ಕರಾವಳಿ

ಮೊಳಕೆ ಕಾಲುಗಳಿಂದ ಸಿಗುವುದು ಹಲವು ಆರೋಗ್ಯಕರ ಅಂಶ

Pinterest LinkedIn Tumblr

ಕಾಳುಗಳ ಸೇವನೆ ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ, ಕಾಳುಗಳಲ್ಲಿ ಹಲವಾರು ಪೋಷಕಾಂಶಗಳು ಅಡಗಿರುತ್ತವೆ. ಅದರಲ್ಲೂ ಮೊಳಕೆ ಕಟ್ಟಿದ ಕಾಳುಗಳಲ್ಲಿ ಹಲುವು ರೋಗನಿರೋಧಕ ಶಕ್ತಿಗಳಿವೆ, ಮೊಳಕೆಕಾಳಿನಲ್ಲಿ ಹಲುವು ಆರೋಗ್ಯಕ ಅಂಶಗಳು ಇವೆ. ಅದರಲ್ಲೂ ಮನುಷ್ಯನ ದೇಹಕ್ಕೆ ಮೊಳಕೆಕಾಳು ಹೇರಳವಾಗಿ ಬೇಕಾಗುತ್ತವೆ. ದೇಹದ ಆರೋಗ್ಯವನ್ನ ಕಾಪಾಡಲು ಮೊಳಕೆ ಕಾಲುಗಳು ಬಹಳ ಮುಖ್ಯ, ಹೇಗೆ ಅಂತೀರಾ…? ಇಲ್ಲಿದೆ ನೋಡಿ.

* ತೂಕ ಇಳಿಸುವರಿಗೆ
ತೂಕ ಇಳಿಸಲು ಡಯಟ್ ಮಾಡುವವರಮ ಆಹಾರದಲ್ಲಿ ಮೊಳಕೆ ಕಾಳು ಇರಲೇ ಬೇಕು. ಇದರಲ್ಲಿ ಫೈಬರ್ ಅಂಶ ಸಾಕಷ್ಟಿದ್ದು, ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದಾಗಿ ಆಗಾಗ ತಿನ್ನಬೇಕಾಗುವುದಿಲ್ಲ. ನಾಲಿಗೆ ಮೇಲೂ ಕಡಿವಾಣ ಹಾಕಬಹುದು.

* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಮೊಳಕೆ ಕಾಳಿನಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟಿರುವುದರಿಂದ ರೋಗ ನಿರೋಧಕ ಶಕ್ತಿಯಿದೆ. ಅಂತೆಯೇ ಇದರಲ್ಲಿ ವಿಟಮಿನ್ ಎ ಅಂಶವೂ ಇದೆ

* ಜೀರ್ಣಕ್ರಿಯೆಗೆ
ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣವಾಗಿಸಲು ಸಹಕರಿಸುತ್ತದೆ.

* ರಕ್ತ ಪರಿಚಲನೆಗೆ
ರಕ್ತ ಪರಿಚಲನೆಗೆ ಮೊಳಕೆ ಕಾಳಿನ ಸೇವನೆ ಉತ್ತಮ. ಇದರಲ್ಲಿ ಕಬ್ಬಿಣ ಮತ್ತು ತವರದ ಅಂಶ ಸಾಕಷ್ಟಿದ್ದು, ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಎಷ್ಟು ಬೇಕೋ ಅಷ್ಟು ಇರುವಂತೆ ನೋಡಿಕೊಳ್ಳುತ್ತದೆ.

Comments are closed.