ಕರಾವಳಿ

‘ಕಾರ್ಕಳ ಕ್ಷೇತ್ರದಿಂದ ಟಿಕೆಟ್ ನೀಡಿ’: ಉದಯ ಕುಮಾರ್ ಶೆಟ್ಟಿ ಪರ ಕಾರ್ಯಕರ್ತರ ಬ್ಯಾಟಿಂಗ್

Pinterest LinkedIn Tumblr

ಉಡುಪಿ: ಕಾರ್ಕಳ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಗೊಂದಲ ಇನ್ನೂ ನಿಂತತ್ತಿಲ್ಲ .ಇತ್ತಿಚೇಗಷ್ಟೇ…ವೀರಪ್ಪ ಮೊಯ್ಲಿ ಹಾಗೂ ಅವರ ಪುತ್ರ ಹರ್ಷಾ ಮೋಯಲಿ ಟಿಕೆಟ್ ವಿಚಾರವಾಗಿ ಮಾಡಿದ್ದ ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಹರ್ಷಾ ಮೋಯಿಲಿ ಕಾರ್ಕಳ ಕ್ಷೇತ್ರದ ಸ್ಪರ್ಧೆಯಿಂದ ಇದೀಗ ಹಿಂದೆ ಸರಿದ್ದಿದ್ದಾರೆ. ಆದ್ರೂ ಕಾರ್ಕಳದಲ್ಲಿ ಟಿಕೆಟ್ ಯಾರಿಗೆ ಅನ್ನೋದನ್ನ ಇನ್ನೂ ಕೂಡ ಹೈಕಾಮಾಂಡ್ ಘೋಷನೆ ಮಾಡಿಲ್ಲ.ಇತ್ತ ಕಾಂಗ್ರೆಸ್ಸಿನ ಒಂದಷ್ಟು ಕಾರ್ಯಕರ್ತರು ಮುನಿಯಾಲು ಉದಯಕುಮಾರ್ ಶೆಟ್ಟಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಹರ್ಷಾ ಮೊಯಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ,ಅದ್ರೂ ಇಷ್ಟರವರೆಗೆ ಅಭ್ಯರ್ಥಿ ಘೋಷಣೆಯಾಗದಿರುವುದು ಕಾರ್ಯಕರ್ತರಲ್ಲಿ ಬೇಸರ ತಂದಿದೆಯಂತೆ. ಕಾರ್ಕಳದಲ್ಲಿ ಹಾಲಿ ಶಾಸಕ ಪ್ರಬಲರಾಗಿದ್ದು ,ಸುನೀಲ್ ಕುಮಾರನ್ನು ಸೋಲಿಸಲು ಉದಯ್ ಕುಮಾರ್ ಶೆಟ್ಟಿಯೇ ಸಮರ್ಥ ಅಭ್ಯರ್ಥಿ ಎನ್ನುವುದು ಕಾರ್ಯಕರ್ತರ ವಾದ.

ಕಾರ್ಕಳದಲ್ಲಿ ಕಾಂಗ್ರೆಸ್ ಅಳಿವಿನ ಹಂತದಲ್ಲಿದ್ದಾಗ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಪಕ್ಷದ ಪರ ಕೆಲಸ ಮಾಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ಈ ಕಾರಣದಿಂದ ಕಾರ್ಯಕರ್ತರ ಒಲವು ಉದಯ್ ಕುಮಾರ್ ಶೆಟ್ಟಿ ಪರವಾಗಿದೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಕಾರ್ಯರ್ಕರ್ತರು ತಟಸ್ಥ ನಿಲವು ಹೊಂದಲಿದ್ದಾರಂತೆ.

ಹೀಗಾಗಿ ಕಾರ್ಯಕರ್ತರಲ್ಲಿ ಗೊಂದಲದ ವಾತವರಣ ಸೃಷ್ಟಿಸದೆ ಹೈಕಮಾಂಡ್ ಕಾರ್ಕಳ ಅಭ್ಯರ್ಥಿ ಘೋಷಣೆಯನ್ನ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

Comments are closed.