ಕರಾವಳಿ

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಹಂಗಾಮಿ ಅಧ್ಯಕ್ಷರಾಗಿ ದೀಪಕ್ ಪೂಜಾರಿ

Pinterest LinkedIn Tumblr

ಸುರತ್ಕಲ್ : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಹಂಗಾಮಿ ಅಧ್ಯಕ್ಷರಾಗಿ ದೀಪಕ್ ಪೂಜಾರಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಹಾಲಿ ಅಧ್ಯಕ್ಷ ಕೇಶವ ಸನಿಲ್ ಅವರು ಇತ್ತೀಚಿಗೆ ಅಪಘಾತವೊಂದರಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರ ಗುಣಮುಖರಾಗುವ ಮೂಲಕ ಮತ್ತೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಲಿದ್ದಾರೆ. ಚುನಾವಣೆ ಸಮೀಪಿಸುತ್ತಿರುವದರಿಂದ ಪಕ್ಷವನ್ನು ಮುನ್ನಡೆಸಲು ಕಾರ್ಪೊರೇಟರ್ ದೀಪಕ್ ಪೂಜಾರಿ ಅವರಿಗೆ ಶಾಸಕ ಮೊದಿನ್ ಬಾವಾ ಚುಕ್ಕಾಣಿ ನೀಡಿದ್ದಾರೆ.

ಕಾವೂರು ಪ್ರದೇಶದಲ್ಲಿ ಉತ್ತಮವಾಗಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಹಾಗೂ ಉತ್ತಮ ಸಂಘಟನಾ ಶಕ್ತಿಯನ್ನು ಹೊಂದಿರುವ ದೀಪಕ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಶಾಸಕ ಮೊದಿನ್ ಬಾವಾ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಎಲ್ಲಾ ಪದಾಧಿಕಾರಿಗಳನ್ನು ಒಗ್ಗೂಡಿಸಿ ಜತೆಯಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲಿದ್ದೇನೆ ಎಂದು ದೀಪಕ್ ಪೂಜಾರಿ ಭರವಸೆ ನೀಡಿದರು.

ಶಾಸಕ ಮೊದಿನ್ ಬಾವಾ ಅವರು ಮಾತನಾಡಿ ದೀಪಕ್ ಪೂಜಾರಿ ಯುವ ಕಾರ್ಪೊರೇಟರ್ ಜತೆಗೆ ಅನುಭವ ಹೊಂದಿದ್ದಾರೆ. ಪಕ್ಷವನ್ನು ಬೆಳೆಸುವುದರ ಜತೆಗೆ ಸಂಘಟನೆಯನ್ನೂ ಮಾಡುವ ಮೂಲಕ ಚುನಾವಣೆ ಎದುರಿಸಲು ಸಮರ್ಥವಾಗಿ ಯೋಜನೆ ರೂಪಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಭರವಸೆ ವ್ಯಕ್ತ ಪಡಿಸಿದರು.

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್ ಕೆ., ಸುರೇಂದ್ರ ಕಾಂಬ್ಳಿ ಕುಮಾರ್ ಮೆಂಡನ್,ಸೊಹೈಲ್ ಕಂದಕ್, ಕೆ.ಸದಾಶಿವ ಶೆಟ್ಟಿ, ಹಿಲ್ಡಾ ಆಳ್ವ,ಶಕುಂತಳಾ ಕಾಮತ್,ಬಶೀರ್ ಅಹ್ಮದ್,ಗಿರೀಶ್ ಆಳ್ವ, ಮಂಗಳೂರು ಬಾವಾ ,ಹೇಮಂತ್, ಮತ್ತಿತರರು ಉಪಸ್ಥಿತ ರಿದ್ದರು.

Comments are closed.