ಕರಾವಳಿ

ವಿಟ್ಲ ಘರ್ಷನೆ ಹಿನ್ನೆಲೆ : ಜಿಲ್ಲೆಯಾದ್ಯಂತ ಮೇ‌ 22ರ ವರೆಗೆ ಮತ್ತೆ 144 ಸೆಕ್ಷನ್ ಜಾರಿ

Pinterest LinkedIn Tumblr

ಮಂಗಳೂರು, ಮೇ 20: ಬಿಜೆಪಿ ವಿಶ್ವಾಸಮತ ಯಾಚನೆ ಹಿನ್ನೆಲೆ ಶನಿವಾರ ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗಿದ್ದ ನಿಷೇದಾಜ್ಞೆಯನ್ನು ಮುಂದುವರಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ಭಾಗದಲ್ಲಿ ನಿಷೇದಾಜ್ಞೆಯ ನಡುವೆಯೂ ಶನಿವಾರ ಘರ್ಷನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ‌ 22ರ ಬೆಳಗ್ಗೆ 10 ಗಂಟೆಯವರೆಗೆ 144 ಸೆಕ್ಷನ್ ನಿಷೇದಾಜ್ಞೆ ಮುಂದೂಡಲಾಗಿದೆ.

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಹೊರತುಪಡಿಸಿ ಜಿಲ್ಲೆಯಾದ್ಯಂತ ಮೇ‌ 22ರ ವರೆಗೆ ನಿಷೇದಾಜ್ಞೆ ಜಾರಿಯಲ್ಲಿರುತ್ತದೆ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

Comments are closed.