ಕರಾವಳಿ

ನೀತಿ ಸಂಹಿತೆ ಬಗ್ಗೆ ಸಚಿವ ಪ್ರಮೋದ್ ಗರಂ ಆಗಿದ್ದ್ಯಾಕೆ?

Pinterest LinkedIn Tumblr

ಉಡುಪಿ: ನೀತಿ ಸಂಹಿತೆ ಬಹಳ ಕಟುವಾಗಿ ಮಾಡಿದ್ದು ಇದರಿಂದ ಜನರೇ ಹೆದರಿಕೊಂಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತವನ್ನು ಕೇಳುವ ಸಂಪೂರ್ಣ ಸ್ವಾತಂತ್ರ್ಯ ನಮಗಿದೆ, ಆದರೆ ಈ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವ್ಯವಸ್ಥೆ ಆಗಬಾರದು. ನೀತಿಸಂಹಿತೆ ಉಲ್ಲಂಘನೆ ಮಾಡಬಾರದು ನಿಜ. ಆದ್ರೆ ಪ್ರಚಾರಗಳಿಗೆ ಅಡೆತಡೆ ತರಬಾರದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಚಲನ ವಲನಗಳನ್ನು ಕಂಟ್ರೋಲ್ ಮಾಡ್ತಾ ಇದ್ದಾರೆ. ಜನರಲ್ಲಿ ಚುನಾವಣೆ ಬಗ್ಗೆ ಉತ್ಸಾಹವಿದೆ, ಆದ್ರೆ ಉತ್ಸಾಹ ತೋರಿಸುವುದಕ್ಕೆ ಜನ ಹೆದರುತಿದ್ದಾರೆ. ಚುನಾವಣೆ ಅಂದ್ರೆ ಸೆಲಬ್ರೇಶನ್ ಆಫ್ ಪೀಪಲ್. ಆದ್ರೆ ಆ ಸೆಲಬ್ರೇಶನನ್ನೆ ಕುಂಠಿತ ಗೊಳಿಸುವ ವ್ಯವಸ್ಥೆ ನಡೆಯುತ್ತಿದೆ ಎಂದು ಗರಂ ಆಗಿದ್ದಾರೆ.

Comments are closed.