ಕರಾವಳಿ

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ತಿಳಿದುಕೊಂಡಿರಬೇಕಾದ ನಿಯಮಗಳು.

Pinterest LinkedIn Tumblr

ಇಂದಿನ ಆಧುನಿಕ ಯುಗದಲ್ಲಿ ಎಲ್ಲರ ಚಿಂತೆ ತಮ್ಮ ಅತಿಯಾದ ತೂಕ. ಈ ಅತಿಯಾದ ತೂಕದಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕಾಗಿ ಎಲ್ಲರೂ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಹಲವಾರು ಸಮಸ್ಯೆಗಳಿಂದ ದೂರವಿರಬೇಕು. ಹಾಗೂ ಸುಂದರವಾಗಿ ಕಾಣಬೇಕು ಎಂದು. ತಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ವ್ಯಾಯಾಮ ಮಾಡುತ್ತಾರೆ. ಜಿಮ್ ಗೆ ಹೋಗುತ್ತಾರೆ. ಆದರೆ ತೂಕವನ್ನು ಇಳಿಸಲು ಜಿಮ್ ಗೆ ಹೋಗುವವರಿಗೆ ಕೆಲವು ನಿಯಮಗಳು ಇರುತ್ತವೆ. ಏಕೆಂದರೆ ಒಬ್ಬಾಬ್ಬರ ದೈಹಿಕ ಸ್ಥಿತಿಯು ಒಂದೊಂದು ರೀತಿಯಲ್ಲಿ ಇರುತ್ತದೆ.

ಆದ್ದರಿಂದ ಜಿಮ್ ಗೆ ಹೋಗುವ ಎಲ್ಲರು ಕೆಲವು ನಿಯಮಗಳನ್ನು ತಿಳಿದುಕೊಂಡಿರಬೇಕು ಅವುಗಳು ಏನು ಎಂದು ನೋಡೋಣ ಬನ್ನಿ…

ತೂಕವನ್ನು ಇಳಿಸಲು ನಾವು ಓಡುತ್ತೇವೆ. ರಸ್ತೆಯಲ್ಲಿ ಓಡಿದರು ಅಥವಾ ಟ್ರೆಡ್ ಮಿಲ್ ನಲ್ಲಿ ಓದಿದರು ಒಂದೇ ಇದು ನಮ್ಮ ಮಂಡಿಗೆ ಪರಿಣಾಮ ಬೀರುತ್ತದೆ. ಏಕೆಂದರೆ ನಮ್ಮ ಇಡೀ ದೇಹದ ಭಾರವು ಈ ಜಾಯಿಂಟ್ ಗಳ ಮೇಲೆ ಬೀಳುತ್ತಿರುತ್ತದೆ. ಅದಕ್ಕೆ ಈ ಮಂಡಿಗೆ ಒತ್ತಡ ಬೀಳುವುದನ್ನು ತಡೆಯಲು ಹೆಚ್ಚು ಹೊತ್ತು ಸತತವಾಗಿ ಓಡಬೇಡಿ.

ಆಬ್ ಯಂತ್ರಗಳು ಹೊಟ್ಟೆ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ: ನೀವು ನಿಮ್ಮ ಹೊಟ್ಟೆ ಭಾಗದಲ್ಲಿ ಶೇಖರಗೊಂಡ ಕೊಬ್ಬನ್ನು ತೆಗೆದುಹಾಕಲು ಸಾಕಷ್ಟು ಜಾಹೀರಾತುಗಳನ್ನು ನೋಡಿರಬಹುದು ಆದರೆ ಅದನ್ನೆಲ್ಲ ನಂಬಬೇಡಿ.ಆಬ್ ಮಷಿನ್ ನಿಮ್ಮ ಸ್ನಾಯುಗಳನ್ನು ಬಲಯುತವಾಗಿಸಲು ಸಹಕರಿಸುತ್ತದೆ,ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ವ್ಯಾಯಾಮದಿಂದ ಕೊಬ್ಬನ್ನು ಕರಗಿಸಬಹುದು.

ಏರೋಬಿಕ್ ವರ್ಕ್ ಔಟ್ ಮಾಡಿ ಮುಗಿಸಿದ ನಂತರವೂ ನಿಮ್ಮ ಚಯಪಚಯ ಕ್ರಿಯೆ ಹೆಚ್ಚುತ್ತದೆ ಇದು ಸ್ವಲ್ಪ ಮಟ್ಟಿಗೆ ನಿಜವಾದರೂ ನಾವು ಅಂದುಕೊಂಡಷ್ಟು ಅಲ್ಲ.ಏರೋಬಿಕ್ ಮಾಡಿದ ನಂತರವೂ ನಮ್ಮ ಚಯಾಪಚಯ ಕ್ರಿಯೆ ನಡೆಯುವುದು ಖಂಡಿತ ಆದರೆ ಅದರ ಗಾತ್ರ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ.ಬಹುಶಃ ನಾವು ದಿನದಲ್ಲಿ ಕೇವಲ 20 ರಷ್ಟು ಹೆಚ್ಚು ಕ್ಯಾಲೋರಿ ಕಳೆದುಕೊಳ್ಳಬಹುದು.

ಪ್ರತಿದಿನ ಈಜುವುದರಿಂದ (ಸ್ವಿಮ್ಮಿಂಗ್) ನಮ್ಮ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಒತ್ತಡ ಕಡಿಮೆ ಆಗುತ್ತದೆ,ಸ್ನಾಯುಗಳು ಬಲಿಷ್ಟವಾಗುತ್ತವೆ ಎಂಬುದು ಸತ್ಯ.ಆದಾಗ್ಯೂ ಇದು ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಹೆಚ್ಚು ಸಹಾಯಕವಲ್ಲ.ನೀರು ನಮಗೆ ಬೆಂಬಲವಾಗಿರುವ ಕಾರಣ ನಾವು ಸಾಕಷ್ಟು ಕಷ್ಟಪಡುವ ಅಗತ್ಯ ಸ್ವಿಮ್ಮಿಂಗ್ ನಲ್ಲಿ ಇರುವುದಿಲ್ಲ.ಸ್ವಿಮ್ಮಿಂಗ್ ಹೆಚ್ಚು ಹಸಿವಾಗುವಂತೆ ಮಾಡುವುದರಿಂದ ನಾವು ಕೊನೆಯಲ್ಲಿ ಅಧಿಕ ಆಹಾರ ಸೇವಿಸುವ ಸಂಭವ ಹೆಚ್ಚಿರುತ್ತದೆ.

ಎಲ್ಲಾ ರೀತಿಯ ಬೆನ್ನು ನೋವುಗಳನ್ನು ಯೋಗದಿಂದ ಹೋಗಲಾಡಿಸಬಹುದು ಸ್ನಾಯು ಸಂಬಂಧಪಟ್ಟ ಕಾರಣದಿಂದಾಗಿ ನಮಗೆ ಬೆನ್ನು ನೋವು ಬಂದಿದ್ದರೆ ಅದನ್ನು ಯೋಗಾದಿಂದ ಹೋಗಲಾಡಿಸಬಹುದು ಆದರೆ ಡಿಸ್ಕ್ ತೊಂದರೆಯಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ಯೋಗ ಪರಿಹಾರವಲ್ಲ.

ವ್ಯಾಯಾಮ ಮಾಡುವಾಗ ಬೆವರಲೇ ಬೇಕು ಎಂದು ತಿಳಿಯಬೇಡಿ.ಬೆವರದೇ ಕೂಡ ನಮ್ಮ ಕ್ಯಾಲೋರಿ ಕಡಿಮೆ ಆಗುವ ಸಾಧ್ಯತೆ ಇದೆ.ವಾಕಿಂಗ್ ಮತ್ತು ಕಡಿಮೆ ವ್ಯಾಯಾಮದಿಂದ ಇದು ಸಾಧ್ಯ.

ವ್ಯಾಯಾಮ ಸ್ವಲ್ಪ ಬ್ರೇಕ್ ತೆಗೆದುಕೊಂಡ ನಂತರ ಮತ್ತೆ ಮೊದಲಿನಂತೆಯೇ ಒಂದೇ ದಿನದಲ್ಲಿ ಹೆಚ್ಚು ವರ್ಕ್ ಔಟ್ ಮಾಡುವುದು ಈ ರೀತಿ ಎಂದೂ ಮಾಡಲು ಹೋಗಬೇಡಿ.ಇದರಿಂದ ನಮ್ಮ ದೇಹಕ್ಕೆ ಹಾನಿ ಸಂಭವಿಸುತ್ತದೆ.ನಾವು ವರ್ಕ್ ಔಟ್ ಮಾಡುತ್ತಿರುವಾಗ ಓಕೆ ಎಂದೆನಿಸಿದರೂ ಕೂಡ ನಂತರದಲ್ಲಿ ಇದು ನಮ್ಮ ದೇಹಕ್ಕೆ ಪರಿಣಾಮ ಬೀರುತ್ತದೆ.

ನಾವು ಸ್ವಲ್ಪ ದಿನ ಅಥವಾ ವಾರಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರೆ ನಂತರ ನಮಗೆ ವರ್ಕ್ ಔಟ್ ಮಾಡಲು ಹೆಚ್ಚು ಆಸಕ್ತಿ ಇರಬಹುದು ಆದರೆ ಈ ರೀತಿ ಒಂದೇ ದಿನದಲ್ಲಿ ಮಾಡುವುದರಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ.ಇದು ನಮಗೆ ತಕ್ಷಣಕ್ಕೆ ಯಾವುದೇ ಪರಿಣಾಮ ಬೀರದಿದ್ದರೂ ಕೂಡ ನಂತರದಲ್ಲಿ ಹೆಚ್ಚು ತೊಂದರೆಯಾಗಬಹುದು.

ಮಷಿನ್ ಗಳು ತಪ್ಪು ತಿಳಿಸುವ ಸಾಧ್ಯತೆ ಇಲ್ಲವೇ ಇಲ್ಲ ನಾವು ವ್ಯಾಯಾಮ ಮಾಡುವ ಮಷಿನ್ ನಮಗೆ ಬೇಕಾದ ಭಂಗಿ ತರಿಸುತ್ತದೆ ಎಂದು ತಿಳಿಯಬೇಡಿ,ಇದು ನಮ್ಮ ಎತ್ತರ ಮತ್ತು ದಪ್ಪದ ಆದಾರದ ಮೇಲೆ ಮಷಿನ್ ಅನ್ನು ಫಿಕ್ಸ್ ಮಾಡಿದ್ದರೆ ಮಾತ್ರ ಸಾಧ್ಯ.

ನೋವು ಒಳ್ಳೆಯದು ಹೆಚ್ಚು ನೋವಾದರೆ ಮಾತ್ರ ಹೆಚ್ಚು ತೂಕ ಕಳೆದುಕೊಳ್ಳಬಹುದು ಎಂಬುದನ್ನು ನಂಬಬೇಡಿ.ವರ್ಕ್ ಔಟ್ ಮಾಡಿದ ನಂತರ ಸ್ವಲ್ಪ ಮಟ್ಟಿನ ವೇದನೆ ಇರುವುದು ಸಹಜ ಆದರೆ ತುಂಬಾ ನೋವಾಗುವಂತೆ ವರ್ಕ್ ಔಟ್ ಮಾಡುವುದು ಕೂಡ ಸೂಕ್ತವಲ್ಲ.

ಇವುಗಳನ್ನು ತಪ್ಪದೆ ಪಾಲಿಸಬೇಕು ಆಗ ನಿಮ್ಮ ವ್ಯಾಯಾಮಕ್ಕು ಪ್ರತಿಫಲ ಸಿಗುತ್ತದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.

Comments are closed.