ಕರ್ನಾಟಕ

ಬೆಂಗಳೂರು: ಗರ್ಭಿಣಿಯಾಗಿಲ್ಲ ಎಂದು ಪತ್ನಿಗೆ ಅಶ್ಲೀಲ ವೀಡಿಯೊ ತೋರಿಸಿ ವೈದ್ಯ ಪತಿಯಿಂದ ಕಿರುಕುಳ ! ಕೊನೆಗೂ ಪತ್ನಿ ಮಾಡಿದ್ದೇನು…?

Pinterest LinkedIn Tumblr

ಬೆಂಗಳೂರು: ಪತ್ನಿ ಗರ್ಭಿಣಿಯಾಗಲಿಲ್ಲ ಎಂಬ ಕಾರಣಕ್ಕೆ ಆಕೆಗೆ ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ ವೈದ್ಯ ಪತಿ ವಿರುದ್ಧ ದೂರು ದಾಖಲಾಗಿದೆ.

ಈ ಸಂಬಂಧ ನೊಂದ ಪತ್ನಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಆದರೆ ಪ್ರಕರಣ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿನ್ನೆಲೆಯಲ್ಲಿ ದೂರನ್ನು ದಾವಣಗೆರೆ ಮಹಿಳಾ ಪೊಲೀಸ್ ಠಾಣಗೆ ವರ್ಗಾಯಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಜುನಾಥ್ ಕಿರುಕುಳ ನೀಡಿದ ವೈದ್ಯ ಪತಿ. ಮಂಜುನಾಥ್ ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದನು. ಆದ್ರೆ ಮದುವೆಯಾಗಿ ಮೂರು ತಿಂಗಳಾದ್ರು ಪತ್ನಿ ಗುಡ್ ನ್ಯೂಸ್ ನೀಡಿಲ್ಲ ಅಂತಾ ಸೆಕ್ಸ್ ಫಿಲ್ಮ್ ತೋರಿಸಿ ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ ಅಂತಾ ಪತ್ನಿ ಆರೋಪಿಸಿದ್ದಾರೆ.

ವೈದ್ಯ ಡಾ. ಮಂಜುನಾಥ್ ವಿರುದ್ಧ ವರದಕ್ಷಿಣೆ ಕೇಸು ದಾಖಲಿಸಲಾಗಿದೆ, ಮಂಜುನಾಥ್ ಪತ್ನಿ ಆತನಿಗಿಂತ 15 ವರ್ಷ ವಯಸ್ಸಿನಲ್ಲಿ ಕಿರಿಯವರಾಗಿದ್ದಾರೆ. ಆಕೆಗೆ ಮಂಜುನಾಥ್ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಡ ಹಾಕುತ್ತಿದ್ದ ಎಂದು ಹೇಳಲಾಗಿದೆ, ಆದರೆ ಈ ಎಲ್ಲಾ ಆರೋಪಗಳನ್ನು ಮಂಜುನಾಥ್ ನಿರಾಕರಿಸಿದ್ದಾರೆ.

ಇನ್ನೂ ಪತ್ನಿಯ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಮಂಜುನಾಥ್ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.