ಕರಾವಳಿ

ಅಂಕೋಲಾದಲ್ಲಿ ರಾಹುಲ್‌ ಭರ್ಜರಿ ರೋಡ್‌ ಶೋ, ಬಿಜೆಪಿ ವಿರುದ್ಧ ಕಿಡಿ

Pinterest LinkedIn Tumblr


ಕಾರವಾರ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾರವಾರ ವಿಧಾನ ಸಭಾ ಕ್ಷೇತ್ರದ ಅಂಕೋಲಾ ಪಟ್ಟಣದಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು. ರಾಹುಲ್‌ ಅವರಿಗೆ ಸಿಎಂ ಸಿದ್ದರಾಮಯ್ಯ, ಸಚಿವ ಆರ್‌.ವಿ.ದೇಶ್‌ಪಾಂಡೆ,ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಸೈಲ್‌ ಅವರು ಸಾಥ್‌ ನೀಡಿದರು.

ರೋಡ್‌ ಶೋ ವೇಳೆ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ ‘ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಿಚಾರಾಧಾರಿತ ಚುನಾವಣೆ ನಡೆಯುತ್ತಿದೆ.ಜನಪರ ವಿರುವ ಕಾಂಗ್ರೆಸ್‌ ಪಕ್ಷಕ್ಕೆ ನೀವು ಅಧಿಕಾರ ನೀಡಬೇಕು’ ಎಂದರು.

‘ಬಡವರು ,ಶ್ರಮಿಕರ ಶ್ರಮದ ಫ‌ಲ ಬಡ ಜನರಿಗೆ ಸೇರಬೇಕು. ಆದರೆ ಬಿಜೆಪಿಯವರು ಬಡ ಜನರ ಹಣವನ್ನು ಕೋಟ್ಯಧಿಪತಿಗಳಿಗೆ ಸೇರಿಸಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

ರೋಡ್‌ ಶೋ ಬಳಿಕ ಕರಾವಳಿ ವಿಶೇಷ ಖಾದ್ಯಗಳನ್ನೊಳಗೊಂಡ ಮೀನಿನ ಊಟವನ್ನು ಸವಿದರು.

-ಉದಯವಾಣಿ

Comments are closed.