ಕರಾವಳಿ

ಕೋಮು ಭಾವನೆ ಮೂಡಿಸುವುದು ಬಿಜೆಪಿ ಚಾಳಿ: ಉಡುಪಿಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ!

Pinterest LinkedIn Tumblr

ಉಡುಪಿ: ಬಿಜೆಪಿಯವರು ಧರ್ಮಗಳ ಜೊತೆ ದ್ವೇಷ ಸಾಧಿಸಲು ಯತ್ನಿಸ್ತಾರೆ. ಕೋಮುಭಾವನೆ ಕೆಡಿಸುವುದು ಬಿಜೆಪಿ ಚಾಳಿಯಾಗಿದ್ದು ಉಡುಪಿ ನಾಲ್ಕು ಬ್ಯಾಂಕ್ ಗಳ ಜನಕನಾಗಿದೆ. ಕಾಂಗ್ರೆಸ್ ಸರ್ಕಾರ ದೇಶಕ್ಕೆ ಬ್ಯಾಂಕನ್ನು ವಿಸ್ತರಿಸಿತು. ಸದ್ಯ ಕೇಂದ್ರ ಸರ್ಕಾರ ಬ್ಯಾಂಕ್ ವ್ಯವಸ್ಥೆ ಯನ್ನು ಕುಲಗೆಡಿಸಿದೆ, ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳ 2.50 ಲಕ್ಷ ಕೋಟಿ ಹಣ ಮನ್ನಾ ಮಾಡಿದ್ದು ರೈತರ ಸಾಲ ಮನ್ನಾ ಮಾಡುವ ಮನಸ್ಸು ಇವರಿಗಿಲ್ಲ ಎಂದು ಮೋದಿ- ಜೇಟ್ಲಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಮೋದಿಯವರು ಬಸವಣ್ಣನ್ನು ಹೊಗಳುತ್ತೀರಿ ಆದರೆ ಬಡವ ಬಲ್ಲಿದರ ಬಗ್ಗೆ ಅವರಿಗೆ ಕಾಳಜಿ ಇಲ್ಲ, 15 ಲಕ್ಷ ಬೇಡ 10 ರುಪಾಯಿ ಹಾಕಿ. ಮೊದಲು ಮೋದಿಜೀ ನೀವು ನುಡಿದಂತೆ ನಡೆಯಿರಿ. ಎಷ್ಟು ಯುವಕರಿಗೆ ಮೋದಿ ಕೆಲಸ ಕೊಟ್ಟರು? ಎಂದು ಭಾಷಣದುದ್ದಕ್ಕೂ 10 ಬಾರಿ ನುಡಿದಂತೆ ನಡೆ ನುಡಿದಂತೆ ನಡೆಯಿರಿ ಎಂದು ಮೋದಿಯವರ ಉಲ್ಲೇಖ ಮಾಡಿದರು.

ರಾಜ್ಯ ಸರ್ಕಾರದ ಸಾಧನೆ….
ಅನ್ನಭಾಗ್ಯ, ನೀರಾವರಿ ಯೋಜನೆ ಉಲ್ಲೇಖ ಮಾಡಿದ ರಾಹುಲ್ ಗಾಂಧಿ, ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅತ್ಯ್ಮೂಲ್ಯ ಕೊಡುಗೆ ನೀಡಿದೆ. ನಾವು ನುಡಿದಂತೆ ನಡೆಯುತ್ತೇವೆ. ಎಂದಿಗೂ ಕಾಂಗ್ರೆಸ್ ದ್ವೇಷ ಹುಟ್ಟಿಸುವುದಿಲ್ಲ. ಮಾಹಿತಿ ತಂತ್ರಜ್ಞಾನ ಕ್ರಾಂತಿ ಕರ್ನಾಟಕದಿಂದ ಆಗಿದೆ, ಕರ್ನಾಟಕವು ನಮ್ಮ ದೇಶಕ್ಕೆ ಮಾದರಿ ರಾಜ್ಯವಾಗಿದ್ದು ಉಡುಪಿ ಊಟ ವಿಶ್ವದಾದ್ಯಂತ ಸಿಗುತ್ತದೆ ಎಂದರು.

ಹೇಳಿದ್ದನ್ನು ಮಾಡಬೇಕು: ರಾಹುಲ್
ಬಿಸಿಲಿನಲ್ಲಿ ನಿಂತ ನಿಮಗೆ ಹೃದಯಾಂತರಾಳದ ಧನ್ಯವಾದ ಹೇಳುವೆ. ಇದು ನಾರಾಯಣ ಗುರುಗಳ ಕರ್ಮಭೂಮಿಯಾಗಿದ್ದು ನಾವೆಲ್ಲರೂ ಒಂದೇ ಎಂಬ ಗುರುಗಳ ಮಂತ್ರದೊಂದಿಗೆ ನಾರಾಯಣ ಗುರುಗಳ ತತ್ವ ಆದರ್ಶ ನಮಗೆ ಪ್ರೇರಣೆಯಾಗಿದೆ. ಎಲ್ಲರನ್ನೂ ಗುರುಗಳು ಒಟ್ಟಾಗಿ ಕೊಂಡೊಯ್ದವರು, ಬಸವಣ್ಣನವರ ವಚನ ನುಡಿದಂತೆ ನಡೆ. ಹೇಳಿದ್ದನ್ನು ಮಾಡು ಎಂಬುದು ಬಸವಣ್ಣದ ವಚನದ ಅರ್ಥ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ….
ಐದು ವರ್ಷ ನಾವು ನುಡಿದಂತೆ ನಡೆದಿದ್ದು ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಸದ್ಯ ದೇಶದಲ್ಲಿ ವಿಷಮ ವಾತಾವರಣ ಸೃಷ್ಟಿಯಾಗಿದೆ. ದೇಶ ಆರ್ಥಿಕವಾಗಿ ಅಲ್ಲೋಲ‌ಕಲ್ಲೋಲ ಆಗಿದ್ದು ನೋಟು ಅಮಾನ್ಯದಿಂದ ಯಾವ ಲಾಭವೂ ಆಗಿಲ್ಲ, ಕಪ್ಪುಹಣ ಬರಲಿಲ್ಲ, ಭೃಷ್ಟಾಚಾರ ನಿಂತಿಲ್ಲ, ಭಯೋತ್ಪಾದನೆ ಕಡಿಮೆಯಾಗಿಲ್ಲ, ಬಡ ಸಾಮಾನ್ಯ ಜನರು ನಿದ್ದೆಗೆಟ್ಟಿದ್ದಾರೆ, ದೊಡ್ಡ ಕುಳಗಳು ಸಾಯಲಿಲ್ಲ, ಬಡ ವರ್ತಕರು, ವ್ಯಾಪಾರಿಗಳಿಗೆ ಸಂಕಟ, ನೋಟು ಅಮಾನ್ಯ ನೆಪದಲ್ಲಿ ಕಪ್ಪು ಹಣ ವೈಟ್ ಆಯ್ತು ಅಷ್ಟೇ ಎಂದು ಆರೋಪಿಸಿದ ಸಿಎಂ ಸಿದ್ದರಾಮಯ್ಯ ಕೇಂದ್ರದಲ್ಲಿ ಯೂ ಟರ್ನ್ ಸರ್ಕಾರವಿದ್ದು ಪ್ರಧಾನಿ ಮೋದಿ ಸುಳ್ಳುಗಾರ ಎಂದು ಆರೋಪಿಸಿ ಮೋದಿ ಜಾತಿ ಧರ್ಮ ಸಂಘರ್ಷದ ಲಾಭ ಪಡೆಯಲು ಮುಂದಾಗಿದ್ದಾರೆ, ಕರಾವಳಿಯನ್ನು ಕೋಮುವಾದದ ಪ್ರಯೋಗಾಲಯ ಮಾಡಿದ್ದಾರೆ ಎಂದರು.

Comments are closed.