ಕರಾವಳಿ

ಅಕ್ರಮ ಚಿನ್ನ ಸಾಗಾಟ :ಮಂಗಳೂರು ವಿಮಾನ ನಿಲ್ದಾಣದಲ್ಲಿ ರೂ.66.67 ಲಕ್ಷ ಮೌಲ್ಯದ ಚಿನ್ನ ವಶ

Pinterest LinkedIn Tumblr

ಮಂಗಳೂರು, ಮೇ 18: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಮಂಗಳೂರು ಕಂದಾಯ ಗುಪ್ತಚರ (ಡಿಆರ್‌ಐ) ವಿಭಾಗದ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನದಲ್ಲಿ ಚಿನ್ನ‌ ಪತ್ತೆಯಾಗಿದ್ದು, 2 ಕೆಜಿ 116 ಗ್ರಾಂ ತೂಕದ 66.67 ಲಕ್ಷ ರೂ. ಮೌಲ್ಯದ ಚಿನ್ನವನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ ಎಸ್‌ಜಿ 479 ಸಂಖ್ಯೆಯ ಸ್ಪೆಷಲ್ ಜೆಟ್ ವಿಮಾನದಲ್ಲಿ ಈ ಚಿನ್ನವನ್ನು ಸಾಗಾಟ ಮಾಡಲಾಗಿದೆ. ಚಿನ್ನ ಸಾಗಾಟದ ಖಚಿತ ಮಾಹಿತಿ ಪಡೆದ ಡಿಆರ್‌ಐ ಅಧಿಕಾರಿಗಳು ವಿಮಾನವನ್ನು ತಪಾಸಣೆ ನಡೆಸಿದಾಗ ವಿಮಾನದಲ್ಲಿ ತಲಾ ಒಂದು ಕೆಜಿ ತೂಕದ ಎರಡು ಚಿನ್ನದ ಗಟ್ಟಿಗಳು ಹಾಗೂ 116.640 ಗ್ರಾಂನ ಒಂದು ಸಣ್ಣ ಚಿನ್ನದ ಬಿಲ್ಲೆ ಪತ್ತೆಯಾಗಿದೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ವಿಮಾನದ ಶೌಚಾಲಯದ ಮೇಲ್ಬಾಗದಲ್ಲಿ ಈ ಚಿನ್ನ ಬಚ್ಚಿಡಲಾಗಿತ್ತು.

ಅಕ್ರಮ ಚಿನ್ನ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಮಂಗಳೂರು ಕಂದಾಯ ಗುಪ್ತಚರ ವಿಭಾಗದ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Comments are closed.