ಮಂಗಳೂರು, ಮಾರ್ಚ್..21 : ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಯಬೇಕು. ಇದರಿಂದ ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ.ಆರ್.ಎಜ್ಯುಕೇಶನ್ಟ್ರಸ್ಟ್(ರಿ) ನ ಸ್ಥಾಪಕಾಧ್ಯಕ್ಷರಾದ ಎಸ್. ಗಣೇಶ್ ರಾವ್ ಹೇಳಿದರು.
ಬುಧವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆದ ಕರಾವಳಿ ಕಾಲೇಜುಗಳ ಸಮೂಹದ ಅಂತರ್ ಕಾಲೇಜು ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವೀಯತೆಯೇ ದೊಡ್ಡ ಧರ್ಮ, ಇದಕ್ಕಿಂತ ಮಿಗಿಲಾದ ಧರ್ಮವೊಂದಿಲ್ಲ. ಕ್ರೀಡೆಗಳು ಜನರಲ್ಲಿ ಮನವೀಯತೆಯನ್ನು ಬೆಳೆಸುವುದರ ಮೂಲಕ ಸ್ವಸ್ಥ ಹಾಗೂ ಸೌಹಾರ್ಧಯುತ ಸಮಾಜ ನಿರ್ಮಿಸಲು ಸಹಕಾರಿಯಾಗಿದೆ. ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಕಾಲೇಜು ಕ್ರೀಡಾಕೂಟಗಳು ಉತ್ತಮ ವೇದಿಕೆ ಒದಗಿಸುತ್ತದೆ. ಕ್ರೀಡಾಕೂಟದ ಎಲ್ಲಾ ವಿಭಾಗಗಳಲ್ಲೂ ಭಾಗವಹಿಸಬೇಕು. ಸೋಲು ಗೆಲುವಿನ ಬಗ್ಗೆ ಚಿಂತಿಸಬಾರದು ಎಂದು ಗಣೇಶ್ ರಾವ್ ಹೇಳಿದರು.
ಕ್ರೀಡಾಕೂಟದಲ್ಲಿ 100ಮಿ., 200ಮಿ., 400ಮಿ., ಹಾಗೂ 800ಮೀಟರ್ ಮತ್ತು 4×100ರಿಲೆ ಶಾಟ್ ಪುಟ್, ಲಾಂಗ್ ಜಂಪ್, ಹೈಜಂಪ್, ಡಿಸ್ಕ್ತ್ರೋ ಮತ್ತು ಆಕರ್ಷಕ ಹಗ್ಗ ಜಗ್ಗಾಟ ಮೊದಲಾದ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದಲ್ಲಿ ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಶ್ರೀಮತಿ ಲತಾ. ಜಿ. ರಾವ್,. ಕರಾವಳಿ ಕಾಲೇಜುಗಳ ಸಮೂಹದ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕು. ಬಿನ್ಯಾ ನಿರೂಪಿಸಿದರು, ಕು. ನಿಶಾದ್ ಸ್ವಾಗತಿಸಿದರು ಹಾಗೂ ಕು. ಶೀತಲ್ ವಂದಿಸಿದರು.
__ Sathish Kapikad – Mob : 9035089084
Comments are closed.