ ಕಾಮತ್ ರವರು ಜಿಲ್ಲೆಯ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಹಾಗೂ ಚಿಲಿಂಬಿಯ ಶಿರ್ಡಿ ಸಾಯಿಬಾಬ ಮಂದಿರಕ್ಕೆ ಭೇಟಿ ಇತ್ತು ಶ್ರೀದೇವರ ಪ್ರಸಾದ ಸ್ವೀಕರಿಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸದ್ಗುರು ಶ್ರೀ ನಾರಾಯಣ ಗುರು ಸ್ವಾಮೀಜಿ ಯವರ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಗುರುಗಳ ಭವ್ಯ ಮೂರ್ತಿಗೆ ಶಾಸಕರು ಮಾಲಾರ್ಪಣೆ ಗೈದರು .

ಈ ಸಂದರ್ಭದಲ್ಲಿ ಶ್ರೀದೇವಳದ ಅಧ್ಯಕ್ಷರಾದ ಸಾಯಿರಾಂ , ರವಿಶಂಕರ್ ಮಿಜಾರ್ , ವಸಂತ್ ಜೆ ಪೂಜಾರಿ , ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ , ಸ್ಥಳೀಯ ಸದಸ್ಯ ರಾಜೇಂದ್ರ, ಬಿ ಜೆ ಪಿ ದಕ್ಷಿಣ ಮಂಡಲ ಕಾರ್ಯದರ್ಶಿ ರಮೇಶ್ ಕಂಡೇಟು, ಉದ್ಯಮಿ ವಾಸುದೇವ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಶಾಸಕರಿಂದ ಶ್ರೀ ಸಾಯಿಬಾಬಾರ ಪವಿತ್ರ ಪಾದುಕಾ ದರ್ಶನ:

ನಗರದ ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿದ ಅವರು ಸಾಯಿಬಾಬರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವಿಕರಿಸಿದ ಬಳಿಕ ಶಿರಿಡಿಯಿಂದ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬ ಮಂದಿರಕ್ಕೆ ಆಗಮಿಸಿರುವ ಶ್ರೀ ಸಾಯಿಬಾಬಾರ ಪವಿತ್ರ ಪಾದುಕಾ ದರ್ಶನ ಮಾಡಿದರು.

ಸಾಯಿಬಾಬರವರು ಧರಿಸುತ್ತಿದ್ದ ಶ್ರೀ ಪಾದುಕೆಯನ್ನು ದರ್ಶನಾರ್ಥವಾಗಿ ಶಿರಿಡಿಯಿಂದ ತಂದು ಪೂಜಿಸುವ ಸುವರ್ಣಾವಕಾಶ ಚಿಲಿಂಬಿಯ ಸಾಯಿಬಾಬ ಮಂದಿರಕ್ಕೆ ಪ್ರಾಪ್ತವಾಗಿದ್ದು, ಮಂಗಳವಾರ ಸಾಯಂಕಾಲ ಶರವು ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಶ್ರೀ ಸಾಯಿಬಾಬರ ಪವಿತ್ರ ಪಾದುಕೆಯನ್ನು ಸ್ವಾಗತಿಸಿ ಭವ್ಯ ಮೆರವಣಿಗೆ ಮೂಲಕ ಚಿಲಿಂಬಿಯ ಸಾಯಿಬಾಬ ಮಂದಿರಕ್ಕೆ ತರಲಾಗಿತ್ತು.. ಚಿಲಿಂಬಿಯ ಸಾಯಿಬಾಬ ಮಂದಿರದಲ್ಲಿ ಬುಧವಾರ ಹಾಗೂ ಗುರುವಾರ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳು ಶ್ರೀ ಸಾಯಿ ಪಾದುಕ ದರ್ಶನ ಮಾಡಿದ್ದಾರೆ.

Comments are closed.