ಕರಾವಳಿ

ಸ್ವೀಪ್ ಜಾಗೃತಿಗಾಗಿ ಯುವಜಾಥಾ: ಸಾವಿರಾರು ವಿದ್ಯಾರ್ಥಿಗಳಿಂದ ಬೃಹತ್ ಸಹಿ ಸಂಗ್ರಹ

Pinterest LinkedIn Tumblr

ಉಡುಪಿ: ಪ್ರಜಾಪ್ರಭುತ್ವ ವ್ಯವಸೆಯಲ್ಲಿ ಮತದಾನದ ಮಹತ್ವವನ್ನು ಅರಿತು ಅರ್ಹ ಮತದಾರರೆಲ್ಲರೂ ಮತದಾನ ಮಾಡಿ ಎಂದು ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ಹೇಳಿದರು.

ಉಡುಪಿ ನಗರದ ಕ್ಲಾಕ್ ಟವರ್‌ನಲ್ಲಿ ವಿವಿಧ ಕಾಲೇಜುಗಳ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಮಾನವ ಸರಪಳಿ ಮತ್ತು ವರ್ಣರಂಜಿತ ಜಾಥಾಕ್ಕೆ ಚಾಲನೆ ನೀಡಿದ ಸಿ‌ಇ‌ಒ ಅವರು, ಪ್ರತಿದಿನ ಜಿಲ್ಲೆಯಲ್ಲಿ ಸ್ವೀಪ್ ಸಮಿತಿಯಿಂದ ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುವುದು ಎಂದ ಅವರು, ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಯುವಶಕ್ತಿ ಜಾಗೃತಿಯಾದರೆ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣ ಸಾಧ್ಯ ಮೇ 12 ಮತದಾನದ ದಿನ ಅಂದು ಪ್ರಜಾಪ್ರಭುತ್ವದ ಹಬ್ಬ ಪ್ರತಿಯೊಬ್ಬರು ಮರೆಯದೆ ಮತದಾನ ಮಾಡಿ ಎಂದು ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಕೋಟ್ಯಾನ್ ಕರೆ ನೀಡಿದರು.

ತೆಂಕನಿಡಿಯೂರು ಕಾಲೇಜಿನ ವಿದ್ಯಾರ್ಥಿನಿ ವಿಜೇತಾ ಶೆಟ್ಟಿ ಚುನಾವಣೆಯ ಮಹತ್ವದ ಬಗ್ಗೆ ಮಾತನಾಡಿದರು. ನೆರೆದ ವಿದ್ಯಾರ್ಥಿಗಳಿಂದ ಬೃಹತ್ ಸಹಿ ಸಂಗ್ರಹ ಅಭಿಯಾನ, ಭಿತ್ತಿಪತ್ರಗಳ ಮೂಲಕ ಮತದಾನದ ಮಹತ್ವ ಸಾರುವ ಘೋಷವಾಕ್ಯಗಳು ನೆರೆದವರ ಮನಸೆಳೆಯಿತು.

ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರುಗಳು, ವಿವಿಧ ಇಲಾಖೆಯ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡರು. ಕ್ಲಾಕ್‌ಟವರ್‌ನಿಂದ ಟೌನ್ ಹಾಲ್‌ನ ವರೆಗೆ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು. ಸಾಂಸ್ಕೃತಿಕ ಮೆರವಣಿಗೆ, ಕಲಾ ತಂಡಗಳು ನೋಡುಗರ ಮನಸೆಳೆಯಿತು.

Comments are closed.