ಕರಾವಳಿ

ಹಾಲು ಕಲಬೆರಕೆ ಆಗುತ್ತಿದೆ ಎಂಬುದು ಪತ್ತೆ ಹಚ್ಚುವುದು ಹೇಗೆ…?

Pinterest LinkedIn Tumblr

ಈಗ ಕಲಬೆರಕೆಯದ್ದೇ ಸಾಮ್ರಾಜ್ಯವಾಗಿದೆ. ಆಹಾರದಿಂದಲೇ ಮಾನವನು ಜೀವಿಸುತ್ತಿರುವುದು ಎಂದು ಗೊತ್ತಿದ್ದರೂ ಕಲಬೆರಕೆ ಮಾಡಿ ಪ್ರಾಣಗಳೊಂದಿಗೆ ಆಟವಾಡುತ್ತಾ ಹಣ ಗಳಿಸುತ್ತಿದ್ದಾರೆ. ಅವರ ನಂತರದ ತಲೆಮಾರಿನವರು ಆಡಂಬರದ ಜೀವನ ನಡೆಸಲು ಹೀಗೆ ಮಾಡುತ್ತಿದ್ದಾರೆ. ಆದ್ದರಿಂದಲೇ ಮಾರುಕಟ್ಟೆಯಲ್ಲಿ ಚಿಕ್ಕ ಮಕ್ಕಳು ಸೇವಿಸುವ ಆಹಾರದಿಂದ ಹಿಡಿದು ಪ್ರತಿಯೊಂದು ವಸ್ತು ಕಲಬೆರಕೆ ಆಗುತ್ತಿದೆ. ಜೀರ್ಣಶಕ್ತಿ, ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಮೇಲೆ ಈ ವಿಷಾಹಾರಗಳು ಅಧಿಕ ಪ್ರಭಾವ ಬೀರುವುದಷ್ಟೇ ಅಲ್ಲದೆ ಅವರ ಭವಿಷ್ಯತ್ತನ್ನೇ ನಾಶ ಮಾಡುತ್ತವೆ.

ಚಿಕ್ಕ ವಯಸ್ಸಿನಲ್ಲೇ ಅವಯವಗಳು ಕಾರ್ಯ ನಿರ್ವಹಿಸದಂತಾಗುತ್ತವೆ. ಕಲಬೆರಕೆ ಹಾಲು ಕುಡಿಯುವುದರಿಂದ ಹೊಟ್ಟೆಯಲ್ಲಿ ನೋವು, ಉರಿ ಆಗುವುದು, ಕ್ಯಾನ್ಸರ್ ಸಮಸ್ಯೆ, ಅಜೀರ್ಣ, ಹೃದಯ ಖಾಯಿಲೆಗಳು…ಇಂತಹ ಮಾರಣಾಂತಿಕ ಖಾಯಿಲೆಗಳು ಬರುವ ಅವಕಾಶಗಳಿರುತ್ತವೆ ಎಂದು ವೈದ್ಯ ನಿಪುಣರು ಹೇಳುತ್ತಾರೆ. ಮಕ್ಕಳಿಗೆ ತಾಯಿಯ ಹಾಲಿನ ನಂತರ ಎಮ್ಮೆ ಹಾಲನ್ನು ಕುಡಿಸುತ್ತೇವೆ. ಅದರಲ್ಲೂ ಈಗ ಕಲಬೆರಕೆ ಆಗುತ್ತಿದೆ ಅದನ್ನು ಪತ್ತೆ ಹಚ್ಚುವುದು ಹೇಗೆಂದು ತಿಳಿದುಕೊಳ್ಳಿ….

1. ಒಂದು ಲೋಟದಲ್ಲಿ 5 ಮಿ.ಲೀ. ಹಾಲನ್ನು ತೆಗೆದುಕೊಂಡು ಅದರಲ್ಲಿ 2 ಹನಿ ಅಯೋಡಿನ್ (ಔಷಧಿ ಅಂಗಡಿಗಳಲ್ಲಿ ದೊರೆಯುತ್ತದೆ) ಬೆರೆಸಿದಾಗ ಕೆಲವು ನಿಮಿಷಗಳಲ್ಲಿ ಅದು ನೀಲಿ ಬಣ್ಣವಾದಲ್ಲಿ ಅದು ಕಲಬೆರಕೆ ಹಾಲು ಎಂದರ್ಥ. ಬಿಳಿ ಬಣ್ಣದಲ್ಲಿಯೇ ಇದ್ದರೆ ಅದು ಸ್ವಚ್ಛವಾದ ಹಾಲಾಗಿರುತ್ತದೆ.

2. ಹಾಲಿಗೆ ನೀರು ಬೆರಸದೇ ಹಾಲು ಮಾರುವ ವ್ಯಾಪಾರಿಗಳೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಆದರೆ ಹೆಚ್ಚಾಗಿ ನೀರು ಬೆರೆಸಿದ್ದರೆ ಅಂತಹ ಹಾಲನ್ನು ಕೊಳ್ಳದಿರುವುದೇ ಉತ್ತಮ. ಒಂದು ತಟ್ಟೆಯ ಮೇಲೆ ಹಾಲಿನ ಹನಿಗಳನ್ನು ಬೀಳಿಸಿದಾಗ ಅವು ಬಿಳಿ ಬಣ್ಣದ ಗುರುತು ಬೀಳದಂತೆ ಹಾಗೆಯೇ ಜಾರಿಕೊಂಡು ಹೋದಲ್ಲಿ ಹೆಚ್ಚಿನ ನೀರು ಬೆರೆಸಿದಂತೆ ತಿಳಿಯಬಹುದು.

3. ಹಾಲು ಕಾಯಿಸಿದ ನಂತರ ಬಟ್ಟಲಿನ ತಳಭಾಗದಲ್ಲಿ ಗಡ್ಡೆ ಕಟ್ಟಿದಂತೆ ಇದ್ದರೆ ಅದರಲ್ಲಿ ಗಂಜೀಪುಡಿ ಬೆರೆಸಿದಂತೆ.

4. ಲೋಟದಲ್ಲಿ ಸ್ವಲ್ಪ ಹಾಲನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಉಪ್ಪನ್ನು ಬೆರೆಸಿದ ಕೆಲವು ನಿಮಿಷಗಳ ನಂತರ ನೀಲಿ ಬಣ್ಣಕ್ಕೆ ಬದಲಾದರೆ ಅದರಲ್ಲಿ ಗಂಜಿ ಅಥವಾ ಯೂರಿಯಾ ಪುಡಿ ಬೆರೆಸಿದಂತೆ ತಿಳಿದುಕೊಳ್ಳಬಹುದು.

Comments are closed.