ಕರಾವಳಿ

ಬಾಳಿಗ ಕೊಲೆ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ : ಹನುಮಂತ ಕಾಮತ್ ಆರೋಪ

Pinterest LinkedIn Tumblr

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ

ಮಂಗಳೂರು, ಮಾರ್ಚ್.28 : ಎರಡು ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಹನುಮಂತ ಕಾಮತ್ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಾಯಕ ಬಾಳಿಗ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ನರೇಶ ಶೆಣೈ ಅವರಿಗೂ ನನಗೂ ೨೫ ವರ್ಷಗಳ ಸ್ನೇಹ. ಒಬ್ಬ ವ್ಯಕ್ತಿಯ ಮೇಲೆ ಆರೋಪ ಬಂತು ಎಂದ ಮೇಲೆ ಆತನ ಗೆಳೆಯ ಅಥವಾ ಹಿತೈಷಿ ಕೂಡಾ ಭಾಗಿಯಾಗಿದ್ದಾನೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಪ್ರೊ.ನರೇಂದ್ರ ನಾಯಕ್ ಒಬ್ಬ ವಿಚಾರವಾದಿ ಮಾತ್ರವಲ್ಲ ಓರ್ವ ಪ್ರಾಧ್ಯಾಪಕರು ಕೂಡಾ. ಅವರು ಯಾರದೋ ಮಾತಿಗೆ ಬಲಿಯಾಗಿ ನನ್ನ ಹೆಸರನ್ನು ಪ್ರಕರಣದಲ್ಲಿ ಸೇರಿಸುವ ಪ್ರಯತ್ನ ಮಾಡುತ್ತಿರುವುದು ಶೋಭೆ ತರುವುದಿಲ್ಲ. ವಿನಾಯಕ ಬಾಳಿಗ ಹತ್ಯೆಯ ಬಗ್ಗೆ ನನಗೆ ನೋವಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ನೈಜ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು. ಹಾಗಂತ ಸಂಬಂಧ ಇಲ್ಲದ ನನ್ನ ಹೆಸರನ್ನು ಪ್ರಕರಣದಲ್ಲಿ ಅನಾವಶ್ಯಕವಾಗಿ ಎಳೆದು ತರುವ ಪ್ರಯತ್ನ ನಿಲ್ಲಬೇಕು. ಇಲ್ಲದಿದ್ದಲ್ಲಿ ನರೇಂದ್ರ ನಾಯಕರು ಹೇಳುವ ಶೈಲಿಯಲ್ಲಿಯೇ ಪ್ರತ್ಯುತ್ತರ ಕೊಡಬೇಕಾಗುತ್ತದೆ ಎಂದು ಹನಮಂತ ಕಾಮತ್ ಎಚ್ಚರಿಸಿದ್ದಾರೆ.

Comments are closed.