ಕರಾವಳಿ

ನಗರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಗಲಭೆ ರಹಿತ, ಶಾಂತಿ-ನೆಮ್ಮದಿಗಾಗಿ ತನ್ನನ್ನು ಬೆಂಬಲಿಸುವಂತೆ ಶ್ರೀಕರ ಪ್ರಭು ಕರೆ

Pinterest LinkedIn Tumblr

ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಪರ ವಿವಿಧೆಡೆ ಯುವಕರು ಸ್ವಯಂ ಪ್ರೇರಿತರಾಗಿ ಶ್ರೀಕರ ಪ್ರಭು ಅವರನ್ನು ಬೆಂಬಲಿಸಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ಸ್ವತಃ ಅಭ್ಯರ್ಥಿ ಶ್ರೀಕರ ಪ್ರಭು ನಗರದ ವಿವಿಧ ಕಡೆಗಳಲ್ಲಿ ರೋಡ್ ಶೋ ನಡೆಸಿ ಮತದಾರರ ಗಮನ ಸೆಳೆದಿದ್ದಾರೆ. ಮಂಗಳೂರಿನ ಉರ್ವ ಮಾರುಕಟ್ಟೆ, ಉರ್ವಾಸ್ಟೋರ್ಸ್, ಕೊಟ್ಟಾರ ಮೊದಲಾದೆಡೆ ಪ್ರಚಾರ ನಡೆಸಿದ ಶ್ರೀಕರ ಪ್ರಭು, ಮತದಾರರಿಗೆ ಮನವಿ ಮಾಡಿದ್ದಾರೆ.

ಮಂಗಳೂರಿನ ಪ್ರಮುಖ ಪರಿಸರವಾಗಿರುವ ಶಿವಭಾಗ್, ಬೆಂದೂರ್ ವೆಲ್, ಬಲ್ಮಠ ಹಾಗೂ ಮಲ್ಲಿಕಟ್ಟೆ ಪ್ರದೇಶದಲ್ಲಿ ಪಾದಯಾತ್ರೆ ನಡೆಸುವ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದರು, ಅಭ್ಯರ್ಥಿ ಬಗ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಬಳಿಕ ಸಂಜೆ ಚುನಾವಣಾ ಕಚೇರಿಯಲ್ಲಿ ಯುವಜನರ ಸಮಾವೇಶ ನಡೆಯಿತು. ಇದನ್ನು ಉದ್ದೇಶಿಸಿ ಮಾತನಾಡಿದ ಶ್ರೀಕರ ಪ್ರಭು, ತಮ್ಮ ಗೆಲುವಿಗಾಗಿ ಶ್ರಮಿಸುವಂತೆ ಮನವಿ ಮಾಡಿದರು. ನಗರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಗಲಭೆ ರಹಿತ, ಶಾಂತಿ-ನೆಮ್ಮದಿ ನೆಲೆಸುವಂತೆ ಮಾಡಲು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ನಾನುತತ್ವಸಿದ್ದಂತಗಳಅಡಿಯಲ್ಲಿಬೆಳೆದುಬಂದವನು.ಅವುಗಳ್ಳನುಬಲಿಕೊಡಲುಎಂದಿಗೂಸಾಧ್ಯವಿಲ್ಲನನ್ನತಾಯಿಯುನನಗೆ ಅದನ್ನೇ ಕೇಳಿಸಿದ್ದರು.ಇದುನನ್ನತಾಯಿಯಮನಸ್ಸಿಗೆನೋವಾಗಿದೆ.ಯಾರುತಮ್ಮಸ್ವಾರ್ಥಹಿತಾಸಕ್ತಿಗಾಗಿಕೈಗೊಳ್ಳುವಅಪತ್ವತೀರ್ಮಾನಗಳುಅವಸರದಿಂದಅನೋಚಿತ್ಯನಡೆಗಳುಪಕ್ಷಕ್ಕೆಹಾನಿಉಂಟುಮಾಡುತ್ತದೆಎಂದಾದರೆಅದನ್ನುತಡೆಯುದುಮಗನಾಗಿನನ್ನಕರ್ತವ್ಯನನ್ನನುಮಟ್ಟಹಾಕುವಕೆಲಸಯಾವಸ್ತರದಲ್ಲಿನಡೆದರೂಕೈಕಟ್ಟಿಕೂರುವಜಾಯಮಾನನನ್ನದಲ್ಲ. ನಾಲ್ಕುಮಂದಿಯದುರಾಸೆ-ಅಧಿಕಾರದ ಆಸೆಯಿಂದ ಶ್ರೀಕರಪ್ರಭುವಿಗೆಮೋಸವಾಯಿತು ಎಂಬಕಟುಸತ್ಯವನ್ನುಕ್ಷೇತ್ರದಜನತೆಯಮುಂದೆಸಾರಿಸಾರಿಕೂಗಿಹೇಳುತ್ತೇನೆ. ಇನ್ನು ಮುಂದೆ ಈ ರೀತಿಯಮೋಸಯಾವಕಾರ್ಯಕರ್ತನಿಗೂಆಗದಂತೆಪೂರ್ಣವಿರಾಮಹಾಕುವುದೇನನ್ನಉದ್ದೇಶಶ್ರೀಕರಪ್ರಭುದುಃಖಿತರಾದರು. ಈಎಲ್ಲವಿಚಾರಗಳನ್ನುಸೂಕ್ಷ್ಮವಾಗಿಅವಲೋಕಿಸಿತೀರ್ಮಾನತೆಗೆದುಕೊಳ್ಳಬಲ್ಲಪ್ರಜ್ಞಾವಂತಕಾರ್ಯಕರ್ತರು, ಮತದಾರ ಬಂದುಗಳು ತನ್ನನ್ನು ಬೆಂಬಲಿಸಿಮತಚಲಾಯಿಸುವಂತೆಕಳಕಳಿಯಿಂದವಿನಂತಿಸಿದರು.

ನಾನ್ನೊಬಸ್ವಯಂಸೇವಕನಾಗಿಚುನಾವಣೆಗೆಸ್ಪರ್ಧಿಸುತ್ತಿದ್ದೇನೆ.ನನ್ನೊಂದಿಗೆಮಂಗಳೂರಿನಜನತೆಇದ್ದಾರೆಎಲ್ಲಮನೆಮನೆಗಳಿಗೆನನ್ನಉದ್ದೇಶಮುಟ್ಟಿಸುವಕೆಲಸಮಾಡುತಿದ್ದೇನೆ.ಸಹಾನುಭೂತಿಯಬೆಂಬಲವ್ಯಾಪಕವಾಗಿಸಿಗುತ್ತಿದೆಎಂದುಅವರುವಿವರಿಸಿದರು.

ಚುನಾವಣಾ ಚಿಹ್ನೆ ಆಟೋ ರಿಕ್ಷಾ ಆಗಿರುವುದರಿಂದ ಆಟೋ ಚಾಲಕರೂ ವಿಶೇಷ ಆಸಕ್ತಿಯಿಂದ ಬೆಂಬಲಕ್ಕೆ ನಿಂತಿದ್ದಾರೆ ಎಂದು ಶ್ರೀಕರ ಪ್ರಭು ಕಾರ್ಯಕರ್ತರ ಕರಾಡತನದ ನಡುವೆ ಘೋಷಿಸಿದರು.

ಈ ಸಂದರ್ಭದಲ್ಲಿ ಶ್ರೀಕರ ಪ್ರಭು ಅಭಿಮಾನಿ ಬಳಗದ ಅದ್ಯಕ್ಷರಾದ ಕೆ.ಪಿ. ಶೆಟ್ಟಿ ಬೇಡೆಮಾರ್, ಕಾರ್ಯದರ್ಶಿ ಪ್ರೇಮ್ ಚಂದ್ರ, ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾಶ್ ಶೆಟ್ಟಿ, ಅಶ್ವಿತ್ ಕುಮಾರ್, ವೆಂಕಟರಮಣ ಮಲ್ಯ, ಜೈರಾಮ್ ಕಾಮತ್, ಸುನಿಲ್ ಬಜಿಲಕೇರಿ, ಯತೀಶ್ ಕುಮಾರ್ ನಾಗೇಶ್ ಶೆಣೈ ಮತ್ತಿತರು ಉಪಸ್ಥಿತರಿದ್ದರು.

Comments are closed.