ಕರಾವಳಿ

ಸುಸಂಸ್ಕೃತ ವ್ಯಕ್ತಿ ವಿಧಾನಸಭೆ ಪ್ರವೇಶಿಸಲಿ, ಉತ್ತಮ ಮತದಾನವಾಗಲಿ: ದೇವಾಲಯಗಳಿಗೆ ಭೇಟಿ ನೀಡಿದ ಶೀರೂರು ಶ್ರೀ

Pinterest LinkedIn Tumblr

ಉಡುಪಿ: ರಾಜ್ಯದಲ್ಲಿ ಸುಸಂಸ್ಕೃತ ವ್ಯಕ್ತಿ ವಿಧಾನಸಭೆ ಪ್ರವೇಶಿಸಿ ರಾಜ್ಯದಲ್ಲಿ ಒಳ್ಳೆಯ ಬೆಳವಣಿಗೆ ಆಗುವ ನಿಟ್ಟಿನಲ್ಲಿ ಮತ್ತು ಶೇಕಡವಾರು ನೂರಕ್ಕೆ ನೂರರಷ್ಟು ಮತದಾನ ಆಗಬೇಕೆಂಬ ನಿಟ್ಟಿನಲ್ಲಿ ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನ, ಕುಂದಾಪುರದ ಕುಂದೇಶ್ವರ ದೇವಸ್ಥಾನ, ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ನೇರವೆರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಮಾತನಾಡಲ್ಲ. ಟಿಕೆಟ್ ವಿಚಾರ ಇನ್ನೂ ಕೂಡ ಅಂತಿಮಗೊಂಡಿಲ್ಲ. ಸ್ಪರ್ಧೆ ಖಚಿತ. ಚುನಾವಣೆಯ ಸ್ಪರ್ಧೆಯ ವಿಚಾರದಲ್ಲಿ ದೇವಸ್ಥಾನ ಭೇಟಿಯಲ್ಲ.ಸುಭೀಕ್ಷ ಮತದಾನ ನಡೆದು ನೂರು ಶೇಖಡಾ ಮತದಾನ ನಡೆಯಲಿ ಎಂಬ ಕೋರಿಕೆ ನಮ್ಮದು ಎಂದರು.

Comments are closed.