ರಾಷ್ಟ್ರೀಯ

ಗೂಗಲ್‌ ಸರ್ಚ್‌ನಲ್ಲಿ ಭಾರತದ ಮೊದಲ ಪ್ರಧಾನಿಯಾಗಿ ಮೋದಿ ಫೋಟೋ

Pinterest LinkedIn Tumblr


ಹೊಸದಿಲ್ಲಿ: ಭಾರತದ ಮೊದಲ ಪ್ರಧಾನಿ ಎಂಬ ಗೂಗಲ್‌ ಸರ್ಚ್‌ ಫ‌ಲಿತಾಂಶದಲ್ಲಿ ಜವಾಹರಲಾಲ್‌ ನೆಹರೂ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಕಂಡುಬಂದಿರುವುದನ್ನು ಕಂಡು ಅನೇಕರು ಚಕಿತರಾಗಿದ್ದಾರೆ; ದಿಗಿಲಾಗಿದ್ದಾರೆ; ಇನ್ನೂ ಅನೇಕರಿಗೆ ಇದೊಂದು ತಮಾಷೆಯ ವಿಷಯ ಎನಿಸಿದೆ.

ಭಾರತದ ಮೊದಲ ಪ್ರಧಾನಿ ಎಂಬ ಗೂಗಲ್‌ ಸರ್ಚ್‌ ಫ‌ಲಿತಾಂಶದಲ್ಲಿ ಜವಾಹರಲಾಲ್‌ ನೆಹರೂ ಅವರ ಹೆಸರು ವಿಕಿಪೀಡಿಯಾದ “ಲಿಸ್ಟ್‌ ಆಫ್ ಪ್ರೈಮ್‌ ಮಿನಿಸ್ಟರ್’ ಲಿಂಕ್‌ ನಲ್ಲಿ ಕಾಣಿಸಿಕೊಳ್ಳುತ್ತದೆ; ಆದರೆ ಫೋಟೋ ಮಾತ್ರ ನರೇಂದ್ರ ಮೋದಿಯವರದ್ದು ಕಾಣಿಸಿಕೊಳ್ಳುತ್ತದೆ.

ಈ ವೈರುಧ್ಯ ವ್ಯಾಪಕವಾಗಿ ಚರ್ಚಿತವಾದಾಗ ಟ್ವಿಟರ್‌ನಲ್ಲಿ ನಾನಾ ಬಗೆಯ ಪ್ರತಿಕ್ರಿಯೆಗಳು ಮೂಡಿ ಬಂದವು. ಕೆಲವರು “ಇದು ಗೂಗಲ್‌ ಪ್ರಮಾದ’ ಎಂದು ಜರೆದರು. ಇನ್ನು ಕೆಲವರು ಇದನ್ನೊಂದು ಚೋದ್ಯದ ವಿಷಯವನ್ನಾಗಿ ಆನಂದಿಸಿದರು.

ಟ್ವಿಟರಾಟಿ ಸುರೇಶ್‌ ಎಂಬವರ ಪ್ರತಿಕ್ರಿಯೆ ಹೀಗಿತ್ತು : ಭಾರತದ ಫ‌ಸ್ಟ್‌ ಪಿಎಂ ಮತ್ತು ಬೆಸ್ಟ್‌ ಪಿಎಂ ಬಗ್ಗೆ ಗೂಗಲ್‌ ಗೆ ಗೊಂದಲ ಉಂಟಾಗಿರುವುದು ಸ್ಪಷ್ಟವಿದೆ.

ಈ ನಡುವೆ ಗೂಗಲ್‌ ವಕ್ತಾರ ಈ ಪ್ರಮಾದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ಈ ರೀತಿಯ ಅನಿರೀಕ್ಷಿತ ಫ‌ಲಿತಾಂಶಗಳನ್ನು ತಡೆಯುವಲ್ಲಿ ನಾವು ನಮ್ಮ ಆಲ್ಗೊರಿದಂ ಸುಧಾರಿಸುತ್ತಿದ್ದೇವೆ ಎಂದವರು ಹೇಳಿದ್ದಾರೆ.

ಈ ಹಿಂದೆಯೂ ಒಮ್ಮೆ “ಟಾಪ್‌ 10 ಕ್ರಿಮಿನಲ್ಸ್‌ ಇನ್‌ ಇಂಡಿಯಾ’ ಎಂಬ ಗೂಗಲ್‌ ಸರ್ಚ್‌ ಫ‌ಲಿತಾಂಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕಂಡು ಬಂದು ಗೂಗಲ್‌ಗೆ ಬಳಕೆದಾರರು ಹಿಡಿ ಶಾಪ ಹಾಕಿದ್ದರು. ಆ ಪ್ರಮಾದ ಕೂಡ ಆಲ್ಗೊàರಿದಂ ನಿಂದಾಗಿ ಉಂಟಾಗಿತ್ತು ಎಂದು ಹೇಳಲಾಗಿತ್ತು.

-ಉದಯವಾಣಿ

Comments are closed.