ಹೊಸದಾಗಿ ತಾಯಿ ಆದ ನೀವು ಚಿಕ್ಕ ಚಿಕ್ಕ ವಿಷಯಗಳಿಗೂ ಗಾಬರಿಗೊಂಡು ನಂತರ ಇಷ್ಟೇನಾ ಇದು ಎಂದು ನಕ್ಕಿರುತ್ತೀರ. ಹೊಸ ತಾಯಿಯಾಗಿ ನೀವು ತಲೆ ಕೆಡಿಸಿಕೊಳ್ಳುವ ಇನ್ನೊಂದು ವಿಷಯ ಎಂದರೆ ಅದು ನಿಮ್ಮ ನವಜಾತ ಶಿಶುವಿನಲ್ಲಿ ಅಥವಾ ಚಿಕ್ಕ ಮಗುವಿನಲ್ಲಿ ಕೂದಲು ಉದುರುವ ಸಮಸ್ಯೆ.
ಎಲ್ಲಾ ನವಜಾತ ಶಿಶುಗಳು ಮೊದಲ 6 ತಿಂಗಳುಗಳ ಕಾಲ ಕೂದಲನ್ನು ಕಳೆದುಕೊಳ್ಳುತ್ತವೆ. ಹುಟ್ಟಿದಾಗ ಇರುವ ಕೂದಲು ಉದುರಿದ ಮೇಲೆ ಹುಟ್ಟುವ ಕೂದಲಿಗೂ ಹುಟ್ಟಿದಾಗ ಇದ್ದ ಕೂದಲಿಗೂ ವ್ಯತ್ಯಾಸ ಇರುತ್ತದೆ. ಆದರೆ ಕೆಲವೊಂದು ಬಾರಿ ತೀವ್ರ ಕೂದಲುದುರುವಿಕೆ ಉಂಟಾದರೆ ಅಂತಹ ಸಮಯದಲ್ಲಿ ವೈದ್ಯಕೀಯ ಮಧ್ಯಸ್ಥಿಕೆ ಬೇಕಾಗುತ್ತದೆ.
ಮಕ್ಕಳಲ್ಲಿ ಕೂದಲು ಉದುರುವಿಕೆಗೆ ತಪ್ಪಿಸಲು ದಾರಿಗಳು :
ನಿಮ್ಮ ಮಗುವಿನ ಕೂದಲು ಚೆನ್ನಾಗಿ ನೋಡಿಕೊಂಡು ಉದುರದಂತೆ ಮಾಡಲು ನೀವು ಕೆಲವೊಂದು ವಿಷಯಗಳನ್ನ ಪಾಲಿಸಬೇಕು. ಈ ಸಲಹೆಗಳನ್ನ ಪಾಲಿಸುವ ಮೂಲಕ ನೀವು ನಿಮ್ಮ ಮಗುವಿನ ಕೂದಲು ಉದುರುವುದನ್ನು ನಿವಾರಿಸಬಹುದು ಮತ್ತು ತಡೆಯಬಹುದು. ಇಲ್ಲಿವೆ ನೋಡಿ ಅದು :
೧. ನಿಮ್ಮ ಮಗುವು ಒಂದು ಭಂಗಿಯಲ್ಲಿ ಮಲಗಬಹುದು ಅಥವಾ ಒಂದೇ ಸ್ಥಿತಿಯಲ್ಲಿ ತಲೆಯನ್ನು ಇಟ್ಟುಕೊಂಡು ಮಲಗಬಹುದು. ಹಾಗಿದ್ದರೆ, ನಿಮ್ಮ ಮಗುವನ್ನು ಸ್ವಲ್ಪ ಸಮಯವಾದರೂ ಅದರ ಹೊಟ್ಟೆಯನ್ನು ಕೆಳಗೆ ಮಾಡಿ ಮಲಗಿಸಿ.
೨. ಹೀಗೆ ಹೊಟ್ಟೆ ಮೇಲೆ ಮಲಗಿಸುವುದರಿಂದ ಮಗುವಿನ ದೈಹಿಕ ಬೆಳವಣಿಗೆ ಕೂಡ ವೃದ್ಧಿಸುತ್ತದೆ ಮತ್ತು ಕೂದಲು ಉದುರುವಿಕೆಯು ಕಡಿಮೆ ಆಗುತ್ತದೆ. ಏಕೆಂದರೆ ಅವರು ಹಾಗೆ ಮಲಗುವು ಮೂಲಕ ತಲೆ ಕೂದಲು ತಲೆದಿಂಬಿಗೆ ಉಜ್ಜಾಡುವುದು ತಪ್ಪುತ್ತದೆ.
೩. ನಿಮ್ಮ ಮಗುವಿನ ಕೂದಲನ್ನು ಪದೇ ಪದೇ ಬಾಚಬೇಡಿ.
೪. ಮಗುವಿಗೆ ಜುಟ್ಟನ್ನು ಬಿಗಿಯಾಗಿ ಕಟ್ಟಬೇಡಿ.
೫. ಒಂದು ವೇಳೆ ನಿಮ್ಮ ಮಗುವಿಗೆ ಆರು ತಿಂಗಳು ಆದ ನಂತರವೂ ಕೂದಲು ಉದುರುತ್ತಿದ್ದರೆ, ವೈದ್ಯಕೀಯ ಸಹಾಯ ಪಡೆಯಿರಿ.
ಒಟ್ಟಾರೆಯಾಗಿ ಹೇಳುವುದಾದರೆ, ನಿಮ್ಮ ಮಗುವಿನ ಮೊದಲ ಆರು ತಿಂಗಳುಗಳ ಕಾಲದ ಕೂದಲು ಉದುರುವಿಕೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಮೊದಲ ಆರು ತಿಂಗಳುಗಳ ಕಾಲ ನಿಮ್ಮ ಮಗುವಿನ ಕೂದಲು ಉದುರುವುದು ಸಹಜ. ನವಜಾತ ಮಕ್ಕಳಲ್ಲಿ ಕೂದಲುದುರುವಿಕೆಯ ಬಗೆಗಿನ ಈ ಲೇಖನ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುತ್ತೀನಿ.
Comments are closed.