ಕರಾವಳಿ

ಬಿಜೆಪಿ ಪಕ್ಷ ಯಾವತ್ತು ಮಠದ ಪರ ನಿಂತಿದೆ; ಶೀರೂರು ಶ್ರೀ ಮನವೊಲಿಕೆಗೆ ಮುಂದಾದ ರಘುಪತಿ ಭಟ್

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಶಿರೂರು ಶ್ರೀಗಳು ಚುನಾವಣಕ್ಕಿಳಿದಿರುವುದು ಬಿಜೆಪಿ ಪಾಳಯದಲ್ಲಿ ಅತಂಕವನ್ನುಂಟು ಮಾಡಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಶಿರೂರು ಶ್ರೀಗಳ ಮನವೊಲಿಸಲು ಮುಂದಾಗಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಘುಪತಿ ಭಟ್ ಶಿರೂರು ಶ್ರೀಗಳ ಬಳಿ ತೆರಳಿ ಆಶೀರ್ವಾದವನ್ನು ಪಡೆಯುತ್ತೇನೆ .ಅಷ್ಟೇ ಅಲ್ಲದೇ ಶ್ರೀಗಳು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿಯನ್ನು ಕೂಡ ಮಾಡುತ್ತೇನೆ ಎಂದಿದ್ದಾರೆ.

ಇನ್ನೂ… ಶ್ರೀಗಳು ನಾಮಪತ್ರ ವಾಪಸ್ ಪಡೆಯಲು ಅವಕಾಶವಿದೆ .ಅವರು ಬಿಜೆಪಿಯಲ್ಲಿ ಟಿಕೆಟ್ಟನ್ನು ಅಪೇಕ್ಷಿಸಿದ್ದರು ,ಅದು ಆಗಲಿಲ್ಲ ,ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವವರು ಬಿಜೆಪಿಗರೇ..ಹೀಗಾಗಿ ಸ್ವಾಮಿಜಿ ಕೂಡ ಬಿಜೆಪಿಯೇ ಅವರು ಬಿಜೆಪಿಯನ್ನ ಬೆಂಬಲಿಸಬೇಕೆಂದು ಭಟ್ ಆಗ್ರಹಿಸಿದರು.

ಬಿಜೆಪಿ ಪಕ್ಷ ಯಾವತ್ತು ಮಠದ ಪರ ನಿಂತಿದೆ, ಕನಕ ಗೋಪುರದ ವಿಚಾರದಿಂದ ಹಿಡಿದು ಮಠ ಸರ್ಕಾರೀಕರಣವಾಗುವುದನ್ನು ವಿರೋಧಿಸಿದ್ದು ಬಿಜಪಿಯೇ..ಇದು ಶಿರೂರು ಶ್ರೀಗಳಿಗೂ ತಿಳಿದ ವಿಚಾರ.

ಶ್ರೀಗಳು ಚುನಾವಣೆ ನಿಲ್ಲುವುದರಿಂದ ಪ್ರಮೋದ್ ಮಧ್ವರಾಜ್ ಗೆ ಯಾವುದೇ ಅನುಕೂಲವಾಗುವುದಿಲ್ಲ.ಕಳೆದ ಚುನಾವಣೆಯಲ್ಲಿ ನನ್ನ ವಿರುದ್ದ ಷಡ್ಯಂತ್ರವನ್ನು ನಡೆಸಿದ್ದರು. ನನ್ನನ್ನ ಗೆಲ್ಲಲು ಸಾಧ್ಯವಿಲ್ಲ ಅಂತಾ ಗೋತ್ತಾದ ಮೇಲೆ ನನ್ನ ವೈಯುಕ್ತಿಕ ವಿಚಾರಗಳನ್ನಿಟ್ಟುಕೊಂಡು ನನ್ನನ್ನ ಸೋಲಿಸಿದ್ದರು. ಆದ್ರೆ ಈ ಬಾರಿ ಗೆಲ್ಲುವ ವಿಶ್ವಾಸ ನೂರಕ್ಕೆ ನೂರರಷ್ಟು ಇದೆ ಎಂದು ಭಟ್ ಹೇಳಿದ್ದರು.

Comments are closed.