ಕ್ರೀಡೆ

ಮೈದಾನಕ್ಕೆ ನುಗ್ಗಿ ಧೋನಿ ಕಾಲಿಗೆ ಬಿದ್ದ ಅಭಿಮಾನಿ !

Pinterest LinkedIn Tumblr

ಪುಣೆ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಎಲ್ಲೇ ಹೋದರೂ ಭಾರಿ ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳುತ್ತಾರೆ.

ಅತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗಷ್ಟೇ ಕಾವೇರಿ ಪ್ರತಿಭಟನೆಯ ಹಿನ್ನಲೆಯಲ್ಲಿ ಚೆನ್ನೈ ಮನೆಯಂಗಳದ ಪಂದ್ಯಗಳನ್ನು ಪುಣೆಗೆ ವರ್ಗಾಯಿಸಲಾಯಿತು.

ಆದರೆ ಪುಣೆಯಲ್ಲೂ ಧೋನಿ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ನಡುವೆ ಅಭಿಮಾನಿಯೊಬ್ಬರು ಮಹಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆಯು ನಡೆಯಿತು.

ಚೆನ್ನೈ ಬ್ಯಾಟಿಂಗ್ ವೇಳೆ ಧೋನಿ ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿದಾಗ ಎಲ್ಲ ಭದ್ರತೆಯನ್ನು ಬೇಧಿಸಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯು ಧೋನಿ ಕಾಲಿಗೆರಗಿದರು.

Comments are closed.