ಕರಾವಳಿ

ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋರವರು ಶರವು ದೇವಸ್ಥಾನಕ್ಕೆ ಭೇಟಿ 

Pinterest LinkedIn Tumblr

ಮಂಗಳೂರು ಏಪ್ರಿಲ್ 25: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋರವರು ಬುಧವಾರ ಬೆಳಿಗ್ಗೆ ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಕ್ಷೇತ್ರದ ವತಿಯಿಂದ ಜೆ.ಆರ್.ಲೋಬೋರವನ್ನು ಗೌರವಿಸಲಾಯಿತು. ಬಳಿಕ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕ್ಷೇತ್ರದ ಜನತೆಯಲ್ಲಿ ಮತಯಾಚನೆಗೆ ತೆರಳಿದರು.

ಮಂಗಳೂರು ಮೇಯರ್ ಭಾಸ್ಕರ್ ಮೊಯ್ಲಿ, ಕಾರ್ಪೊರೇಟರ್ ರಾಧಕೃಷ್ಣ, ಪಕ್ಷದ ಮುಖಂಡರಾದ ಟಿ.ಕೆ.ಸುಧೀರ್, ರಮಾನಂದ ಬೋಳಾರ, ಮೋಹನ್ ಮೆಂಡನ್, ಗುರು ಪ್ರವೀಣ್ ಭಟ್ ಹಾಗೂ ಪಕ್ಷದ ಇತರ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

Comments are closed.