ಕರಾವಳಿ

ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವಾಗ ಕಣ್ಣು ಡ್ರೈ ಅಗದಿರಲು ಟಿಪ್ಸ್

Pinterest LinkedIn Tumblr

ಈಗಿನ ಜನರೆಲ್ಲ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಮತ್ತು ಟೀವಿ ಲೋಕದಲ್ಲಿ ಮುಳುಗಿಯೇ ಇರುತ್ತಾರೆ. ದಿನದ 24 ಗಂಟೆಯಲ್ಲಿ ಕನಿಷ್ಠ 18 ಗಂಟೆಯಂತೂ ಇದೇ ಲೋಕವಾಗಿರುತ್ತದೆ. ಇವನ್ನು ವಿಪರೀತವಾಗಿ ನೋಡುವುದರಿಂದ ಬರೋ ಕಣ್ಣಿನ ಸಮಸ್ಯೆಗೆ ‘ಕಂಪ್ಯೂಟರ್ ವಿಷನ್ ಸಿಂಡ್ರೋಮ್’ ಎಂದು ಹೆಸರು. ಆಯಾಸ, ಕಣ್ಣಿನ ದಷ್ಟಿ ಮಬ್ಬು ಮಬ್ಬು ಆಗೋದು, ಎರಡೆರಡು ಕಾಣೋರು, ನೀರು ಬರೋದು, ಕಣ್ಣು ಕೆಂಪಾಗೋದು, ನೋವು ಸೇರಿದಂತೆ ಹಲವು ಸಮಸ್ಯೆಗಳು ಬಹುಬೇಗ ಬರ್ತವೆ. ದಿನಕ್ಕೆ ಮೂರಕ್ಕಿಂತ ಹೆಚ್ಚು ಗಂಟೆ ಕಾಲ ಕಂಪ್ಯೂಟರ್ ಬಳಸೋರಲ್ಲಿ ಇದು ಕಂಡು ಬರುತ್ತಿದೆ.

ಕಂಪ್ಯೂಟರನ್ನು ಒಂದೇ ಸಮನೆ ನೋಡುತ್ತಾ ಇರುವುದರಿಂದ ಕಣ್ಣಿಗೆ ಆಯಾಸವಾಗುತ್ತದೆ. ಜತೆಗೆ ಬಿಟ್ಟ ಕಣ್ಣನ್ನು ಬಿಟ್ಟೇ ಇರುವುದರಿಂದ ಕಣ್ಣನ್ನು ತೇವವಾಗಿಡುವ ನೀರು ಕೂಡಾ ಆವಿಯಾಗಿ ಕಣ್ಣು ಡ್ರೈ ಅನಿಸುತ್ತದೆ.

ನಾವು ಪ್ರತಿ ನಿಮಿಷಕ್ಕೆ 10ರಿಂದ 12 ಬಾರಿ ಕಣ್ಣನ್ನು ಮುಚ್ಚಿ ತೆರೆಯುತ್ತೇವೆ. ಟೀವಿ ನೋಡುವಾಗ ಇದು 5ರಿಂದ ಆರಕ್ಕೆ ಇಳಿಯುತ್ತದೆ. ಕಂಪ್ಯೂಟರ್‌ ನಲ್ಲಿ ಕೆಲಸ ಮಾಡುವಾಗಲಂತೂ ಇದು ಮೂರರಿಂದ ನಾಲ್ಕಕ್ಕೆ ಬಂದು ನಿಲ್ಲುತ್ತದೆ. ಕಣ್ಣುಗಳನ್ನು ಆಗಾಗ ಮುಚ್ಚುವುದರಿಂದ ತೇವಾಂಶ ಉಳಿಯುತ್ತದೆ. ಅದೇ ತೆರೆದೇ ಇರುವುದರಿಂದ ನೀರು ಭಾಷ್ಪೀಕರಣಗೊಂಡು ನೀರಿನ ಅಂಶ ಕಡಿಮೆಯಾಗುತ್ತದೆ. ಇದರಿಂದ ಅಕ್ಷಿಪಟಲದಲ್ಲಿ ತೇವಾಂಶ ಕೊರತೆಯಾಗಿ ಉರಿ ಕಾಣಿಸಿಕೊಳ್ಳುತ್ತದೆ.

ಹೀಗೆ ಮಾಡಿ:
ಕಂಪ್ಯೂಟರ್ ಇರುವ ಕೋಣೆಯಲ್ಲಿ ಸಾಕಷ್ಟು ಬೆಳಕು ಇಲ್ಲದಿದ್ದರೆ ನಾವು ಕಷ್ಟಪಟ್ಟು ಕಣ್ಣನ್ನು ದೊಡ್ಡದಾಗಿ ತೆರೆದುಕೊಂಡು ನೋಡುತ್ತೇವೆ. ಆಗ ಕ್ಣಿನ ನೀರು ಆರೋದು ಜಾಸ್ತಿ. ಹಾಗಾಗಿ ಒಳ್ಳೆಯ ಗಾಳಿ, ಬೆಳಕಿರುವ ಕೋಣೆಯಲ್ಲೇ ಕುಳಿತುಕೊಳ್ಳಬೇಕು. ಜೊತೆಗೆ ಕಂಪ್ಯೂಟರ್ ಸ್ಕ್ರೀನ್ ಮೇಲೆ ಪ್ರತಿಫಲನದ ಬೆಳಕು ಬೀಳದಂತೆ ನೋಡಿಕೊಳ್ಳುವುದು ಉತ್ತಮ.

ಕಂಪ್ಯೂಟರ್ ಸ್ಕ್ರೀನನ್ನು ಕಣ್ಣಿನ ಲೆವೆಲ್‌ಗಿಂತ ಕೆಳಗೆ ಇಟ್ಟುಕೊಂಡರೆ ಕಣ್ಣನ್ನು ದೊಡ್ಡದಾಗಿ ತೆರೆಯುವ ಸಮಸ್ಯೆ ಇರುವುದಿಲ್ಲ. ಕಣ್ಣಿನ ರೆಪ್ಪೆ ಅರ್ಧ ಮುಚ್ಚಿದ್ದರೆ ತೇವಾಂಶ ಆವಿಯಾಗುವ ಅಪಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ನಾವು ಯಾವುದೇ ವಸ್ತುವನ್ನು ಅತ್ಯಂತ ಹತ್ತಿರದಿಂದ ನೋಡಿದಾಗ ಸಿಲಿಯರಿ ಸ್ನಾಯುಗಳು ಸಂಕೋಚನಗೊಳ್ಳುತ್ತದೆ. ಆಗ ಆಯಾಸವಾಗಿ ಹೆಚ್ಚು ಹೊತ್ತು ಕೆಲಸ ಮಾಡಲು ಆಗುವುದಿಲ್ಲ. ಕೆಲವೊಮ್ಮೆ ದೂರದ ವಸ್ತು ಕಾಣದಂಥ ದಷ್ಟಿ ಸಮಸ್ಯೆಯನ್ನೂ ಸಷ್ಟಿಸಬಲ್ಲದು. ಪ್ರತಿ ನಿಮಿಷಗಳಿಗೊಮ್ಮೆ 20 ಸೆಕೆಂಡು ಕಾಲ 20 ಮೀಟರ್ ದೂರ ನೋಡಿ.

ಪ್ರತಿ 40 ನಿಮಿಷ ಕೆಲಸ ಮಾಡಿದ ಬಳಿಕ 10 ನಿಮಿಷ ಕಣ್ಣಿಗೆ ಕಣ್ಣಿಗೆ ವಿಶ್ರಾಂತಿ ಕೊಡಬೇಕು. ಕಂಪ್ಯೂಟರ್ ಎದುರಿನಿಂದ ಎದ್ದು ನಾಲ್ಕು ಹೆಜ್ಜೆ ನಡೆಯಬೇಕು, ಕತ್ತು ಮತ್ತು ಬೆನ್ನಿನ ಮೂಳೆಗಳಿಗೆ ಸ್ವಲ್ಪ ರಿಲ್ಯಾಕ್ಸ್ ಕೊಡಬೇಕು. ತುಂಬ ದೂರಕ್ಕೆ ನೋಡಬೇಕು. ಆಕಾಶ ನೋಡಿದರೆ ಉತ್ತಮ. ಕೈಗಳಿಂದ ಕಣ್ಣುಗಳನ್ನು ಮುಚ್ಚಿಕೊಂಡರೆ ಒಳ್ಳೆಯದು.

Comments are closed.