ಕರಾವಳಿ

ಹೊಟ್ಟೆಯಲ್ಲಿರುವ ಜಂತು ಹುಳು ನಿವಾರಣೆಗೆ ಮನೆಮದ್ದು

Pinterest LinkedIn Tumblr

ಹೊಟ್ಟೆಯಲ್ಲಿ ಮನೆ ಮಾಡುವ ಜಂತುಗಳಿಗೆ ಮುಕ್ತಿ ನೀಡುವುದು ಬಹಳ ಕಷ್ಟ. ಇವುಗಳು ಹೊಟ್ಟೆಯಲ್ಲಿ ಸೇರಿಕೊಂಡರೆ ಅದರ ಭಾದೆ ಹೇಳತೀರದು. ಏನನ್ನೇ ತಿಂದರು, ಏನೇ ಮಾಡಿದರು ಹೊಟ್ಟೆಯಲ್ಲಿನ ನೋವು ಮಾತ್ರ ಕಡಿಮೆಯಾಗುವುದಿಲ್ಲ. ಇಂತಹ ನೋವನ್ನ ಕಡಿಮೆ ಮಾಡಲು ಇಂಗ್ಲಿಷ್ ಔಷಧಿಗಳು ಸಹಾಯ ಮಾಡುವುದಿಲ್ಲ. ಅದಕ್ಕೆ ಮನೆಯಲ್ಲಿಯೇ ಕೆಲವು ಸರಳ ಉಪಾಯಗಳನ್ನ ಬಳಸಿ ಇದಕ್ಕೆ ಪರಿಹಾರ ಕಂಡುಕೊಳ್ಳ ಬಹುದು.

* ಸೇಬನ್ನು ರಾತ್ರಿಯ ಹೊತ್ತು ಹಲವು ದಿನಗಳವರೆಗೆ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಗಳು ಮಲದ ಜೊತೆ ಹೊರಹೋಗುತ್ತವೆ. ಹಾಗು ಜಂತುಗಳು ಸಹ ಆಗುವುದಿಲ್ಲ.
* ಬೀವಿನ ಸೊಪ್ಪು, ಕೊತ್ತಂಬರಿ, ಶುಂಠಿ, ಮೆಣಸಿನ ಕಾಯಿ, ಉಪ್ಪು ಮತ್ತು ಹುಣಸೇ ಹಣ್ಣನ್ನು ಬೆರೆಸಿ, ಅರೆದು ವಾರಕ್ಕೊಮ್ಮೆ ಅದನ್ನು ಬಿಸಿ ಅನ್ನಕ್ಕೆ ಕಲೆಸಿ ತಿನ್ನುತ್ತಾ ಬಂದರೆ ಹೊಟ್ಟೆಯಲ್ಲಿರುವ ಜಂತು ಹುಳು ನಾಶವಾಗುತ್ತದೆ.
* ಕಲ್ಲಂಗಡಿ ಹಣ್ಣಿನ ಬೀಜದ ತಿರುಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿರುವ ಜಂತು ನಾಶವಾಗುತ್ತದೆ.
* ಒಣಗಿದ ಮಾವಿನ ಬೀಜದ ಅಂದರೆ ಮಾವಿನ ಹೋಟೆಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಮಕ್ಕಳ ಹೊಟ್ಟೆಯಲ್ಲಿ ಬೆಳೆಯುವ ಜಂತುಗಳು ಸಾಯುತ್ತವೆ.
* ಪರಂಗಿ (ಪಪ್ಪಾಯ) ಕಾಯಿಯ ರಸವನ್ನು ಜೇನುತುಪ್ಪದೊಂದಿಗೆ ಬಿಸಿನೀರಿನಲ್ಲಿ ಬೆರೆಸಿ ಕುಡಿಸುವುದರಿಂದ ಮಕ್ಕಳಿಗೆ ಹೊಟ್ಟೆಯಲ್ಲಿ ಜಂತು ಹುಳುಗಲಿದ್ದರೆ ಸತ್ತು ಮಲದ ಮೂಲಕ ಹೊರಬರುತ್ತವೆ.
* ಪರಂಗಿ ಹಣ್ಣಿನ ಬೀಜಗಳನ್ನು ಜೇನುತುಪ್ಪದೊಂದಿಗೆ ತಿನ್ನಿಸುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳುಗಳು ಮಲದ ಮೂಲಕ ಹೊರಬರುತ್ತವೆ.
* ಪರಂಗಿ ಹಣ್ಣನ್ನು 3-4 ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಜಂತು ಹುಳುಗಳು ಹೊಟ್ಟೆಯಲ್ಲೇ ಸಾಯುತ್ತವೆ.

Comments are closed.