ರಾಷ್ಟ್ರೀಯ

ಪ್ರಧಾನಿ ಮೋದಿಯ 15 ಲಕ್ಷ ರು.ಭರವಸೆ ಬಗ್ಗೆ ಬಂತು ಉತ್ತರ !

Pinterest LinkedIn Tumblr

ನವದೆಹಲಿ: ಕಳೆದ ಲೋಕಸಭೆ ಚುವಾವಣೆ ವೇಳ ಜನರ ಬ್ಯಾಂಕ್ ಖಾತೆಗೆ 15 ಲಕ್ಷ ರುಪಾಯಿ ಹಾಕುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆ ಮಾಹಿತಿ ಹಕ್ಕು ಕಾಯ್ದೆ(ಆರ್ ಟಿಐ)ಯ ವ್ಯಾಖ್ಯಾನದ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಸೋಮವಾರ ಕೇಂದ್ರ ಮಾಹಿತಿ ಆಯೋಗಕ್ಕೆ ಸ್ಪಷ್ಟಪಡಿಸಿದೆ.

ಮೋದಿ ಜನರ ಖಾತೆಗೆ ಹಣ ಜಮೆ ಮಾಡುವ ದಿನಾಂಕದ ಬಗ್ಗೆ ಮಾಹಿತಿ ಕೋರಿ ಆರ್ ಟಿಐ ಕಾರ್ಯಕರ್ತ ಮೋಹನ್ ಕುಮಾರ್ ಶರ್ಮಾ ಅವರು ಸಲ್ಲಿಸಿದೆ ಅರ್ಜಿಗೆ ಪಿಎಂಒ ಈ ರೀತಿ ಉತ್ತರ ನೀಡಿದೆ.

ಕೇಂದ್ರ ಸರ್ಕಾರ 1,000 ಹಾಗೂ 500 ರುಪಾಯಿ ನೋಟ್ ನಿಷೇಧಿಸಿದ ನಂತರ 2016, ನವೆಂಬರ್ 26ರಂದು ಶರ್ಮಾ ಅವರು, 2014ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರುಪಾಯಿ ಹಾಕುವುದಾಗಿ ಹೇಳಿದ್ದರು. ಆ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದರು.

ವಿಚಾರಣೆ ವೇಳೆ, ಶರ್ಮಾ ಅವರು ಪ್ರಧಾನಮಂತ್ರಿಗಳ ಕಾರ್ಯಾಲಯ ಮತ್ತು ಆರ್ ಬಿಐ ತನಗೆ ಸಂಪೂರ್ಣ ಮಾಹಿತಿ ನೀಡಿಲ್ಲ ಎಂದು ಮುಖ್ಯ ಮಾಹಿತಿ ಆಯುಕ್ತ ಆರ್ ಕೆ ಮಥೂರ್ ಅವರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಆಯೋಗ ಪ್ರಧಾನಮಂತ್ರಿಗಳ ಕಚೇರಿಗೆ ಸ್ಪಷ್ಟನೇ ಕೇಳಿತ್ತು.

Comments are closed.