ಕುಂದಾಪುರ: ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಕುಂದಾಪುರ ತಾಲೂಕು ಪಂಚಾಯತಿ ಇಂಜಿನಿಯರ್ ರವಿಶಂಕರ್ ಎನ್ನುವವರ ಮನೆ ಮೇಲೆ ಮಂಗಳವಾರ ಎಸಿಬಿ ದಾಳಿ ನಡೆಸಿದ್ದು ಈ ತಪಾಸಣೆ ಕಾರ್ಯ ಬುಧವಾರದವರೆಗೂ ನಡೆದಿತ್ತು.
ರವಿಶಂಕರ್ ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನು ಹಾಗೂ ಲಾಕರ್ ಪರಿಶೀಲನೆ ಕಾರ್ಯ ನಡೆದಿದ್ದು ಲಾಕರ್ ತೆರದ ಎಸಿಬಿ ಅಧಿಕಾರಿಗಳಿಗೆ 18 ಲಕ್ಷ ನಗದು, 800 ಗ್ರಾಂ ಬಂಗಾರ ಪತ್ತೆ. ರವಿಶಂಕರ್ ಮನೆ ಹಾಗೂ ಲಾಕರ್ ಪರಿಶೀಲನೆ ವೇಳೆ ಒಟ್ಟು ಸುಮಾರು 25 ಲಕ್ಷಕ್ಕೂ ಅಧಿಕ ಅಭರಣ, 20 ಲಕ್ಷ ಅಂದಾಜು ನಗದು ಪತ್ತೆಯಾಗಿದೆ.
ಪಶ್ಚಿಮ ವಲಯದ ಎಸ್ಪಿಯಾಗಿರುವ ಶೃತಿ ನೇತೃತ್ವದಲ್ಲಿ ಲಾಕರ್ ತೆರೆಯಲಾಗಿದ್ದು ಕಾರ್ಯಾಚರಣೆಯಲ್ಲಿ ಮಂಗಳೂರು ಮತ್ತು ಉಡುಪಿ ಅಧಿಕಾರಿಗಳು ಭಾಗಿಯಾಗಿದ್ದರು. ಮಂಗಳವಾರ ನಡೆದ ದಾಳಿ ವೇಳೆ ಮನೆಯಲ್ಲಿ ಅಪಾರ ದಾಖಲೆ, ಚಿನ್ನ, ಕ್ಯಾಶ್, 4 ಸೈಟ್ ದಾಖಲೆ ಪತ್ರ, ಲಕ್ಷಾಂತರ ನಗದು 250 ಗ್ರಾಂ ಚಿನ್ನ ಪತ್ತೆಯಾಗಿತ್ತು.
ಇದನ್ನೂ ಓದಿರಿ:
ಎಸಿಬಿ ಬಲೆಗೆ ಬಿದ್ದ ಕುಂದಾಪುರ ತಾ.ಪಂ ಇಂಜಿನಿಯರ್: ಏಕಕಾಲಕ್ಕೆ ಮೂರು ಕಡೆ ದಾಳಿ!
Comments are closed.