
ಮಂಗಳೂರು : ಮಂಗಳೂರಿನ ಜನಪ್ರೀಯ ರೇಡಿಯೋ ಸ್ಟೇಷನ್ ರೆಡ್ ಎಫ್ ಎಂ ಕಳೆದ ವರ್ಷ ಮಹಿಳಾ ದಿನಾಚರಣೆಯ ಪ್ರಯುಕ್ತ ಎಂಟು ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸೂಪರ್ ಸಾಧಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಈ ವರ್ಷ ಮಹಿಳಾ ದಿನಾಚರಣೆಯ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳೆಯರಿಗಾಗಿ ಹೊಲಿಗೆ ಯಂತ್ರವನ್ನು ವಿತರಿಸಿದೆ.
ನಗರದ ಫೋರಮ್ ಫೀಝ ಮಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹತ್ತು ಮಂದಿ (ಮಹಿಳೆಯರಿಗೆ) ಫಲನುಭವಿಗಳಿಗೆ ಹೊಲಿಗೆಯಂತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕನ್ನಡ ಚಿತ್ರನಟಿ ಜಾಲಿ ಡೇಸ್ ಚಿತ್ರ ಖ್ಯಾತಿಯ ಐಶ್ವರ್ಯ ನಾಗ್ ಹಾಗು ಕೆಎಂಸಿ ಹಾಸ್ಪಿಟಲ್ ನ ಅಸ್ಸೊಸಿಯೆಟ್ ಡೀನ್ ,ಮಕ್ಕಳ ತಜ್ಞೆ ಪ್ರೊಫೆಸರ್ ನೂತನ್ ಕಾಮತ್ ಪಾಲ್ಗೊಂಡಿದ್ದರು.
ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ನಟಿ ಐಶ್ವರ್ಯ ನಾಗ್ ಅವರು, ಮಹಿಳೆಯರು ಸ್ವಾವಲಂಬಿಯಾಗಬೇಕು ,ಬಡ ವ್ಯಕ್ತಿಯೊಬ್ಬನಿಗೆ ಹೊಟ್ಟೆ ತುಂಬಲು ಆಹಾರ ಕೊಡುವುದಕ್ಕಿಂತ ಅದನ್ನು ಸಂಪಾದಿಸುವ ಮಾರ್ಗವನ್ನು ಹೇಳಿಕೊಡಬೇಕು ಆಗಲೇ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಇಂತಹ ಸಾಮಾಜಿಕ ಸೇವಾಚಟುವಟಿಕೆಯಲ್ಲಿ ತೊಡಗಿರುವ ರೆಡ್ ಎಫ್ ಎಂ ಕಾರ್ಯ ಶ್ಲಾಘನೀಯ ಎಂದ ಅವರು ರೆಡ್ ಎಫ್ ಎಂ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ಹೊಲಿಗೆ ಯಂತ್ರ ಸ್ವೀಕರಿಸಿ ಮಾತಾಡಿದ ಜೂಲಿಯೆಟ್ ಕಾರ್ಲೊ ಅವರು, ರೆಡ್ ಎಫ್ ಎಂ ಯಾವಾಗ್ಲೂ ಕೇಳ್ತಾ ಇದ್ದೆ ,,ಈಗ ಅದೇ ನನ್ನ ಜೀವನಕ್ಕೆ ದಾರಿ ತೋರಿಸಿದೆ ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ರೆಡ್ ಎಫ್ ನ ಸ್ಟೇಷನ್ ಹೆಡ್ ಶೋಭಿತ್ ಶೆಟ್ಟಿ ,ಸೀನಿಯರ್ ಪ್ರೊಡ್ಯೂಸರ್ ಯಶ್ ರಾಜ್ ,ಹೆಚ್ ಆರ್ ಅಡ್ಮಿನ್ ಶಿವಪ್ರಸಾದ್ ,ಆರ್ ಜೆ ಗಳಾದ ಆರ್ ಜೆ ಪ್ರಸನ್ನ ,ಆರ್ ಜೆ ತ್ರಿಶೂಲ್ , ನೆಟ್ವರ್ಕ್ ಇಂಜಿನಿಯರ್ ಅಶ್ವಿನ್ ಭಟ್ ,ಅಕೌಂಟಿಂಗ್ ವಿಭಾಗದ ಶ್ರೀನಿಧಿ ರಾವ್ ಹಾಗು ಅಜಿತ್ ಕಾಟಿಪಳ್ಳ ಉಪಸ್ಥಿತರಿದ್ದರು. ಆರ್ ಜೆ ನಯನಾ ಕಾರ್ಯಕ್ರಮ ನಿರೂಪಿಸಿದರು
Comments are closed.