ಕರಾವಳಿ

ಶಿವಮೊಗ್ಗದಲ್ಲಿ ರಸ್ತೆ ಅಪಘಾತ; ಕುಂದಾಪುರ ಮೂಲದ ಹೆಡ್‌ಕಾನ್‌ಸ್ಟೆಬಲ್ ರೋನಿ ಡಿಸೋಜಾ ಮೃತ್ಯು

Pinterest LinkedIn Tumblr

ಕುಂದಾಪುರ/ಶಿವಮೊಗ್ಗ: ಶಿವಮೊಗ್ಗ ಬಸ್ಸು ನಿಲ್ದಾಣದ ಸಮೀಪ ಹೊಂಡಾ ಆಕ್ಟಿವಾ ಸ್ಕೂಟರ್ ಮತ್ತು ತೈಲ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕುಂದಾಪುರ ಖಾರ್ವಿಕೇರಿ ನಿವಾಸಿಯಾದ ರೊನಾಲ್ಡ್ ಡಿ’ಸೋಜಾ (ರೋನಿ ಡಿಸೋಜಾ) ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತ ರೋನಿ ಡಿಸೋಜಾ ಅವರು ಶಿವಮೊಗ್ಗದ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಾ ಶಿವಮೊಗ್ಗದಲ್ಲೆ ನೆಲೆಸಿದ್ದರು. ಬೆಳಿಗ್ಗೆ ಡ್ಯುಟಿಗೆ ಹಾಜರಾಗಲು ಸ್ಕೂಟರನಲ್ಲಿ ತೆರಳುತಿದ್ದ ಸಂದರ್ಭದ ರೋನಿ ನೆಡೆಸುತಿದ್ದ ಸ್ಕೂಟರ್ ಸ್ಕಿಡ್ ಆಗಿ ತೈಲ ಟ್ಯಾಂಕರ್‌ಗೆ ಬಡಿದು ಈ ದಾರುಣ ಘಟನೆ ನೆಡೆದಿದೆ.

ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಪತ್ನಿ ಮೀನಾ ಡಿಸೋಜಾ, ವಿದ್ಯಾಭಾಸ ಮಾಡುತ್ತಿರುವ ಪುತ್ರ ರೋಹಿತ್ ಮತ್ತು ಮಗಳು ರವೀನಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Comments are closed.