ಕ್ರೀಡೆ

ಕೋಲ್ಕತ್ತಾ ನೈಟ್‌ ರೈಡರ್ಸ್‌ಗೆ ಸೋಲಿನ ರುಚಿ ತೋರಿಸಿದ ಮುಂಬೈ ಇಂಡಿಯನ್ಸ್‌

Pinterest LinkedIn Tumblr

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್‌ ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ 13 ರನ್‌ಗಳ ಜಯ ಸಾಧಿಸಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಮುಂಬೈ ಇಂಡಿಯನ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತು. 182 ರನ್‌ಗಳ ಗುರಿಯ ಬೆನ್ನತ್ತಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ 6 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿ ಮುಂಬೈ ಇಂಡಿಯನ್ಸ್‌ ಎದುರು ಸೋಲಿಗೆ ಶರಣಾಯಿತು.

ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ ಕ್ರಿಸ್​ ಲೈನ್‌ 17 ರನ್‌, ಗಿಲ್‌ 7, ರಾಬಿನ್‌ ಉತ್ತಪ್ಪ 54, ನಿತೀಶ್‌ ರಾಣಾ 31, ರಸೆಲ್‌ 9, ನಾರೈನ್‌ 5, ದಿನೇಶ್‌ ಕಾರ್ತಿಕ್‌ ಅಜೇಯ 36 ರನ್‌ ಗಳಿಸಿದರು.

ಮುಂಬೈ ಹಾರ್ದಿಕ್‌ ಪಾಂಡ್ಯಾ 2, ಮಿಚೆಲ್‌ 1, ಮೆಕ್‌ಲಗನ್‌ 1, ಬೂಮ್ರಾ 1, ಕ್ರುನಾಲ್‌ ಪಾಂಡ್ಯಾ 1 ಮತ್ತು ಮಯಾಂಕ್‌ ಒಂದು ವಿಕೆಟ್‌ ಕಬಳಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಎವಿನ್ ಲೂವಿಸ್ ಅವರ ಬಿರುಸಿನ ಆರಂಭದೊಂದಿಗೆ ಮುಂಬೈ ಇಂಡಿಯನ್ಸ್‌ ಪರ ಸೂರ್ಯಕುಮಾರ್‌ ಯಾದವ್‌ 59 ರನ್‌, ಲೆವಿಸ್‌ 43, ರೋಹಿತ್‌ ಶರ್ಮಾ 11, ಹಾರ್ದಿಕ್‌ ಪಾಂಡ್ಯಾ ಅಜೇಯ 35 ರನ್‌, ಕ್ರುನಾಲ್‌ ಪಾಂಡ್ಯಾ 14 ಮತ್ತು ಡುಮಿನಿ ಅಜೇಯ 13 ರನ್‌ಗಳಿಸಿದರು. ಕೋಲ್ಕತ್ತಾ ನೈಟ್‌ ರೈಡರ್ಸ್‌ನ ರಸೆಲ್‌ ಮತ್ತು ನಾರೈನ್‌ ತಲಾ 2 ವಿಕೆಟ್‌ ಪಡೆದರು.

Comments are closed.